More

    ಕಾಫಿ ನಾಡಲ್ಲಿ ಕರೊನಾ ಸೋಂಕಿತರ ಮರಣ ಇಳಿಕೆ

    ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮೊದಲಿಗೆ ಶೇ.2 ರಷ್ಟಿದ್ದ ಕರೊನಾ ಸೋಂಕಿತರ ಮರಣ ಪ್ರಮಾಣ 1.5ಕ್ಕೆ ಇಳಿದಿದ್ದು, 15 ದಿನಗಳಿಂದ ಶೇ.1ಕ್ಕೆ ಹಾಗೂ 7 ದಿನಗಳಲ್ಲಿ ಶೇ. 0.9ಕ್ಕೆ ತಗ್ಗಿದೆ.

    ರೋಗಲಕ್ಷಣ ತಿಳಿದುಕೊಂಡು ಸೋಂಕಿತರಿಗೆ ಅಗತ್ಯ ಸೌಲಭ್ಯ, ಉತ್ತಮ ಚಿಕಿತ್ಸೆ ನೀಡಿದ್ದರಿಂದ ಸಾವಿನ ಪ್ರಮಾಣ ತಗ್ಗಿ ಚೇತರಿಸಿಕೊಳ್ಳುವವರ ಸಂಖ್ಯೆ ಅಧಿಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಈವರೆಗೆ 50,022 ಮಂದಿಯ ತಪಾಸಣೆ ನಡೆಸಲಾಗಿದ್ದು, 7219 ಪ್ರಕರಣಗಳಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 5595 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಮಾಣದಲ್ಲಿ ಶೇ.77ರಷ್ಟು ಮಂದಿ ಗುಣ ಹೊಂದಿದ್ದಾರೆ. 1517 ಸಕ್ರಿಯ ಪ್ರಕರಣಗಳಿವೆ. ಸೂಕ್ತ ಚಿಕಿತ್ಸೆ ನಡುವೆಯೂ 107 ಮಂದಿ ದುರ್ದೈವವಶಾತ್ ಮೃತಪಟ್ಟಿದ್ದಾರೆ. ಪ್ರಸ್ತುತ ಚೇತರಿಸಿಕೊಂಡವರು, ಪ್ರಾಥಮಿಕ ಸಂರ್ಪತರು ಹಾಗೂ ದ್ವಿತೀಯ ಸಂರ್ಪತರು ಸೇರಿ ಒಟ್ಟು 9943 ಮಂದಿ ಹೋಮ್ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದು ಹೇಳಿದರು.

    ಸೋಂಕಿತರ ಸಂಖ್ಯೆ ಕಡಿಮೆ: ಐದು ದಿನಗಳಿಂದ ಜಿಲ್ಲೆಯ ಸರಾಸರಿ ಶೇ.2.5ರಷ್ಟು ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಪ್ರಸ್ತುತ ಇರುವ 7219 ಪ್ರಕರಣ 24 ದಿನಗಳಲ್ಲಿ ದುಪ್ಪಟ್ಟಾಗುವ ಸಂಭವವಿದೆ. ಈ ದರ ಪ್ರತಿದಿನ ಬದಲಾವಣೆಯಾಗಲಿದೆ ಎಂದು ರಾಜ್ಯ ಕೋವಿಡ್ ಸಮೀಕ್ಷಾ ಕೇಂದ್ರ ಅಧಿಕೃತವಾಗಿ ಅಂಕಿ ಅಂಶ ಬಿಡುಗಡೆ ಮಾಡಿದೆ. ಆದರೆ ಜಿಲ್ಲೆಯಲ್ಲಿ ನಡೆಸಿದ ಮಾದರಿ ತಪಾಸಣೆಯಲ್ಲಿ 7 ದಿನಗಳಲ್ಲಿ ಶೇ.23.8 ಸೋಂಕು ಪ್ರಮಾಣ ಕಂಡುಬಂದಿದ್ದು, ಮೂರು ದಿನಗಳಲ್ಲಿ ಈ ಪ್ರಮಾಣ ಶೇ.19.5ಕ್ಕೆ ಇಳಿಕೆಯಾಗಿರುವುದು ಗಮನಾರ್ಹ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts