More

    ಚೆಕ್ ಅಮಾನ್ಯ ಪ್ರಕರಣ ಅಪರಾಧಿಗೆ 6ಕೋಟಿ ರೂ. ದಂಡ

    ಮಂಗಳೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿಗೆ ಆರು ಕೋಟಿ ರೂ. ದಂಡ ವಿಧಿಸಿ, ತೀರ್ಪು ಪ್ರಕಟಿಸಿದೆ.

    ಬಲ್ಲಾಳ್‌ಬಾಗ್ ನಿವಾಸಿ ಅನಿಲ್ ಹೆಗ್ಡೆ ಶಿಕ್ಷೆಗೆ ಒಳಗಾದ ಅಪರಾಧಿ. ವ್ಯವಹಾರಕ್ಕೆ ಸಂಬಂಧಪಟ್ಟಂತೆ ದೂರುದಾರ ಪದವಿನಂಗಡಿ ಮುಗ್ರೋಡಿಯ ಡ್ಯಾನಿ ಆಂಟನಿ ಪಾವ್ಲ್ ಅವರಿಗೆ ಅನಿಲ್ ಹೆಗ್ಡೆ ಅವರು 5,15,73,798 ರೂ.ಪಾವತಿ ಮಾಡಬೇಕಾಗಿತ್ತು. ಈ ಸಂಬಂಧ 3 ಕೋಟಿ ರೂ. ಹಾಗೂ 2,15,73,978 ರೂಪಾಯಿ ಮೊತ್ತದ ಎರಡು ಚೆಕ್‌ಗಳನ್ನು ನೀಡಿದ್ದರು. ಈ ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದಾಗ ಅನಿಲ್ ಹೆಗ್ಡೆ ಅವರ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ಚೆಕ್‌ಗಳು ಅಮಾನ್ಯಗೊಂಡಿದ್ದವು. ಈ ಬಗ್ಗೆ ದೂರುದಾರ ಡ್ಯಾನಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

    ವಿಚಾರಣೆ ನಡೆಸಿದ ಜೆಎಂಎಫ್‌ಸಿ 4ನೇ ನ್ಯಾಯಾಲಯವು ಅಪರಾಧಿಗೆ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸಿದೆ.ಅಪರಾಧಿ ಒಟ್ಟು 6,08,57,000 ರೂಪಾಯಿ ದಂಡ ಮೊತ್ತ ಪಾವತಿ ಮಾಡಬೇಕು. ತಪ್ಪಿದರೆ ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ದಂಡದ ಮೊತ್ತದಲ್ಲಿ 6,08,50,000 ರೂ.ಗಳನ್ನು ದೂರುದಾರರಿಗೆ ಹಾಗೂ 7,000 ರೂ.ನ್ನು ನ್ಯಾಯಾಲಯದ ವೆಚ್ಚವಾಗಿ ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರ ವಕೀಲ ಎಂ.ಪಿ. ಶೆಣೈ ವಾದ ಮಂಡಿಸಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts