More

    ಲಕ್ಕಿ ಡ್ರಾನಲ್ಲಿ 16 ಕೋಟಿ ರೂ. ಔಷಧ ಪಡೆದ ಹೆಣ್ಣುಮಗು! ಬಡ ಪಾಲಕರ ಪ್ರಾರ್ಥನೆಗೆ ಒಲಿಯಿತು ಅದೃಷ್ಟ!

    ನವದೆಹಲಿ : ಅಪರೂಪದ ಆನುವಂಶೀಯ ಖಾಯಿಲೆಯಾದ ಸ್ಪೈನಲ್​ ಮಸ್ಕುಲರ್​ ಅಟ್ರೊಫಿ(ಎಸ್​ಎಂಎ) ಇರುವ ಮಗುವಿಗೆ ಅಗತ್ಯವಾಗಿದ್ದ 16 ಕೋಟಿ ರೂ. ಮೌಲ್ಯದ ಔಷಧವು ಲಕ್ಕಿ ಡ್ರಾನಲ್ಲಿ ಸಿಕ್ಕಿರುವುದು ವರದಿಯಾಗಿದೆ. ದೆಹಲಿಯ ಒಂದು ವರ್ಷದ ಹೆಣ್ಣುಮಗು ಜೈನಬ್​ಗೆ ಜೋಲ್​ಗೆನ್​ಸ್ಮಾ ಎಂಬ ಈ ದುಬಾರಿ ಔಷಧಿಯನ್ನು ನಿನ್ನೆ ನೀಡಿ ಉಪಚರಿಸಲಾಗಿದೆ.

    ನ್ಯೂರೋಮಸ್ಕುಲರ್ ಡಿಸಾರ್ಡರ್​ ಆದ ಎಸ್​ಎಂಎ, ವಯಸ್ಸಿನೊಂದಿಗೆ ಹದಗೆಡುವಂಥ ಖಾಯಿಲೆ. ಇದಕ್ಕೆ ಜೀನ್ ಥೆರಪಿಯಿಂದ ಉಪಚರಿಸಬೇಕಾಗಿದ್ದು, ಜೋಲ್​ಗೆನ್​​ಸ್ಮಾ ಎಂಬ 16 ಕೋಟಿ ರೂ. ಮೌಲ್ಯದ ಸಿಂಗಲ್ ಡೋಸ್​ ಔಷಧಿಯನ್ನು ಬಳಸಲಾಗುತ್ತದೆ. ದುಬಾರಿ ಬೆಲೆಯಿಂದಾಗಿ ಹಲವು ಸಣ್ಣ ವಯಸ್ಸಿನ ಬಡ ರೋಗಿಗಳು ಚಿಕಿತ್ಸೆ ಪಡೆಯಲಾಗದೆ ಮೃತಪಡುವುದು ಕಂಡುಬಂದಿದೆ.

    ಇದನ್ನೂ ಓದಿ: ಆರು ವರ್ಷ ಕರ್ನಾಟಕದಲ್ಲಿ ಸದ್ದುಮಾಡಿದ್ದ ‘ಅಗ್ನಿಸಾಕ್ಷಿ’ಯೀಗ ಮಹಾರಾಷ್ಟ್ರದಲ್ಲಿ ‘ಸೋನಾಚಿ ಪಾವಲೆ’

    2018 ರಲ್ಲಿ ತಮ್ಮ ಮೊದಲನೇ ಮಗುವನ್ನು ಇದೇ ಖಾಯಿಲೆಗೆ ಕಳೆದುಕೊಂಡಿದ್ದ ಜೈನಬ್​ನ ತಂದೆ ಅಬ್ದುಲ್ಲಾ, ದುಬಾರಿ ಜೀನ್ ಥೆರಪಿಯ ಯಶಸ್ಸಿನ ಬಗ್ಗೆ ಕೇಳಿದ್ದರು. ಆರ್ಥಿಕವಾಗಿ ಅನುಕೂಲಸ್ಥರಲ್ಲದ್ದರಿಂದ ತಮ್ಮ ಮಗಳಿಗೆ ಈ ಔಷಧಿ ಕೊಡಿಸಲು ಹಣ ಹೊಂದಿಸಲು ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಉನ್ನತ ಅಧಿಕಾರಿಗಳನ್ನು ಈ ಬಗ್ಗೆ ಸಂಪರ್ಕಿಸುತ್ತಿದ್ದರು. ಜೊತೆಗೆ ಮಗುವಿನ ಹೆಸರನ್ನು ಎಸ್​ಎಂಎ ಚಿಕಿತ್ಸೆ ಅವಶ್ಯಕವಿರುವ ಮಕ್ಕಳಿಗಾಗಿ ಕೆಲಸ ಮಾಡುವ ‘ಕ್ಯೂರ್ ಎಸ್​ಎಂಎ’ ಎಂಬ ಎನ್​ಜಿಒನಲ್ಲಿ ನೋಂದಣಿ ಮಾಡಿಸಿದ್ದರು.

    ಶನಿವಾರದಂದು ಕ್ಯೂರ್​ ಎಸ್​ಎಂಎ ಸಂಸ್ಥೆಯಿಂದ ದೂರವಾಣಿ ಕರೆ ಬಂದಿದ್ದು, ಲಕ್ಕಿ ಡ್ರಾ ಮೂಲಕ ಔಷಧಿಯನ್ನು ಉಚಿತವಾಗಿ ಪಡೆಯಲು ಜೈನಬ್​ ಆಯ್ಕೆಯಾಗಿದ್ದಾಳೆ ಎಂದು ತಿಳಿದುಬಂತು. ನಿನ್ನೆಯ ದಿನವೇ ಜೋಲ್​ಗೆನ್​​ಸ್ಮಾ ಔಷಧಿಯನ್ನು ನವದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ, 45 ನಿಮಿಷಗಳಲ್ಲಿ, ಜೈನಬ್​ಗೆ ನೀಡಲಾಯಿತು. ಜೈನಬ್​ನೊಂದಿಗೆ ಭಾರತದ ಇನ್ನೂ ಮೂವರು ಮಕ್ಕಳಿಗೆ ಇದೇ ರೀತಿ ಲಕ್ಕಿ ಡ್ರಾ ಮೂಲಕ ಜೀವನದಾನ ಸಿಕ್ಕಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ

    ವದಂತಿಗಳಿಗೆ ಕಿವಿಗೊಡಬೇಡಿ, ಲಸಿಕೆ ಹಿಂಜರಿಕೆ ಬಿಡಿ : ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts