More

    ಚಿಕ್ಕಮಗಳೂರಿನ ಹಾಲಿ ಸಂಸದರಿಗೆ ಗೋಬ್ಯಾಕ್ ಬಿಸಿ.!

    ಕೊಪ್ಪ: ಲೋಕಸಭೆ ಚುಣಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಹಾಲಿ ಸಂಸದೆ, ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸ್ವ-ಪಕ್ಷದ ಕಾರ್ಯಕರ್ತರಿಂದಲೇ ಗೋಬ್ಯಾಕ್ ಬಿಸಿ ಎದುರಾಗಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಾರ್ಯಕರ್ತರಿಂದ ಶೋಭಾ ಕರಂದ್ಲಾಜೆಗೆ ವಿರೋಧ ವ್ಯಕ್ತವಾಗುವ ಲಕ್ಷಣಗಳು ಕಾಣುತ್ತಿದೆ.
    2019ರ ಲೋಕಸಭೆ ಚುನಾವಣೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ಉಡುಪಿ ಭಾಗದ ಕಾರ್ಯಕರ್ತರಿಂದ ಗೋ ಬ್ಯಾಕ್ ಹೆಸರಿನಲ್ಲಿ ಲೋಕಸಭೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು. ಪಕ್ಷದ ವರಿಷ್ಠರ ಗಮನ ಸಹ ಸೆಳೆದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕರಂದ್ಲಾಜೆ ಗೆದ್ದು ಸಂಸದರಾದರು. ಅದರೆ ಅವರು ನಡವಳಿಕೆ ಮಾತ್ರ ಸರಿಪಡಿಸಿಕೊಂಡಿಲ್ಲ. ಮತ್ತೆ ಕಾರ್ಯಕರ್ತರ ನಿರ್ಲಕ್ಷ ತೊರಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಉಡುಪಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಸಂಸದರಿಗೆ ಗೋ ಬ್ಯಾಕ್ ಎನ್ನಲು ಬಿಜೆಪಿ ಕಾರ್ಯಕರ್ತರು ಸಿದ್ದತೆ ನಡೆಸಿಕೊಂಡಿದ್ದಾರೆ.
    ಶೋಭಾ ಕರಂದ್ಲಾಜೆ ಈ ಭಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಟ್ಟು ಬೆಂಗಳೂರು ಕಡೆ ಮುಖ ಮಾಡುತ್ತಾರೆ ಎಂಬ ಸುದ್ದಿ ಎರಡು ಜಿಲ್ಲೆಯಲ್ಲಿ ಹರಿದಾಡಿತ್ತು. ಆದರೇ, ದತ್ತಪೀಠದ ಕಾರ್ಯಕ್ರಮಕ್ಕೆ ಬಂದಿದ್ದ ಸಂಸದರು ಎನ್.ಆರ್ ಪುರದಲ್ಲಿ ಮತ್ತೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ರ್ಸ್ವಸುತ್ತೇನೆ ಎಂಬ ಮಾತುಗಳನ್ನು ಆಡಿದ್ದರು. ಇದರ ಬೆನ್ನಲ್ಲೆ ಹೊಸ ಮುಖಕ್ಕೆ ಟಿಕೇಟ್ ಕೊಡಿಸಬೇಕೆಂಬ ಹಠಕ್ಕೆ ಕೆಲ ಕಾರ್ಯಕರ್ತರು ಬಿದ್ದಿದ್ದಾರೆ.
    ಉಡುಪಿ ಜಿಲ್ಲೆ ಬಿಜೆಪಿ ವಶದಲ್ಲಿದೆ, ಚಿಕ್ಕಮಗಳೂರು ಕಾಂಗ್ರೆಸ್ ವಶದಲ್ಲಿದೆ. ಮೋದಿ ಅಲೆ ಇರುವುದರಿಂದ ಬಿಜೆಪಿ ಅಭ್ಯರ್ಥಿಯಾರಾದರೂ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರು, ಕಾರ್ಯಕರ್ತರದ್ದು. ಈ ನಡುವೆ ಕಾರ್ಯಕರ್ತರು ಮಾತ್ರ ಶೋಭಾ ಕರಂದ್ಲಾಜೆಗೆ ಈ ಬಾರಿಯೂ ಪಕ್ಷ ಟಿಕೆಟ್ ನೀಡಿದಲ್ಲಿ ಪ್ರಚಾರದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts