More

    ಹೊಸ ತಾಯಿ ಅನುಷ್ಕಾರ ಈ ಪೋಸ್ ನೋಡಿದ್ದೀರಾ ..?!

    ಮುಂಬೈ: ತಾಯ್ತನ ಅನ್ನೋದು ಒಂದು ವಿಶಿಷ್ಟ ಅನುಭವ. ಹೊಸ ಜೀವವನ್ನು ಜಗತ್ತಿಗೆ ತರುವುದರೊಂದಿಗೆ ಹೊಸ ಜವಾಬ್ದಾರಿಗಳ ಸರಣಿಯ ಆರಂಭ. ಇತ್ತೀಚೆಗೆ ತಾಯಿಯಾದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಯನ್ನು ಸೂಚ್ಯವಾಗಿ ತಿಳಿಸಿದ್ದಾರೆ.

    ತಮ್ಮ ಆಕರ್ಷಕ ಉಡುಗೆಯೊಂದಿಗೆ ಟೋಪಿ, ಸ್ಕಾರ್ಫ್, ದುಪಟ್ಟಾ ಮುಂತಾಗಿ ಗ್ಲಾಮರಸ್ ಆದ ಅಸೆಸರಿಗಳನ್ನು ತೊಟ್ಟು ಸೆಲೆಬ್ರಿಟಿಗಳು ಪೋಸ್ ಕೊಡುವುದು ಸಾಮಾನ್ಯ ವಿಷಯ. ಅದೇ ರೀತಿಯಲ್ಲಿ ತಮ್ಮ ಮಗು ಹಾಲು ಕುಡಿದ ಮೇಲೆ ತೇಗಿಸುವಾಗ ಬಳಸುವ ‘ಬರ್ಪ್ ಕ್ಲಾತ್’ನೊಂದಿಗೆ ಪೋಸ್ ಕೊಟ್ಟಿದ್ದಾರೆ, ಅನುಷ್ಕಾ! “ಕರೆಂಟ್ ಫೇವರಿಟ್ ಅಸೆಸರಿ – ಬರ್ಪ್ ಕ್ಲಾತ್” ಅಂತ ಕ್ಯಾಪ್ಷನ್ ಕೊಟ್ಟು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.​

    ಇದನ್ನೂ ಓದಿ: ಈ ಮನೆಯ ಅಳತೆ ಕೇವಲ ಐದಡಿ ಆರಿಂಚು- ಬೆಲೆ ಕೇಳಿದ್ರೆ ನಿಮ್ಮೆದೆ ಧಸಕ್​ ಎನ್ನೋದು ದಿಟ!

    ಬರ್ಪ್ ಕ್ಲಾತ್​ ಏನೆಂದು ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಸಣ್ಣಮಕ್ಕಳು ಪ್ರತಿಬಾರಿ ಹಾಲು ಕುಡಿದಾಗ ತೇಗಿಸಬೇಕು. ಹೆಗಲ ಮೇಲೆ ಹಾಕಿಕೊಂಡು ಮಗುವಿನ ಬೆನ್ನಿನ ಮೇಲೆ ಸಣ್ಣಗೆ ಪ್ಯಾಟ್ ಮಾಡಿದಾಗ ಮಗು ತೇಗುತ್ತದೆ. ಹಲವೊಮ್ಮೆ ಕುಡಿದ ಸ್ವಲ್ಪ ಹಾಲನ್ನು ಕಕ್ಕುವುದೂ ಉಂಟು. ಅದು ನಮ್ಮ ಬಟ್ಟೆಗೆ ತಾಗದಿರಲು ಹೆಗಲ ಮೇಲೆ ಹಾಕಿಕೊಳ್ಳುವ ಬಟ್ಟೆಯ ತುಂಡೇ ಈ ಬರ್ಪ್ ಕ್ಲಾತ್.

     
     
     
     
     
    View this post on Instagram
     
     
     
     
     
     
     
     
     
     
     

    A post shared by AnushkaSharma1588 (@anushkasharma)

    ಜನವರಿ 11 ರಂದು ಅನುಷ್ಕಾಗೆ ಹೆಣ್ಣು ಮಗು ಹುಟ್ಟಿದ ಸುದ್ದಿಯನ್ನು ಪತಿ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಸಮಯದಲ್ಲಿ ನಮಗೆ ಪ್ರೈವೆಸಿ ನೀಡುತ್ತೀರೆಂದು ನಂಬಿದ್ದೇವೆ ಎಂದು ಬರೆದಿದ್ದರು. ಆ ನಂತರ ದಂಪತಿಯು ಮಗುವಿನೊಂದಿಗೆ ನಿಂತಿರುವ ಒಂದು ಚಿತ್ರವನ್ನು, ಮಗುವಿಗೆ ವಮಿಕಾ ಎಂಬ ಹೆಸರು ನೀಡಿರುವುದನ್ನು ತಿಳಿಸಿ ಅನುಷ್ಕಾ ಅವರೇ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಇದೀಗ ಅಮ್ಮನಾಗಿ ತಮ್ಮ ಬದುಕು ಹೇಗಿದೆ ಎಂಬ ಝಲಕ್​ಅನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ.

    ಚಿತ್ರದಲ್ಲಿ ತಮ್ಮ ಮನೆಯ ಲಿವಿಂಗ್ ರೂಮ್​ನಲ್ಲಿ ಮಿರರ್ ಸೆಲ್ಫಿ ತೆಗೆದುಕೊಂಡಿರುವ ಅನುಷ್ಕಾ, ಕಪ್ಪು ಟಿಶರ್ಟ್ ಮತ್ತು ಕಪ್ಪು ಲೆಗ್ಗಿಂಗ್ಸ್ ತೊಟ್ಟಿದ್ದಾರೆ. ಅವರ ಹೆಗಲ ಮೇಲೆ ಗ್ರೇ ಕಲರ್ ಬರ್ಪ್ ಕ್ಲಾತ್ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅನುಷ್ಕಾ ಪತಿ ಕ್ರಿಕೆಟಿಗ ವಿರಾಟ್ ಕೋಹ್ಲಿ, ತಾವು ಡೈಪರ್ ಬದಲಾಯಿಸುವುದನ್ನು ಕಲಿತಿದ್ದಾಗಿ ಹೇಳಿದ್ದರು. (ಏಜೆನ್ಸೀಸ್)

    ವಿರುಷ್ಕಾ ದಂಪತಿಯಿಂದ ಮಗಳ ಹೆಸರು ಬಹಿರಂಗ..!

    ವಿವಾದಗಳು ಮಿಸ್ಸಿಂಗ್!; ಪೊಗರು ಹುಡುಗಿಯ ಬೆರಗು ಮಾತು..

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts