More

    ಛಾಯಾ ಭಗವತಿ ದೇವರಿಗೂ ಜಲದಿಗ್ಬಂಧನ!

    ಕೊಡೇಕಲ್​: ರಾಜ್ಯದ ಹಲವೆಡೆ ರಣಭೀಕರ ಮಳೆಯಾಗುತ್ತಿದ್ದು ಬಹುತೇಕ ನದಿಗಳು, ಜಲಾಶಯಗಳು ಉಕ್ಕಿ ಹರಿಯುತ್ತಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿವೆ. ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ನದಿ ತೀರದ ಜನರು ಊರು ತೊರೆಯುತ್ತಿದ್ದಾರೆ. ಕೃಷಿಭೂಮಿಯೆಲ್ಲ ಕೆರೆಂತಾಗಿದೆ… ಈ ನಡುವೆ ದೇವಸ್ಥಾನಕ್ಕೂ ಜಲದಿಗ್ಬಂಧನವಾಗಿದೆ!

    ಯಾದಗಿರಿ ಜಿಲ್ಲೆ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ಛಾಯಾ ಭಗವತಿ ದೇವಸ್ಥಾನ ಜಲಾವೃತಗೊಂಡಿದೆ. ಬಸವಸಾಗರದಿಂದ ಸೋಮವಾರ 2.77 ಲಕ್ಷ ಕ್ಯೂಸೆಕ್​ ನೀರು ಕೃಷ್ಣೆಗೆ ಹರಿಸಿದ್ದರಿಂದ ಸುಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನ ಜಲದಿಗ್ಬಂಧನವಾಗಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಇದನ್ನೂ ಓದಿರಿ ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ

    ಛಾಯಾ ಭಗವತಿ ದೇವಸ್ಥಾನದ ಗರ್ಭ ಗುಡಿಯೊಳಗೆ ನೀರು ಹೊಕ್ಕಿದ್ದರಿಂದ ಎದುರಿನ ಮಂಟಪ ಮುಳುಗಡೆಯಾಗಿದೆ. ಕಳೆದ ಆಗಸ್ಟ್​ನಲ್ಲಿ ಪ್ರವಾಹದಿಂದ 7 ದಿನಕ್ಕೂ ಹೆಚ್ಚು ದೇಗುಲ ಪ್ರವಾಹದಲ್ಲಿ ಸಿಲುಕಿತ್ತು. ದೇವಸ್ಥಾನದ ಮೇಲ್ಭಾಗದಲ್ಲಿ ಚಿದಂಬರಭಟ್ಟ ಜೋಶಿ ಪೂಜೆ ನೆರವೇರಿಸಿದರು. ಗೃಹ ರಕ್ಷಕ ದಳದ ವೆಂಕಟೇಶ ಕುಲಕರ್ಣಿ ಇದ್ದರು.

    ಆಲಮಟ್ಟಿ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದ್ದರಿಂದ 2.50 ಲಕ್ಷ ಕ್ಯೂಸೆಕ್​ ನೀರು ಬಸವಸಾಗರಕ್ಕೆ ಬಿಟ್ಟಿದ್ದರಿಂದ ಒಳಹರಿವು ಹೆಚ್ಚಾಗಿದೆ. ಹೀಗಾಗಿ 27 ಮುಖ್ಯ ಗೇಟ್​ಗಳ ಮೂಲಕ 2,77,810 ಕ್ಯೂಸೆಕ್​ ನೀರು ಕೃಷ್ಣೆ ಒಡಲಿಗೆ ಹರಿಸಲಾಗಿದ್ದು, ತೀರದ ಗ್ರಾಮಸ್ಥರಿಗೆ ಆತಂಕ ಕಾಡುತ್ತಿದೆ. ಗರಿಷ್ಠ 33.313 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬಸವಸಾಗರದಲ್ಲಿ ಸದ್ಯ 24.78 ಟಿಎಂಸಿ ನೀರು ಲಭ್ಯವಿದ್ದು, 490.21 ಮೀ. ನೀರಿದೆ.

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts