More

    ಶಿರವಾಸೆ-ಬೊಗಸೆ-ಕಡವಂತಿ ಮಾರ್ಗಕ್ಕೆ ಬಸ್

    ಬಾಳೆಹೊನ್ನೂರು: ಗ್ರಾಮೀಣ ಭಾಗವಾದ ಶಿರವಾಸೆ-ಬೊಗಸೆ-ಕಡವಂತಿ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭಗೊಂಡಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಡವಂತಿ ಗ್ರಾಪಂ ಅಧ್ಯಕ್ಷ ವಿನೋದ್ ತಿಳಿಸಿದ್ದಾರೆ.

    ಲಾಕ್​ಡೌನ್​ನಿಂದ ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಲಾಕ್​ಡೌನ್ ತೆರವುಗೊಂಡ ಬಳಿಕವೂ ಈ ಭಾಗಕ್ಕೆ ಖಾಸಗಿ ಹಾಗೂ ಕೆಎಸ್​ಆರ್​ಟಿಸಿ ಬಸ್​ಗಳು ಸಂಚರಿಸುತ್ತಿರಲಿಲ್ಲ. ಬಸ್ ಇಲ್ಲದೆ ಜನರಿಗೆ ತೊಂದರೆಯಾಗುತ್ತಿದ್ದು ಕೂಡಲೆ ಸ್ಪಂದಿಸುವಂತೆ ಜಿಪಂ ಸದಸ್ಯೆ ಕವಿತಾ ಲಿಂಗರಾಜು ಹಾಗೂ ನಾನು ಕೆಎಸ್​ಆರ್​ಟಿಸಿ ಡಿಸಿ ಬಳಿ ಮನವಿ ಮಾಡಿದ್ದೆವು.

    ಇದೀಗ ಚಿಕ್ಕಮಗಳೂರಿನಿಂದ ಮಲ್ಲಂದೂರು ಮಾರ್ಗವಾಗಿ ಜೋಳ್​ದಾಳ್, ತಳಿಹಳ್ಳ, ಮಲ್ಲಂದೂರು, ಗಾಳಿಗುಡ್ಡೆ, ಶಿರವಾಸೆ, ಬೊಗಸೆ, ಬಿಳಗೊಳ, ಕಡವಂತಿ, ಬಾಸಾಪುರ, ಕಡಬಗೆರೆ, ಬಾಳೆಹೊನ್ನೂರು, ಕೊಪ್ಪ, ತೀರ್ಥಹಳ್ಳಿಗೆ ಬಸ್ ಸಂಚಾರ ಆರಂಭವಾಗಿದೆ. ಬೆಳಗ್ಗೆ 7.40ಕ್ಕೆ ಚಿಕ್ಕಮಗಳೂರಿನಿಂದ ಹೊರಟು 8.30ಕ್ಕೆ ಮಲ್ಲಂದೂರು, 9.15ಕ್ಕೆ ಬೊಗಸೆ, 10.15ಕ್ಕೆ ಬಾಳೆಹೊನ್ನೂರು, 11.15ಕ್ಕೆ ತೀರ್ಥಹಳ್ಳಿ ತಲುಪುತ್ತದೆ.

    ಅದೇ ಮಾರ್ಗವಾಗಿ ಕೊಪ್ಪದಿಂದ ಮಧ್ಯಾಹ್ನ 2.30ಕ್ಕೆ ಬಸ್ ಹೊರಟು 5 ಗಂಟೆಗೆ ಬಾಳೆಹೊನ್ನೂರು ತಲುಪಿ, ಕಡಬಗೆರೆ, ಬಾಸಾಪುರ, ಬೊಗಸೆ, ಶಿರವಾಸೆ, ಮಲ್ಲಂದೂರು ಮಾರ್ಗವಾಗಿ ರಾತ್ರಿ 7.15ಕ್ಕೆ ಚಿಕ್ಕಮಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts