More

    ಚಿಕ್ಕಬಳ್ಳಾಪುರ: ಕ್ವಾರಿ ಮಾಲೀಕ, 4 ಸಿಬ್ಬಂದಿ ಬಂಧನ; ಇಬ್ಬರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

    ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಆರು ಜನರ ಸಾವಿಗೆ ಕಾರಣವಾದ ಜಿಲಾಟಿನ್ ಕಡ್ಡಿ ಸ್ಫೋಟದ ಸಂಬಂಧವಾಗಿ ಕ್ವಾರಿಯ ಮಾಲೀಕನೊಬ್ಬನನ್ನು ಸೇರಿ ಐದು ಜನರನ್ನು ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಹ ಅಮಾನತುಗೊಳಿಸಲಾಗಿದೆ.

    ಘಟನೆ ಸಂಭವಿಸಿದ ಭರಮವರ್ಷಿಣಿ ಕ್ರಶರ್ ಕ್ವಾರಿಯ ಪಾಲುದಾರರಾದ ರಾಘವೇಂದ್ರ ರೆಡ್ಡಿ ಎಂಬುವರನ್ನು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಿಂದ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ನಾಲ್ಕು ಜನ ಕ್ವಾರಿ ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ. ಆದರೆ, ಕ್ವಾರಿಯ ಮತ್ತೊಬ್ಬ ಪಾಲುದಾರರಾದ ಜಿ.ಎಸ್.ನಾಗರಾಜ್ ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ.

    ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್​ ಸ್ಫೋಟ: 6ಕ್ಕೇರಿದ ಸಾವಿನ ಸಂಖ್ಯೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

    ಈ ಕೇಸಿಗೆ ಸಂಬಂಧಪಟ್ಟಂತೆ ಗುಡಿಬಂಡೆ ಪೊಲೀಸ್ ಸರ್ಕಲ್ ಇನ್ಸ್​ಪೆಕ್ಟರ್ ಮಂಜುನಾಥ್ ಮತ್ತು ಸಬ್​ಇನ್ಸ್​ಪೆಕ್ಟರ್ ಗೋಪಾಲ ರೆಡ್ಡಿ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಕಲ್ಲು ಗಣಿಗಾರಿಕೆ ಕ್ಷೇತ್ರದಲ್ಲಿ ಮಿನಿ ಟ್ರಕ್​ನಲ್ಲಿ ಸಾಗಿಸಲಾಗುತ್ತಿದ್ದ ಜಿಲಾಟಿನ್ ಕಡ್ಡಿಗಳು ಸ್ಫೋಟಗೊಂಡ ಪರಿಣಾಮ ಮಂಗಳವಾರ ಆರು ಜನರು ಮರಣ ಹೊಂದಿದ್ದರು. ಈ ಬಗ್ಗೆ ರಾಜ್ಯ ಸರ್ಕಾರ ಸಿಐಡಿ ತನಿಖೆಯನ್ನು ಆದೇಶಿಸಿದೆ. ಈ ಘಟನೆಯಲ್ಲಿ ಸತ್ತವರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಎಡಿಯೂರಪ್ಪ ಘೋಷಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    “ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts