More

    ಮೈತ್ರಿವನ ಮುಂಭಾಗದ ಚೆಕ್‌ಪೋಸ್ಟ್ ಸ್ಥಳ ಬದಲಾಯಿಸಿ

    ಹರಿಹರ: ಹನಗವಾಡಿ ಮೈತ್ರಿವನದ ಮುಂಭಾಗದ ಸರ್ವಿಸ್ ರಸ್ತೆಗೆ ಅಳವಡಿಸಿರುವ ಚೆಕ್ ಪೋಸ್ಟ್‌ನಲ್ಲಿ ಹುಬ್ಬಳ್ಳಿ-ರಾಣೆಬೆನ್ನೂರು ಕಡೆಯಿಂದ ಹರಿಹರಕ್ಕೆ ಪ್ರವೇಶಿಸುವ ವಾಹನ ಮಾತ್ರ ತಪಾಸಣೆ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಗ್ರಾಮಾಂತರ ಭಾಗದ ಕುರುಬರಹಳ್ಳಿ, ನಂದಿಗುಡಿ, ಕುಮಾರನಹಳ್ಳಿ, ಹನಗವಾಡಿ ಮೈತ್ರಿ ವನದ ಸಮೀಪದ ಸರ್ವಿಸ್ ರಸ್ತೆ ಹಾಗೂ ನಗರ ಪ್ರದೇಶದ ರಾಘವೇಂದ್ರ ದೇವಸ್ಥಾನ ಸಮೀಪ ಚೆಕ್ ಪೋಸ್ಟ್ ಅಳವಡಿಸುವ ಮೂಲಕ ಚುನಾವಣಾ ಅಕ್ರಮ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಆದರೆ ಹನಗವಾಡಿ ಮೈತ್ರಿವನದ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಚುನಾವಣಾ ಅಕ್ರಮಕ್ಕೆ ಅಧಿಕಾರಿಗಳೇ ದಾರಿ ಮಾಡಿಕೊಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

    ದಾವಣಗೆರೆಯಿಂದ ಹರಿಹರ ಕಡೆಗೆ ಬರುವ ಬೈಪಾಸ್ ಸರ್ವಿಸ್ ರಸ್ತೆ ಮೂಲಕ ಸುಗಮವಾಗಿದ್ದು, ಯಾವುದೇ ಆಡೆತಡೆಯಿಲ್ಲದೆ ಹರಿಹರಕ್ಕೆ ಪ್ರವೇಶಿಸಬಹುದು.

    ಪ್ರತಿ ವಿಧಾನಸಭಾ, ಲೋಕಸಭಾ ಹಾಗೂ ನಗರಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ರಸ್ತೆಯ ತರಳುಬಾಳು ಶಾಲೆಯ ಮುಂಭಾಗದ ಶಿವಮೊಗ್ಗ ರಸ್ತೆಗೆ ಚೆಕ್ ಪೋಸ್ಟ್ ಅಳವಡಿಸಿ ನಗರಕ್ಕೆ ಪ್ರವೇಶಿಸುವ ಹಾಗೂ ನಗರದಿಂದ ಹೊರಗೆ ಹೋಗುವ ಪ್ರತಿಯೊಂದು ವಾಹನ ತಪಾಸಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗಿರುವ ಮೈತ್ರಿವನದ ಸಮೀಪದ ಚೆಕ್ ಪೋಸ್ಟನ್ನು ನಗರದ ಶಿವಮೊಗ್ಗ ರಸ್ತೆಯ ತರಳುಬಾಳು ಶಾಲೆಯ ಹತ್ತಿರ ಅಳವಡಿಸುವುದರಿಂದ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂಬುದು ನಾಗರಿಕರ ಸಲಹೆ.

    ಅಧಿಕಾರಿಗಳು ಕೂಡಲೇ ಎಚ್ಚೆತ್ತು ಚೆಕ್ ಪೋಸ್ಟ್ ಸ್ಥಳ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts