More

    ಚಿಕ್ಕಮಾದಿನಾಳ ಜಿಪಂ ಕ್ಷೇತ್ರ ಮುಂದುವರಿಕೆಗೆ ಆಗ್ರಹ: ಶಾಸಕ, ಸಂಸದ, ಜಿಲ್ಲಾಧಿಕಾರಿಗೆ ಮುಖಂಡರ ಮನವಿ

    ಕನಕಗಿರಿ: ತಾಲೂಕಿನ ಚಿಕ್ಕಮಾದಿನಾಳ ಜಿಪಂ ಕ್ಷೇತ್ರವನ್ನು ರದ್ದುಪಡಿಸದಂತೆ ಆಗ್ರಹಿಸಿ ಸ್ಥಳೀಯ ಮುಖಂಡರು ಮಂಗಳವಾರ ಶಾಸಕ ಬಸವರಾಜ ದಢೇಸುಗೂರು, ಸಂಸದ ಸಂಗಣ್ಣ ಕರಡಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಈ ಮೊದಲಿದ್ದ ಚಿಕ್ಕಮಾದಿನಾಳ-ವೆಂಕಟಗಿರಿ ಜಿಪಂ ಕ್ಷೇತ್ರವನ್ನು ಕಳೆದ ವರ್ಷ ಚಿಕ್ಕ ಮಾದಿನಾಳ ಸ್ವತಂತ್ರ ಕ್ಷೇತ್ರವಾಗಿ ಮಾಡಲಾಗಿತ್ತು. ಜಿಪಂ ಹಾಗೂ ತಾಪಂ ಚುನಾವಣೆ ನಡೆಸಲಿಕ್ಕೆ ಮೀಸಲಾತಿ ಪ್ರಕಟಿಸಿದಾಗ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಸದ್ಯ ರಾಜ್ಯ ಸರ್ಕಾರ, ಕ್ಷೇತ್ರ ಪುನರ್ವಿಂಗಡಣೆಯ ಜನಸಂಖ್ಯಾ ಕೊರತೆ ನೆಪದಲ್ಲಿ ಜಿಪಂ ಕ್ಷೇತ್ರವನ್ನು ರದ್ದುಪಡಿಸಿ ತಾತ್ಕಾಲಿಕ ನೂತನ ಪಟ್ಟಿ ಹೊರಡಿಸಿದ್ದು, ಖಂಡನೀಯ. ಇದರಿಂದ ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ. ಆದ್ದರಿಂದ ಚಿಕ್ಕಮಾದಿನಾಳ ಜಿಪಂ ಕ್ಷೇತ್ರವನ್ನು ಮುಂದುವರಿಸುವ ಮೂಲಕ ಜನರ ಭಾವನೆಗಳಿಗೆ ಬೆಲೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಕಾರ್ಯದರ್ಶಿ ವಾಗೇಶ ಹಿರೇಮಠ, ಚಿಕ್ಕಮಾದಿನಾಳ ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ಗಿಡ್ಡಿ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪಪಂ ಸದಸ್ಯ ರಾಜಾಸಾಬ್ ನಂದಾಪುರ, ಪ್ರಮುಖರಾದ ಸಂಗಪ್ಪ ರಾಮದುರ್ಗ, ಬಸವರಾಜ ಗಾಣದಾಳ, ವಿರೂಪಾಕ್ಷಿ ಆಂಧ್ರ, ಸಣ್ಣ ಕನಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts