More

    ಚಿಲಕಾದೇವಿ ಏತ ನೀರಾವರಿಗೆ ಶೀಘ್ರ ಚಾಲನೆ

    ಬೋರಗಾಂವ: ಬೋರಗಾಂವ ರೈತರಿಗೆ ವರದಾನವಾಗಿದ್ದ ಚಿಲಕಾದೇವಿ ಏತನೀರಾವರಿ ಯೋಜನೆಯು ಕೆಲ ತಾಂತ್ರಿಕ ಅಡಚಣೆ ಕಾರಣ ಅನೇಕ ವರ್ಷಗಳಿಂದ ಪೂರ್ಣಗೊಂಡಿಲ್ಲ. ಈ ಯೋಜನೆಯಿಂದ ಸುಮಾರು 1300 ಎಕರೆ ಜಮೀನು ನೀರಾವರಿಯಾಗಲಿದೆ. ಕರೊನಾ ವೈರಸ್ ಹಾವಳಿ ಮುಗಿದ ಬಳಿಕ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.

    ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿ ಕರೊನಾ ವೈರಸ್ ಬಗ್ಗೆ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಕೃಷ್ಣಾ ನದಿಗೆ ನೀರು ಬಿಡಲು ನೆರೆ ರಾಜ್ಯದ ಸಚಿವ ಜಯಂತ ಪಾಟೀಲ ಅವರಿಗೆ ಮನವಿ ಮಾಡಲಾಗಿದೆ. ಬೋರಗಾಂವ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪಪಂ ವತಿಯಿಂದ 7.50 ಕೋಟಿ ರೂ. ಬೇಡಿಕೆಗೆ ಮನವಿ ಮಾಡಲಾಗಿದೆ. ಸಮಗ್ರ ಅಭಿವೃದ್ಧಿಗಾಗಿ ಪ್ರಯತ್ನಿಸುವ ಜತೆಗೆ ಎಲ್ಲ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಜಿಲ್ಲೆಯ ಅನೇಕ ಏತನೀರಾವರಿ ಯೋಜನೆಗಳನ್ನು ಶೀಘ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಪಿಕೆಪಿಎಸ್ ಚೇರ್ಮನ್ ಉತ್ತಮ ಪಾಟೀಲ ಅವರು, ದೂಧಗಂಗಾ ನದಿಯ ಬೋರಗಾಂವ ಜಾಕ್‌ವೆಲ್ ಹತ್ತಿರ ಬ್ರಿಡ್ಜ್ ಕಂ ಬಾಂದಾರ ನಿರ್ಮಿಸಲು ಪ್ರಯತ್ನಿಸಬೇಕು. ಇದರಿಂದ ಬೇಸಿಗೆಯಲ್ಲಿ ರೈತರ ನೀರಿನ ಸಮಸ್ಯೆ ದೂರವಾಗವುದು. ಹಾಗಾಗಿ ಜಾಕ್‌ವೆಲ್ ಹತ್ತಿರ ಬಾಂದಾರ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಸಹಕಾರಿ ಧುರೀಣ ರಾವಸಾಹೇಬ ಪಾಟೀಲ, ಉದ್ಯಮಿ ಅಭಿನಂದನ ಪಾಟೀಲ, ಮುಖಂಡ ಉತ್ತಮ ಪಾಟೀಲ, ಪಪಂ ಅಧ್ಯಕ್ಷೆ ಶೋಭಾ ಗೋರವಾಡೆ, ಉಪಾಧ್ಯಕ್ಷ ವಸಂತ ಮಹಾಜನ್ ಅಭಯಕುಮಾರ ಮಗದುಮ್ಮ, ರೋಹಿತ ಚೌಗುಲಾ, ವರ್ಧಮಾನ ಪಾಟೀಲ, ರಾಜು ಮಗದುಮ್ಮ, ಬಾಬಾಸೋ ವಠಾರೆ, ಅನೀಲ ಗುರವ, ತುಳಸಿದಾಸ ವಸವಾಡೆ, ಅಶೋಕ ನೇಜೆ, ಅಭಯ ಕರೋಲೆ, ಶೋಭಾ ಹವಲೆ, ಸುರೇಖಾ ಘಾಳೆ, ಪೋಪಟ ಕುರಳೆ, ಚಂದು ಪಾಟೀಲ, ರಾಜು ಗಜರೆ, ಅಜಿತ್ ಕಾಂಬಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts