More

    ಪೌಷ್ಟಿಕ ಆಹಾರದಿಂದ ಮಕ್ಕಳ ಬೆಳವಣಿಗೆ

    ಸವಣೂರ: ಖನಿಜಾಂಶ ಹಾಗೂ ನಾರಿನಾಂಶವುಳ್ಳ ಪೌಷ್ಟಿಕ ಆಹಾರ ನೀಡುವುದರಿಂದ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್.ವಿ. ಇಚ್ಚಂಗಿಮಠ ಹೇಳಿದರು.

    ತಾಲೂಕಿನ ಮಂತ್ರೋಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಹೆರಿಗೆಯಾದ ತಕ್ಷಣ ಮಕ್ಕಳಿಗೆ ಹಾಲುಣಿಸಿದಾಗ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದಾಗಿ ಬಳಲುತ್ತಿರುವ ಕಾರಣದಿಂದಾಗಿ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

    ಶಿಕ್ಷಕಿ ಎಸ್.ಸಿ. ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಗುರುಮಾತೆ ಅನ್ನಪೂರ್ಣಾ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಜೆ.ಎಚ್. ಬೇಲೇರಿ, ಆರ್.ಎನ್. ಸಜ್ಜನಶೆಟ್ಟರ, ನಿಂಗರಾಜ ಲಮಾಣಿ, ಕಾಂತೇಶ ಮರಳಿಹಳ್ಳಿ, ಸಬಾನಾ ಪರೀಟ್, ನಿರ್ಮಲಾ ಬಡಿಗೇರ, ಅಡುಗೆ ಸಿಬ್ಬಂದಿ ಮಂಜುಳಾ ಕಾಳಪ್ಪನವರ, ದಿಲಶಾದಭೀ ನದಾಫ್, ಕುಸುಮಾ ತಳವಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts