More

    29ಕ್ಕೆ ಸಹ್ಯಾದ್ರಿ ಕಾಲೇಜು ಕಟ್ಟಡ ಉದ್ಘಾಟನೆ

    ಶಿವಮೊಗ್ಗ: ಸಹ್ಯಾದ್ರಿ ಕಲಾ ಕಾಲೇಜಿನ ಪ್ರವೇಶ ದ್ವಾರ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತಾರಣಾ ಕಟ್ಟಡ ಹಾಗೂ ಪುರುಷ ವಿದ್ಯಾರ್ಥಿ ನಿಲಯದ ವಿಸ್ತಾರಣಾ ಕಟ್ಟಡಗಳು 6.5 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಂಡಿದ್ದು, ನ.29ರ ಬೆಳಗ್ಗೆ 11ಕ್ಕೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದರು.

    ರೂಸಾ (ರಾಷ್ಟ್ರೀಯ ಉಚ್ಛಚಾರ್ ಶಿಕ್ಷಾ ಅಭಿಯಾನ್)ಅಡಿ ಉನ್ನತ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆ ಆಗಿದ್ದು ಪ್ರವೇಶ ದ್ವಾರಕ್ಕೆ 2.5 ಕೋಟಿ ರೂ., ವಿಸ್ತರಣಾ ಕಟ್ಟಡಕ್ಕೆ 1.99 ಕೋಟಿ ರೂ. ಹಾಗೂ ವಿದ್ಯಾರ್ಥಿನಿಲಯದ ವಿಸ್ತರಣಾ ಕಟ್ಟಡಕ್ಕೆ 1.99 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಡಿಸಿಎಂ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಸದಸ್ಯ ಎಸ್.ಎಲ್.ಧಮೇಗೌಡ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ರಾಜ್ಯ ಉನ್ನತ ಶಿಕ್ಷಣ ಪರಿಷತ್​ನ ಕಾರ್ಯನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ಮುಖ್ಯ ಅತಿಥಿಯಾಗಿರುವರು ಎಂದರು.

    ಮೇಯರ್ ಸುವರ್ಣಾ ಶಂಕರ್ ಸೇರಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಪಂ ಅಧ್ಯಕ್ಷರು, ಎಂಎಲ್​ಎ, ಎಂಎಲ್​ಸಿಗಳು, ವಿವಿಧ ನಿಗಮಗಳ ಅಧ್ಯಕ್ಷರು ಸಭೆಗೆ ಆಹ್ವಾನಿತರಾಗಿದ್ದಾರೆ ಎಂದು ಹೇಳಿದರು.

    ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್ ಮಾತನಾಡಿ, ಒಳಾಂಗಣ ಕ್ರೀಡಾಂಗಣ ನಿರ್ವಣಕ್ಕೆ 7.05 ಕೋಟಿ ರೂ. ಮಂಜೂರಾಗಿದೆ. ಸುಸಜ್ಜಿತ 4 ವಾಹನ ನಿಲುಗಡೆ ಸ್ಥಳ, ಕ್ಯಾಂಟೀನ್, 2.20 ಕೋಟಿ ರೂ. ವೆಚ್ಚದಲ್ಲಿ ಬಾಲಕರ ಹಾಸ್ಟೆಲ್, ಲ್ಯಾಬೋರೇಟರಿ, ಗ್ರಂಥಾಲಯಗಳ ಕಟ್ಟಡವನ್ನು 2021ರ ಮಾರ್ಚ್ ಅಂತ್ಯದೊಳಗೆ ಮುಗಿಸಬೇಕಿದೆ ಎಂದರು.

    ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು, ಸಂತೋಷ್ ಬಳ್ಳೆಕೆರೆ, ಪ್ರೊ. ಕಿರಣ್ ದೇಸಾಯಿ, ರಾಮಲಿಂಗಪ್ಪ, ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಆರ್.ಶಶಿರೇಖಾ, ಡಾ. ಎಚ್.ಎಂ.ವಾಗ್ದೇವಿ, ಡಾ. ಕೆ.ಬಿ.ಧನಂಜಯ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts