More

    ಹೊಸ `ಮಾರ್ಗ’ದಲ್ಲಿ `ಆ ದಿನಗಳು’ ಚೇತನ್!

    `ಆ ದಿನಗಳು’ ಖ್ಯಾತಿಯ ಚೇತನ್ ನಟನೆಯ ಜತೆಜತೆಗೆ ಸಾಮಾಜಿಕ ಹೋರಾಟಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಈಗಾಗಲೇ ಅವರು ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದಾಗಿ ಅವರು ಚಿತ್ರಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಅವರು ಕಡೆಯದಾಗಿ ನಟಿಸಿದ ಚಿತ್ರ `ರಣಂ’ ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್‍ಡೌನ್‍ನಿಂದಾಗಿ ಚಿತ್ರ ಮುಂದಕ್ಕೆ ಹೋಗಿದೆ.

    ಎಲ್ಲಾ ಸರಿ, ಇನ್ನು ಚೇತನ್ ಚಿತ್ರಗಳಲ್ಲಿ ನಟಿಸುವುದಿಲ್ಲವಾ? ಪೂರ್ಣಪ್ರಮಾಣದಲ್ಲಿ ಸಾಮಾಜಿಕ ಹೋರಾಟಗಳಲ್ಲೇ ತೊಡಗಿಸಿಕೊಳ್ಳುತ್ತಾರಾ? ಅವರ ಮುಂದಿನ ನಡೆ ಏನು? ಎಂಬ ಎಲ್ಲಾ ಪ್ರಶ್ನೆಗಳಿಗೂ ಚೇತನ್ ಇದೀಗ ಉತ್ತರ ಕೊಟ್ಟಿದ್ದಾರೆ. ಚೇತನ್, `ಮಾರ್ಗ’ ಎನ್ನುವ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಮುಹೂರ್ತ ಶನಿವಾರ, ಪದ್ಮನಾಭನಗರದ ಬನಗಿರಿ ದೇವಸ್ಥಾನದಲ್ಲಿ ನಡೆದಿದೆ. ಈ ಮುಹೂರ್ತ ಸಮಾರಂಭಕ್ಕೆ `ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಬಂದು ಮೊದಲು ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿ ಹೋಗಿದ್ದಾರೆ.

    ಇದನ್ನೂ ಓದಿ: ಆಕೆ ಸುಶಾಂತ್ನ ಗೆಳತಿಯೂ ಅಲ್ಲ; ಪ್ರತಿನಿಧಿಯೂ ಅಲ್ಲ …

    `ಮಾರ್ಗ’ ಚಿತ್ರವನ್ನು ಮೋಹನ್ ಎನ್ನುವವರು ನಿರ್ದೇಶಿಸುತ್ತಿದ್ದು, ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಚೇತನ್‍ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು `ದಿಯಾ’ ಖ್ಯಾತಿಯ ಖುಷಿ ಆದರೆ, ಇನ್ನೊಬ್ಬರು `ಏಕ್ ಲವ್ ಯಾ’ ಚಿತ್ರದಲ್ಲಿ ನಟಿಸಿರುವ ಗ್ರೀಷ್ಮಾ. ಇವರಿಬ್ಬರೂ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಏನಿದು ಮಾರ್ಗ? ಇದೇನಿದು ರೋಡ್ ಸ್ಟೋರಿಯಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಚೇತನ್ ಹೇಳುವಂತೆ, `ಇದೊಂದು ಪಕ್ಕಾ ಕ್ರೈಮ್ ಥ್ರಿಲ್ಲರ್ ಚಿತ್ರ. ಇಲ್ಲಿ ಹೀರೊ ಒಂದು ಸಮಸ್ಯೆಗೆ ಸಿಲುಕುತ್ತಾನೆ. ಅದರಿಂದ ಆಚೆ ಬರುವುದುಕ್ಕೆ ಅವನು ಯಾವ ಮಾರ್ಗ ಹಿಡಿಯುತ್ತಾನೆ ಎನ್ನುವುದು ಕಥೆ. ಇಲ್ಲಿ ಹೀರೋ ಎಂದು ತುಂಬಾ ಒಳ್ಳೆಯವನಲ್ಲ. ಹಲವು ಶೇಡ್‍ಗಳಿರುವ ಪಾತ್ರ ಅವನದು. ಚಿತ್ರದಲ್ಲಿ ಸಾಕಷ್ಟು ತಾಂತ್ರಿಕ ಅಂಶಗಳಿವೆ ಮತ್ತು ನಿರ್ದೇಶಕರು ಬಹಳ ರೀಸರ್ಚ್ ಮಾಡಿ ಬರೆದಿದ್ದಾರೆ’ ಎನ್ನುತ್ತಾರೆ ಚೇತನ್.

    ಇದನ್ನೂ ಓದಿ: ಪ್ರಭಾಸ್​ ಚಿತ್ರಗಳ ಮೇಲೆ ಹೂಡಿಕೆಯಾಗಿರುವ ಮೊತ್ತ 950 ಕೋಟಿಯಂತೆ!

    ಈ ಚಿತ್ರದಲ್ಲೂ ಅವರು ಏನಾದರೂ ಹೋರಾಟ ಮಾಡುತ್ತಾರಾ ಎಂಬ ಪ್ರಶ್ನೆ ಸಹಜವೇ. ಹಾಗೇನಿಲ್ಲವಂತೆ. `ಇಲ್ಲಿ ನಾನು ಆಕಾಶ್ ಎಂಬ ಪಾತ್ರ ಮಾಡುತ್ತಿದ್ದೇನೆ. ಇದು ನಿರ್ದೇಶಕರ ಕಲ್ಪನೆಯ ಆಕಾಶ್ ಆಗಿರುವುದರಿಂದ, ನನ್ನ ಹೋರಾಟ ಏನೂ ಇರುವುದಿಲ್ಲ. ಆ ಪಾತ್ರಕ್ಕೆ ಅದರದ್ದೇ ಆದ ಹೋರಾಟಗಳಿರುತ್ತವೆ’ ಎನ್ನುತ್ತಾರೆ.

    ಸೆಪ್ಟೆಂಬರ್‍ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

    ಈ ಬಾರಿಯ ಬಿಗ್​ಬಾಸ್ ಮನೆ ಪ್ರವೇಶಿಸಲು ತೆಲುಗು ನಟರಿಗಿಲ್ಲ ಅನುಮತಿ: ಕಾರಣ ಏನಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts