More

    ಬಜೆಟ್ ಗಾತ್ರಕ್ಕೆ ಸಿಎಂ ಕಸರತ್ತು: ಕೈಕಟ್ಟಿಹಾಕಿರುವ ಹಣಕಾಸು ಸ್ಥಿತಿ; ಹೊಸ ಯೋಜನೆ ಘೋಷಿಸಲಾಗದ ಇಕ್ಕಟ್ಟು

    ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಆರ್ಥಿಕ ಹಿಂಜರಿತ, ಕರೊನಾದಿಂದಾಗಿ ಅಲ್ಲೋಲಕಲ್ಲೋಲವಾಗಿದ್ದ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಕೆ ಹಾದಿಗೆ ಬಂದಿದ್ದರೂ, ಮುಂದಿನ ಆಯವ್ಯಯದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಗಾತ್ರವನ್ನು ಕಾಪಾಡಿಕೊಳ್ಳಲು ಸರ್ಕಾರ ಕಸರತ್ತು ಮಾಡುತ್ತಿದೆ. ಅಭಿವೃದ್ಧಿಯಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ನಿಲ್ಲಿಸುವ ಮಹತ್ವಕಾಂಕ್ಷೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್​ಗೆ ಸಿದ್ಧತೆ ಆರಂಭಿಸಲು ಮುಂದಾಗಿದ್ದರೂ ಹಣಕಾಸು ಪರಿಸ್ಥಿತಿ ಅವರ ಕೈ ಕಟ್ಟಿ ಹಾಕಿದೆ. ತೆರಿಗೆ ಸಂಗ್ರಹ, ಕೇಂದ್ರದ ನೆರವು ಕಡಿಮೆಯಾಗಿದ್ದರೆ, ರಾಜ್ಯದ ಅಗತ್ಯ ಪೂರೈಸಲು ಹೆಚ್ಚುವರಿ ಸಾಲ ಸಾಕಾಗದೇ ಇರುವುದರಿಂದಲೇ ಬಜೆಟ್ ಗಾತ್ರ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಹಣಕಾಸು ಇಲಾಖೆ ಅಧಿಕಾರಿಗಳು ಮುಂದಿನ ಆಯವ್ಯಯದ ಗಾತ್ರದ ಬಗ್ಗೆ ಕೂಡಿ ಕಳೆಯುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

    ಬಜೆಟ್ ಗಾತ್ರಕ್ಕೆ ಸಿಎಂ ಕಸರತ್ತು: ಕೈಕಟ್ಟಿಹಾಕಿರುವ ಹಣಕಾಸು ಸ್ಥಿತಿ; ಹೊಸ ಯೋಜನೆ ಘೋಷಿಸಲಾಗದ ಇಕ್ಕಟ್ಟುಹೊಸ ಯೋಜನೆಗೆ ಸಂಕಷ್ಟ:ಸಿಎಂಗೇನೋ ಹೊಸ ಯೋಜನೆಗಳನ್ನು ಘೋಷಿಸುವ ಉತ್ಸಾಹವಿದೆ. ಈವರೆಗೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿನ ಸೈಕಲ್, ಭಾಗ್ಯಲಕ್ಷ್ಮಿ ಹೊರತು ನೆನಪಿನಲ್ಲಿ ಉಳಿಯುವಂತಹ ಇತರ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ ಎಂಬುದು ಅವರ ಕೊರಗಾಗಿದೆ. ಆದ್ದರಿಂದಲೇ ಒಂದೆರಡಾದರೂ ಮಹತ್ವದ ಯೋಜನೆ ರೂಪಿಸುವ ಉದ್ದೇಶ ಹೊಂದಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಹಾಲಿ ಯೋಜನೆಗಳಿಗೆ ಹೊಂದಾಣಿಕೆ ಹೊರತು ಹೊಸ ಯೋಜನೆ ಸಾಧ್ಯವಿಲ್ಲವೆಂಬ ಮಾಹಿತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

    ಬಜೆಟ್ ಗಾತ್ರಕ್ಕೆ ಸಿಎಂ ಕಸರತ್ತು: ಕೈಕಟ್ಟಿಹಾಕಿರುವ ಹಣಕಾಸು ಸ್ಥಿತಿ; ಹೊಸ ಯೋಜನೆ ಘೋಷಿಸಲಾಗದ ಇಕ್ಕಟ್ಟುಬದ್ಧ ವೆಚ್ಚಗಳು: ಹಣಕಾಸಿನ ಎಷ್ಟೇ ಒತ್ತಡವಿದ್ದರೂ ಎಲ್ಲಿಯೂ ಬದ್ಧ ವೆಚ್ಚಗಳಿಗೆ ಹಣಕಾಸಿನ ಕೊರತೆ ಕಾಣಿಸದಂತೆ ಕಾಪಾಡಿಕೊಂಡು ಬರಲಾಗಿದೆ. ಆದ್ದರಿಂದಲೇ ವೇತನ, ಪಿಂಚಣಿ, ಬಡ್ಡಿ ಪಾವತಿಯ ಸಮಸ್ಯೆ ಕಾಡಿಲ್ಲ. ಆದರೆ ಅಭಿವೃದ್ಧಿ ವೆಚ್ಚ ಮಾತ್ರ ಕಡಿಮೆಯಾಗಿದೆ.

    ವಲಯವಾರು ಹಂಚಿಕೆ: ಯಡಿಯೂರಪ್ಪ ಕಳೆದ ವರ್ಷ ಬಜೆಟ್​ನಲ್ಲಿ ಇಲಾಖಾವಾರು ಹಂಚಿಕೆ ಬಿಟ್ಟು ವಲಯವಾರು ಹಂಚಿಕೆ ಮಾಡುವ ಹೊಸ ಪ್ರಯತ್ನ ಮಾಡಿದ್ದರು. ಈ ವರ್ಷವೂ ಅದೇ ಮಾದರಿ ಮುಂದುವರಿಸಲಿದ್ದಾರೆ. ಕೆಲ ವಲಯಗಳಿಗೆ ಹೆಚ್ಚಿನ ಅನುದಾನ ಕಾಣಿಸಬಹುದು ಎಂಬುದು ಇದರ ಉದ್ದೇಶವೆಂದು ಅಧಿಕಾರಿಗಳು ಹೇಳುತ್ತಾರೆ.

    ವೆಚ್ಚದ ಪ್ರಮಾಣ ಕಡಿಮೆ: ಪ್ರಸಕ್ತ ಬಜೆಟ್ 9 ತಿಂಗಳು ಕಳೆದಿದೆ. ರಾಜ್ಯದ ವೆಚ್ಚದ ಪ್ರಮಾಣ ಶೇ.51.7 ಮಾತ್ರ ಆಗಿದೆ. ಉಳಿದ 3 ತಿಂಗಳಿನಲ್ಲಿ ಶೇ. 48 ವೆಚ್ಚ ಸಾಧಿಸುವುದು ಕಷ್ಟ. ವೆಚ್ಚ ಸಹ ಹಣಕಾಸು ಬಿಡುಗಡೆಯನ್ನು ಅವಲಂಬಿಸಿದೆ ಹೊರತು ಒಟ್ಟಾರೆ ಗುರಿಯ ಎದುರಿನ ವೆಚ್ಚವಲ್ಲ.

    ಎಷ್ಟಿದೆ ಬಜೆಟ್ ಗಾತ್ರ?: ರಾಜ್ಯದ ಬಜೆಟ್ ಗಾತ್ರ 2,37,893 ಕೋಟಿ ರೂ.ಗಳಿದೆ. ಈ ಬಜೆಟ್​ನಲ್ಲಿನ ಎಲ್ಲ ಗುರಿಗಳು ಪರಿಷ್ಕರಣೆ ಯಾಗಿವೆ. ಆದ್ದರಿಂದ ಗಾತ್ರ ಹಿಗ್ಗಿಸಿಕೊಳ್ಳುವುದಿರಲಿ ಅಷ್ಟೇ ಉಳಿಸಿಕೊಂಡರೇ ಸಾಕು ಎಂಬ ಸ್ಥಿತಿ ನಿರ್ವಣವಾಗಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

    ಬಜೆಟ್ ಗಾತ್ರಕ್ಕೆ ಸಿಎಂ ಕಸರತ್ತು: ಕೈಕಟ್ಟಿಹಾಕಿರುವ ಹಣಕಾಸು ಸ್ಥಿತಿ; ಹೊಸ ಯೋಜನೆ ಘೋಷಿಸಲಾಗದ ಇಕ್ಕಟ್ಟು

    ಹೆಚ್ಚುವರಿ ಸಾಲವೂ ಸಾಲುತ್ತಿಲ್ಲ: ರಾಜ್ಯ ಸರ್ಕಾರ ಈ ಬಜೆಟ್​ನಲ್ಲಿ 52,918 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಕೇಂದ್ರ ನಮ್ಮ ಜಿಡಿಪಿಯ ಶೇ.5 ಸಾಲಕ್ಕೆ ಅನುಮತಿ ನೀಡಿತ್ತು. ಅಂದರೆ ಹೆಚ್ಚುವರಿಯಾಗಿ 33,000 ಕೋಟಿ ರೂ. ಸಾಲ ಮಾಡಲು ಅವಕಾಶ ಸಿಕ್ಕಿದೆ. ಹೆಚ್ಚುವರಿ ಸಾಲ ಸಹ ರಾಜ್ಯದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಸ್ಥಿತಿ ಇದೆ. ಇದರ ಜತೆಗೆ ಕರೊನಾ ಹೊಡೆತದಿಂದ ಜಿಡಿಪಿ ಸಹ ಕಡಿಮೆಯಾಗಿರುವುದರಿಂದ ಪೂರ್ತಿ 33,000 ಕೋಟಿ ರೂ. ಸಾಲ ಮಾಡಲಾಗುವುದಿಲ್ಲ ಎಂದು ಹಣಕಾಸು ಇಲಾಖೆ ಮೂಲಗಳು ಹೇಳುತ್ತವೆ. ಒಟ್ಟಾರೆ ರಾಜ್ಯದ ಸಾಲ ಶೇ.122.6 ಹೆಚ್ಚಾಗಿದೆ.

    ಬಜೆಟ್ ಗಾತ್ರಕ್ಕೆ ಸಿಎಂ ಕಸರತ್ತು: ಕೈಕಟ್ಟಿಹಾಕಿರುವ ಹಣಕಾಸು ಸ್ಥಿತಿ; ಹೊಸ ಯೋಜನೆ ಘೋಷಿಸಲಾಗದ ಇಕ್ಕಟ್ಟು

    ಆದಾಯ ಎಷ್ಟು ಕಡಿಮೆ?: ರಾಜ್ಯದ ಸ್ವಂತ ಸಂಪನ್ಮೂಲ, ಕೇಂದ್ರದ ನೆರವು ಸೇರಿ 1,79,920 ಕೋಟಿ ರೂ. ಆದಾಯದ ನಿರೀಕ್ಷೆ ಇತ್ತು. ಆದರೆ ಈಗ ಆ ಮೊತ್ತ 1,16,362 ಕೋಟಿ ರೂ.ಗೆ ಇಳಿಸಲಾಗಿದೆ. ಕರೊನಾದಿಂದಾಗಿ ಆರ್ಥಿಕ ಕುಸಿತವಾಗಿದ್ದ ಕಾರಣ 63558 ಕೋಟಿ ರೂ. ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಮುಂದಿನ ವರ್ಷ ಹೇಗೆ ಬಜೆಟ್ ರೂಪಿಸುವುದೆಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ಕೇಂದ್ರದಿಂದ ಜಿಎಸ್​ಟಿಯಲ್ಲಿ ವಿಶೇಷ ನೆರವಾಗಿ 12,407 ಕೋಟಿ ರೂ.ಗಳನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಆದರೆ ಹಿಂದೆ 15ನೇ ಹಣಕಾಸು ಆಯೋಗದಲ್ಲಿ ಖೋತಾ ಆಗಿದ್ದ ಮೊತ್ತವೇ ಈವರೆಗೆ ಬಂದಿಲ್ಲ.

    ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ನನ್ನ ಬಗ್ಗೆ ಹಬ್ಬಿರುವ ಸುದ್ದಿ ನಂಬಬೇಡಿ: ಗಾಯಕ ಹನುಮಂತಪ್ಪ

    ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts