More

    ಅಕ್ಷರ ಕಲಿಸಿದವರ ಸ್ಮರಿಸುವ ಕಾರ್ಯವಾಗಲಿ

    ನೇಸರಗಿ: ಸಮೀಪದ ಹಣಬರಹಟ್ಟಿ ರಾಮಲಿಂಗೇಶ್ವರ ಕೊಳ್ಳದಲ್ಲಿ ಶನಿವಾರ ನೇಸರಗಿ ರಾಜೀವ್ ಗಾಂಧಿ ಯುವ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ನೀಡುವ
    ನಾಡೋಜ ಡಾ.ಸ.ಜ.ನಾಗಲೋಟಿಮಠ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ-2020 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 60 ಶಿಕ್ಷಕರಿಗೆ ಪ್ರಶಸ್ತಿ ವಿತರಿಸಿ, ಗೌರವಿಸಲಾಯಿತು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಳಗಾವಿಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸಿದ ಕೀರ್ತಿ ನಾಗಲೋಟಿಮಠ ಅವರಿಗೆ ಸಲ್ಲುತ್ತದೆ. ಜೀವನಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರನಿಗಿಂತ ಗುರುವಿಗೆ ಪ್ರಮುಖ ಸ್ಥಾನವಿದೆ. ಅಕ್ಷರ ಕಲಿಸಿದ ಗುರುಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಬದುಕಿನ ಗುರಿ ತೋರಿಸುವ ಶಿಕ್ಷಕರನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಮುಂದಿನ ವರ್ಷದಿಂದ ಜಿಲ್ಲಾ ಮಟ್ಟದೊಂದಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಕಾರ್ಯವಾಗಲಿ ಎಂದು ಸಂಘಟಕರಿಗೆ ಸಲಹೆ ನೀಡಿದರು. ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಗೆ, ಮೇಕಲಮರಡಿ, ಹಿರೇನಂದಿಹಳ್ಳಿ ಪ್ರೌಢಶಾಲೆ, ದೇಶನೂರ ವಿಕಾಸ ಪ್ರೌಢಶಾಲೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ನಂತರ ಡಾ.ಸಿ.ಕೆ.ಜೋರಾಪುರ ರಚಿಸಿದ ಕಲಿಯುಗದ ಕಲ್ಪವೃಕ್ಷ ರಾಘವೇಂದ್ರರಾಯರು ಕೃತಿ ಬಿಡುಗಡೆಗೊಳಿಸಲಾಯಿತು. ಹಣಬರಹಟ್ಟಿಯ ಬಸವಲಿಂಗ ಶಿವಾಚಾರ್ಯರು, ಮಲ್ಲಾಪುರದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜೇಶ್ವರಿ ದೊಡಗೌಡರ, ಜಿಪಂ ಸದಸ್ಯ ನಿಂಗಪ್ಪ ಅರಕೇರಿ, ಡಿಡಿಪಿಐ ಆನಂದ ಪುಂಡಲೀಕ, ರಾಜೇಂದ್ರ ದೇಸಾಯಿ, ಆರ್‌ಎ್ಒ ಸುನೀತಾ ನಾಗಲೋಟಿಮಠ, ಡಾ.ಪ್ರಕಾಶ ಹಲ್ಯಾಳ, ಜಿಪಂ ಮಾಜಿ ಸದಸ್ಯ ಈಶ್ವರ ಉಳ್ಳಾಗಡ್ಡಿ, ಶಿಕ್ಷಕ ಅಜ್ಜಪ್ಪ ಉಪ್ಪಾರ, ಯಲ್ಲನಗೌಡ ದೊಡಗೌಡರ, ಅರ್ಜುನ ಕಡೆಟ್ಟಿ, ಪಿಎಸ್‌ಐ ವೈ.ಎಲ್.ಶೀಗಿಹಳ್ಳಿ, ಬಿಇಒಗಳಾದ ಡಾ.ಗುರುನಾಥ ಬಳಿಗಾರ, ಆರ್.ಟಿ. ಬಳಿಗಾರ, ಬಸವರಾಜ ಮಿಲ್ಲಾನಟ್ಟಿ, ಎ.ಎಸ್.ಜೋಡಗೇರಿ, ಅಜ್ಜಪ್ಪ ಹಮ್ಮಿಣಿ, ನಿಂಗನಗೌಡ ದೊಡಗೌಡರ, ಮಂಜುನಾಥ ಹುಲಮನಿ, ಮಹಾಂತೇಶ ಕೂಲಿನವರ, ಬಸವರಾಜ ಜನಕಟ್ಟಿ, ಮಹಾಂತೇಶ ಮೊಹರೆ, ಅಡಿವೆಪ್ಪ ಹೊಸಮನಿ, ಸುರೇಶ ಬೆಣ್ಣಿ, ಬಸವಂತಪ್ಪ ಸೋಮಣ್ಣವರ, ಸಂತೋಷ ಪಾಟೀಲ, ರಾಜಶೇಖರ ಗೆಜ್ಜಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts