More

    ಸಾರ್ವಜನಿಕ ಸಭೆಗೆ ಕ್ರಿಕೆಟ್​ ಹೆಲ್ಮೆಟ್​ ಧರಿಸಿ ಬಂದ ಬಿಜೆಪಿ ನಾಯಕ: ಕಾರಣ ಹೀಗಿದೆ…

    ನವದೆಹಲಿ: ಮಂಗಳವಾರ (ಡಿ.20) ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಛತ್ತೀಸ್​​ಗಢದ ಬಿಜೆಪಿ ನಾಯಕ ಅಜಯ್​ ಚಂದ್ರಾಕರ್ ಅವರು​ ಕ್ರಿಕೆಟ್​ ಹೆಲ್ಮೆಟ್​ ಧರಿಸಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.

    ಸುಪೆಲಾ ಪ್ರದೇಶದಲ್ಲಿ ತಮ್ಮ ಮೇಲೆ ನಡೆದಿದ್ದ ಕಲ್ಲು ತೂರಾಟವನ್ನು ವಿರೋಧಿಸಿ ಪ್ರತಿಭಟನೆಯ ಭಾಗವಾಗಿ ಹೆಲ್ಮೆಟ್​ ಧರಿಸಿ ಬಂದಿದ್ದಾಗಿ ಚಂದ್ರಾಕರ್​ ಅವರು ತಿಳಿಸಿದರು. ಹೆಲ್ಮೆಟ್​ ಧರಿಸಿ ಭಾಷಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದೆ.

    ಸುಪೇಲಾದಲ್ಲಿ ನನ್ನ ಮೇಲೆ ಕಲ್ಲುಗಳನ್ನು ಎಸೆಯಲಾಯಿತು. ಆದರೆ ಕಲ್ಲು ತೂರಾಟಗಾರರು ನನ್ನನ್ನು ಮಾತ್ರವಲ್ಲದೆ ಛತ್ತೀಸ್‌ಗಢದ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದರು. ಅಲ್ಲದೆ, ಕಾಂಗ್ರೆಸ್​ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ನೀಡಿತು ಮತ್ತು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿಯಿಂದ ಯಾರಾದರೂ ಪ್ರಾಣ ತ್ಯಾಗ ಮಾಡಿದ್ದಾರಾ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಇದೇ ಸಂದರ್ಭದಲ್ಲಿ ಚಂದ್ರಾಕರ ವಾಗ್ದಾಳಿ ನಡೆಸಿದರು.

    ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಕಾಂಗ್ರೆಸ್ಸಿಗರು ಯಾರು? ಸ್ವಾತಂತ್ರ್ಯ ಕಾರಣಕ್ಕಾಗಿ ಪ್ರಾಣ ಕೊಟ್ಟವರಲ್ಲಿ ಕಾಂಗ್ರೆಸಿಗರೂ ಇರಲಿಲ್ಲ. ಲಾಲ್ ಲಜಪತ್ ರಾಯ್ ಅವರನ್ನು ಹೊರತುಪಡಿಸಿ ದೇಶಕ್ಕಾಗಿ ಮಡಿದ ಮತ್ತೊಬ್ಬ ಕಾಂಗ್ರೆಸ್ಸಿಗರನ್ನು ಖರ್ಗೆ ಅವರು ಹೆಸರಿಸಬಹುದೇ? ಎಂದು ಪ್ರಶ್ನಿಸಿದರು. ಖರ್ಗೆ ಅವರ ‘ನಾಯಿ’ ಟೀಕೆಗೂ ಅವರು ತಿರುಗೇಟು ನೀಡಿದರು.

    ಇನ್ನೊಬ್ಬರನ್ನು ನಾಯಿ ಎಂದು ಕರೆಯುವುದು ಸಭ್ಯತೆ ಅಲ್ಲ. ಈ ರೀತಿ ಕರೆಯುವುದು ನೆಹರೂ-ಗಾಂಧಿ ಕುಟುಂಬದ ಪರಂಪರೆ ಎಂದು ಚಂದ್ರಾಕರ್​ ಟೀಕಿಸಿದರು. ಮುಂದಿನ ವರ್ಷ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ದುರ್ಗ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಚಂದ್ರಾಕರ್ ಮಾತನಾಡಿದರು. ಸುಪೇಲಾದಲ್ಲಿ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಕಲ್ಲು ತೂರಾಟ ನಡೆದಿತ್ತು. (ಏಜೆನ್ಸೀಸ್​)

    ಚೀನಾದಲ್ಲಿ ಕೋವಿಡ್​ ಆರ್ಭಟ: ಕೇಂದ್ರ ಸರ್ಕಾರದಿಂದ ಇಂದು ಮಹತ್ವದ ಸಭೆ, ಭಾರತದಲ್ಲೂ ಹೆಚ್ಚಿದ ಆತಂಕ

    ಬೆಂಗ್ಳೂರಿನಲ್ಲಿ ಟೆಕ್ಕಿ ವಿಚಿತ್ರ ಸಾವು: ಸಾರ್ವಜನಿಕರ ನೆರವಿನಿಂದ ಕಾರಿಗೆ ಹೊದಿಕೆ ಹೊದಿಸಿದ ಬಳಿಕ ದುರಂತ ಸಾವು

    PSI ನೇಮಕಾತಿ ಹಗರಣ ಮೀರಿಸುವಂತಿದೆ ಈ ಬೆಸ್ಕಾಂ ಹಗರಣ: ಅನುಕಂಪದ ಆಧಾರದಲ್ಲಿ 6 ಜನ ನಕಲಿಗಳಿಗೆ ನೌಕರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts