More

    ಏರಿಕೆಯತ್ತ ಚಿಕನ್ ದರ, ಉಡುಪಿ ಜಿಲ್ಲೆಯಲ್ಲಿ ಕೆ.ಜಿಗೆ 250 ರೂ

    ಉಡುಪಿ: ಕರಾವಳಿಯಲ್ಲಿ ಕೆಲವೇ ದಿನಗಳ ಹಿಂದೆ ಕೆ.ಜಿ.ಗೆ 200 ರೂ.ತಲುಪಿದ್ದ ಕೋಳಿ ಮಾಂಸ ದರ ಇದೀಗ 250 ರೂ.ಗೆ ತಲುಪಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದಿನಕ್ಕೆ ಐದು, ಹತ್ತು ರೂ.ನಂತೆ ದರ ಏರುತ್ತಲೇ ಇದೆ ಎನ್ನುತ್ತಾರೆ ಕೋಳಿ ಮಾಂಸ ವ್ಯಾಪಾರಿಗಳು.

    ಇದೀಗ ಉಡುಪಿ ಜಿಲ್ಲೆಯ ಒಂದೊಂದು ಅಂಗಡಿಗಳಲ್ಲಿ 250-260 ರೂ.ಇದೆ. ಜೀವ ಇರುವ ಕೋಳಿಗೆ ಕೆ.ಜಿ.ಗೆ 160 ರೂ, ಸ್ಕಿನ್‌ಔಟ್ ಮಾಂಸಕ್ಕೆ ಕೆಜಿಗೆ 280 ಆಸುಪಾಸಿನಲ್ಲಿ ದರವಿದೆ. ಮೇ 4 ಲಾಕ್‌ಡೌನ್ ಸಡಿಲಗೊಂಡ ಬಳಿಕ ಕೋಳಿ ಹಾಗೂ ಕುರಿ ಮಾಂಸ ದರಲ್ಲಿ ತಲಾ 50 ರೂ.ಏರಿಕೆಯಾಗುವವರೆಗೆ ವ್ಯತ್ಯಾಸ ಕಂಡುಬಂದಿದೆ. ಈ ನಡುವೆ ಹೊಟೆಲ್‌ಗಳು ತೆರೆದಿದ್ದರಿಂದ ಬೇಡಿಕೆಯೂ ಹೆಚ್ಚಾಗಿದೆ.

    ಹೊರ ರಾಜ್ಯದಿಂದ ಬರುತ್ತಿದ್ದ ಕೋಳಿಯೂ ಪೂರೈಕೆಯಾಗುತ್ತಿಲ್ಲ. ಮಲೆನಾಡು ಭಾಗದಿಂದಲೂ ಬೇಡಿಕೆಯಷ್ಟು ಪೂರೈಕೆ ಇಲ್ಲ ಎನ್ನುತ್ತಾರೆ ವ್ಯಪಾರಿಗಳು. ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಅಪಪ್ರಚಾರದಿಂದ ಕೋಳಿ ಸಾಕಣಿಗೆದಾರರು ನಷ್ಟ ಅನುಭವಿಸಿದ್ದರು. ಕೆಲವು ಬೆಳೆಗಾರರು ಕೋಳಿಗೆ ಬೇಡಿಕೆಯಿಲ್ಲದೆ ಇದ್ದಷ್ಟು ಕೋಳಿಯನ್ನು ಸ್ವಲ್ಪ ರೇಟಿಗೆ ಮಾರಾಟ ಮಾಡಿದ್ದಾರೆ. ಕೆಲವರು ದಿಕ್ಕು ತೋಚದೆ ಕೋಳಿಗಳನ್ನು ನಾಶ ಮಾಡಿದ್ದರು. ಇದೆಲ್ಲದರ ಪರಿಣಾಮ ಇದೀಗ ಕೋಳಿ ಮಾಂಸ ಪ್ರಿಯರ ಜೇಬಿಗೆ ಕತ್ತರಿ ಬೀಳುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

    ಮಂಗಳೂರಲ್ಲಿ ಕೆ.ಜಿಗೆ 150-220 ರೂ.
    ಮಂಗಳೂರು ಮಾರುಕಟ್ಟೆಯಲ್ಲಿ ಚಿಕನ್ ದರ ಕಳೆದ ಒಂದು ವಾರದಿಂದ ಏರುಗತಿಯಲ್ಲಿದೆ. ಕಳೆದ ವಾರದಲ್ಲಿ 150-200 ರೂ. ರೇಂಜ್‌ನಲ್ಲಿದ್ದ ದರ ಈ ವಾರ 180-220 ರೂ.ವರೆಗೆ ಇದೆ. ಜೀವಂತ ಕೋಳಿಗೆ 180 ರೂ. ಇದ್ದರೆ ಸ್ಕಿನ್ ಔಟ್ ಚಿಕನ್‌ಗೆ 220 ರೂ. ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಕರೊನಾ ಅಪಪ್ರಚಾರದಿಂದ ಕೋಳಿ ಸಾಕಣೆದಾರರು ಕೋಳಿಮರಿಗಳನ್ನು ಸಾಮೂಹಿಕವಾಗಿ ನಾಶ ಪಡಿಸಿದ್ದುದರಿಂದ ಕೋಳಿ ಸಂಗ್ರಹವಿಲ್ಲ, ಹಾಗಾಗಿ ಕೋಳಿಗೆ ಬೆಲೆ ಏರಿಕೆಯಾಗಿದೆ, ಕೆಲ ದಿನಗಳಲ್ಲಿ ದರ ಸಹಜಸ್ಥಿತಿಗೆ ಬರಬಹುದು ಎನ್ನುವುದು ವ್ಯಾಪಾರಸ್ಥರ ಅಭಿಮತ.

    ಕೋಳಿ ಮಾಂಸ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಬೇಡಿಕೆಯೂ ಇರುವುದರಿಂದ ಚಿಕನ್ ದರ ಏರಿಕೆಯಾಗುತ್ತಿದೆ. ದಿನಕ್ಕೆ ಐದು, ಹತ್ತು ರೂ.ನಂತೆ ಏರಿಕೆ ಕಾಣುತ್ತಿದೆ. ಸದ್ಯ ನಮ್ಮಲ್ಲಿ ಕೆ.ಜಿ.ಗೆ 250 ರೂ.ನಲ್ಲಿ ಮಾರಾಟ ಮಾಡಲಾಗುತ್ತಿದೆ.
    – ಜಾಕಿರ್ ಹುಸೇನ್, ಚಿಕನ್, ಮಟನ್ ವ್ಯಾಪಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts