More

    ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ, ಮದ್ವೆಯಾಗಿರುವ ಛತ್ತೀಸ್​ಗಢ ಮಹಿಳೆಯ ಹೊಸ ಸಾಹಸ!

    ಪಲಕ್ಕಾಡ್​: ಕೇರಳ ಮೂಲದ ಸಿಐಎಸ್​ಎಫ್​ ಯೋಧನ ಪ್ರಾಣ ಉಳಿಸಿ, ಅವರನ್ನೇ ಪ್ರೀತಿಸಿ ಮದುವೆಯಾಗಿ ಸುಂದರ ವೈವಾಹಿಕ ಜೀವನ ಸಾಗಿಸುತ್ತಿರುವ ಛತ್ತೀಸ್​ಗಢ ಮೂಲದ ಜ್ಯೋತಿ (30) ಎಂಬಾಕೆ ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದು, ಕೇರಳದಲ್ಲಿ ಡಿಸೆಂಬರ್​ 10ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಸದ್ಯ ಮಲಯಾಳಂ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವ ಜ್ಯೋತಿ ಅವರ ಪ್ರೇಮ್​ ಕಹಾನಿ ತುಂಬಾ ಆಸಕ್ತಿದಾಯಕವಾಗಿದೆ. 2010ರ ಜನವರಿ 3ರಂದು ಜ್ಯೋತಿ ಅವರು ಕಾಲೇಜು ಹಾಸ್ಟೆಲ್​ನಿಂದ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮುಂದಿನ ಸೀಟಿನಲ್ಲಿ ಯೋಧ ವಿಕಾಸ್​ ಕುಳಿತಿದ್ದರು. ವಿಕಾಸ್​ ತಮ್ಮ ಸಹೋದರನನ್ನು ಭೇಟಿ ಮಾಡಿ ದಾಂತೇವಾಡ ಜಿಲ್ಲೆಯಲ್ಲಿದ್ದ ತಮ್ಮ ಕ್ಯಾಂಪ್​ಗೆ ಬಸ್​ನಲ್ಲಿ ಮರಳುತ್ತಿದ್ದರು. ಪ್ರಯಾಣದ ನಡುವೆಯೇ ನಿದ್ರೆಗೆ ಜಾರಿದ್ದ ವಿಕಾಸ್​, ತಮ್ಮ ತಲೆಯನ್ನು ಕಿಟಕಿಯಿಂದ ಆಚೆಗೆ ಹಾಕಿದ್ದರು.

    ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟ್ರಕ್ ಒಂದು​ ನಿಯಂತ್ರಣ ಕಳೆದುಕೊಂಡು ವೇಗವಾಗಿ ಅಡ್ಡಾದಿಡ್ಡಿಯಾಗಿ ಬಸ್ಸಿನತ್ತ ನುಗ್ಗಿ ಬರುವುದನ್ನು ಜ್ಯೋತಿ ಗಮನಿಸಿದ್ದರು. ಅಪಾಯದ ಮುನ್ಸೂಚನೆ ಅರಿತ ಜ್ಯೋತಿ ತಕ್ಷಣ ಹಿಂಬದಿ ಸೀಟಿನಿಂದ ಎದ್ದು, ಕಿಟಕಿಯಿಂದ ಹೊರ ಚಾಚಿದ್ದ ವಿಕಾಶ್​ ತಲೆಯನ್ನು ಕಿಟಕಿಯಿಂದ ನೂಕಿದ್ದಾರೆ. ಹೀಗೆ ಮಾಡುವಾಗ ಜ್ಯೋತಿ ಬಲಗೈಗೆ ತೀವ್ರ ಪೆಟ್ಟಾಗಿ ಕೈ ಕಳೆದುಕೊಳ್ಳಬೇಕಾಯಿತು.

    ಕೈಕಳೆದುಕೊಂಡು ಯೋಧನ ಜೀವ ಉಳಿಸಿದ ಜ್ಯೋತಿಯನ್ನು ಸ್ವತಃ ವಿಕಾಶ್​ ಅವರೇ ಪ್ರೀತಿಸಿ ಮದುವೆಯಾಗಿದ್ದಾರೆ. ಬಿಎಸ್ಸಿ ನರ್ಸಿಂಗ್​ ಓದುತ್ತಿದ್ದ ಜ್ಯೋತಿ, ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮದುವೆಯಾಗಿ ಕೇರಳದಲ್ಲೇ ಬಂದು ನಲೆಸಿದರು. ವಿಕಾಶ್​ ಕುಟುಂಬವೂ ಸಹ ತುಂಬು ಮನಸ್ಸಿನಿಂದಲೇ ಜ್ಯೋತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ಇದೀಗ ಕೇರಳದ ಮನೆಮಗಳಾಗಿರುವ ಜ್ಯೋತಿ, ಪಲಕ್ಕಾಡ್​ ಜಿಲ್ಲೆಯ ಕೊಲ್ಲಂಗೊಡೆ ಬ್ಲಾಕ್​ ಪಂಚಾಯಿತಿಯ ಪಲಥುಲ್ಲಿ ವಿಭಾಗದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮತದಾರರಿಂದಲೂ ಜ್ಯೋತಿಗೆ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರು ನನಗೆ ಮತ ಹಾಕ್ತಾರೋ? ಅಥವಾ ಬಿಡ್ತಾರೋ? ಆದರೆ, ನನ್ನೊಂದಿಗೆ ಒಳ್ಳೆಯ ಬಾಂದವ್ಯ ತೋರಿಸುತ್ತಿದ್ದಾರೆ ಎಂದು ಜ್ಯೋತಿ ಹೇಳಿದ್ದಾರೆ.

    ನಾನು ಪ್ರಧಾನಿ ನರೇಂದ್ರ ಮೋದಿ ರಾಜಕಾರಣದಿಂದ ಆಕರ್ಷಿತಳಾಗಿದ್ದೇನೆ. ಅಭ್ಯರ್ಥಿಯಾಗುವಂತೆ ಪಕ್ಷವೇ ನನ್ನನ್ನು ಕೇಳಿದಾಗ ಇಲ್ಲ ಎನ್ನಲು ಆಗಲಿಲ್ಲ. ನನ್ನ ಪತಿ ಮತ್ತು ಅತ್ತೆ-ಮಾವಂದಿರಿಂದ ನನಗೆ ಸಂಪೂರ್ಣ ಬೆಂಬಲ ಇದೆ ಎನ್ನುತ್ತಾರೆ ಜ್ಯೋತಿ.

    ಜ್ಯೋತಿ ಅಪಘಾತದಲ್ಲಿ ಯೋಧನ ಪ್ರಾಣ ಉಳಿಸಲು ಹೋಗಿ ತನ್ನ ಕೈಯನ್ನೇ ಕಳೆದುಕೊಂಡರು. ಇದೀಗ ಅವರು ಕೇರಳದ ಮನೆ ಮಗಳು ಎಂದು ಪಲಕ್ಕಾಡ್​ ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣ ದಾಸ್​ ಹೇಳಿದ್ದಾರೆ. (ಏಜೆನ್ಸೀಸ್​)

    Web Exclusive | ಶಾಖೋತ್ಪನ್ನ ಕೇಂದ್ರ ಪುನರಾರಂಭ; ಸೌರ-ಜಲಮೂಲ ಉತ್ಪಾದನೆ ಇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts