More

    ಕೊಳಚೆ ನೀರು ಸಂಗ್ರಹವಾಗಿದ್ದ ಚರಂಡಿ ಸ್ವಚ್ಛಗೊಳಿಸಿದ ನಗರಸಭೆ

    ಚಿಕ್ಕಮಗಳೂರು: ಮೋರಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದ ಶರೀಫ್​ಗಲ್ಲಿ ಹಾಗೂ ದುರ್ವಾಸನೆ ಬೀರುತ್ತಿದ್ದ ಬಂಡಿಮಠ ರಸ್ತೆಗೆ ನಗರಸಭೆಯಿಂದ ಕಾಯಕಲ್ಪ ದೊರೆತಿದೆ.

    ಶರಿಫ್​ಗಲ್ಲಿ ರಸ್ತೆ ಹಾಗೂ ಹಳೇ ಬಂಡಿಮಠ ರಸ್ತೆಯಲ್ಲಿ ಕಸದರಾಶಿ ಮತ್ತು ಸೊಳ್ಳೆಕಾಟದಿಂದ ನಾಗರಿಕರು ಅನುಭವಿಸುತ್ತಿದ್ದ ತೊಂದರೆ ಕುರಿತು ವಿಜಯವಾಣಿಯಲ್ಲಿ ಜೂ.8ರಂದು ಪ್ರಕಟವಾದ ವರದಿ ಗಮನಿಸಿದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸ್ಥಳ ವೀಕ್ಷಿಸಿ ಸ್ವಚ್ಛತೆಗೆ ಕ್ರಮಕೈಗೊಂಡರು.

    ಗಿಡ ಗಂಟಿಗಳು ಬೆಳೆದು, ಕಸದ ರಾಶಿ ತುಂಬಿದ್ದ ಹಳೇ ಬಂಡಿ ಮಠ ರಸ್ತೆಯನ್ನು ಹಾಗೂ ತ್ಯಾಜ್ಯ ತುಂಬಿ ದುರ್ವಾಸನೆ ಬೀರುತ್ತಿದ್ದ ಚರಂಡಿಯನ್ನು ಪೌರಕಾರ್ವಿುಕರು ಸಚ್ಛಗೊಳಿಸಿದರು. ನಂತರ ಶರೀಫ್​ಗಲ್ಲಿಗೆ ಸಾಗುವ ಮೋರಿಯಲ್ಲಿ ಬಿದ್ದಿದ್ದ ಸಿಮೆಂಟ್ ಕಟ್ಟೆಯನ್ನು ತೆರವು ಮಾಡಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

    ಶರೀಫ್​ಗಲ್ಲಿಯ ಕೆಲವು ಗೋದಾಮುಗಳ ಸರಕನ್ನು ಇಳಿಸಲು ಚರಂಡಿಗೆ ಸ್ಲ್ಯಾಬ್​ಗಳನ್ನು ಹಾಕಿದ್ದು ಸರಕು ವಾಹನ ಓಡಾಡುವ ವೇಳೆ ಅದು ಚರಂಡಿಯೊಳಗೆ ಕುಸಿದಿದೆ. ಲಾರಿಗಳು ರಸ್ತೆಯಲ್ಲಿ ತಿರುಗುವಾಗ ಸಿಮೆಂಟ್ ಕಟ್ಟೆ ಒಡೆದು ಕೊಳಚೆ ನೀರು ಸಂಗ್ರಹವಾಗಿದೆ. ಹಾಗಾಗಿ ಚರಂಡಿ ಮೇಲೆ ನಿರ್ವಿುಸಿರುವ ಸ್ಲ್ಯಾಬ್ ತೆರವುಗೊಳಿಸುವಂತೆ ಗೋದಾಮಿನ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತೆರವುಗೊಳಿಸದಿದ್ದಲ್ಲಿ ನೋಟಿಸ್ ಜಾರಿಮಾಡಿ ನಗರಸಭೆಯಿಂದಲೇ ಆ ಕಾರ್ಯ ಮಾಡಲಾಗುವುದು. ಮುಖ್ಯರಸ್ತೆಯ ಚರಂಡಿಯಲ್ಲಿ ಕುಸಿದ ಕಟ್ಟೆ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಶಶಿರಾಜ್ ಅರಸ್ ತಿಳಿಸಿದರು.

    ಬಂಡಿ ಮಠ ರಸ್ತೆಯನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಸುತ್ತಮುತ್ತಲ ನಾಗರಿಕರು ಸ್ವಚ್ಚವಾಹನಕ್ಕೆ ಕಸಹಾಕದೆ ರಾತ್ರಿ ಸಮಯದಲ್ಲಿ ರಸ್ತೆಗೆ ಕಸ ಹಾಕುತ್ತಿರುವ ಬಗ್ಗೆ ದೂರಿದೆ.ಈ ಬಗ್ಗೆ ಗಮನಿಸಿ ರಸ್ತೆಗೆ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts