More

    ಅವ್ಯವಸ್ಥೆ ವಿರುದ್ಧ ಪಾಲಕರ ಆಕ್ರೋಶ

    ಬೆಳಗಾವಿ: ತಮ್ಮ ಮಕ್ಕಳ ಕೊರಳಿಗೆ ರಾಜ್ಯಪಾಲರು ಚಿನ್ನದ ಪದಕ ಹಾಕುವ ಅವಿಸ್ಮರಣೀಯ ಕ್ಷಣದ ಸಂದರ್ಭ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಪಾಲಕರಿಗೆ ನೇರ ಪ್ರಸಾರದ ವ್ಯವಸ್ಥೆಯಲ್ಲಿ ಉಂಟಾದ ಅವ್ಯವಸ್ಥೆಯಿಂದ ನಿರಾಸೆ ಮೂಡಿಸಿತು.

    ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮ ವಹಿಸಿದ್ದರಿಂದ ಆರ್‌ಸಿಯು 8ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಕೇವಲ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇನ್ನುಳಿದವರಿಗೆ ಮತ್ತೊಂದೆಡೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ರಾಜ್ಯಪಾಲರು ಪದವಿ ಮತ್ತು ಸುವರ್ಣ ಪದಕ ಪ್ರದಾನ ಮಾಡುವ ಸಂದರ್ಭದಲ್ಲಿ ಎಲ್‌ಇಡಿ ಡಿಸ್‌ಪ್ಲೇಯಲ್ಲಿ ವಿದ್ಯಾರ್ಥಿ ಹಾಗೂ ರಾಜ್ಯಪಾಲರ ಮುಖ ಕಾಣದೇ ಅರ್ಧ ದೃಶ್ಯಾವಳಿ ಮಾತ್ರ ಕಾಣಿಸತೊಡಗಿತು. ಇದರಿಂದ ಸಭಾಂಗಣದಲ್ಲಿದ್ದ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಂತ್ರಜ್ಞರನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಕೆಲವರು ೇಸ್‌ಬುಕ್ ಮತ್ತು ಯೂಟೂಬ್‌ನಲ್ಲಿ ಬರುತ್ತಿದ್ದ ನೇರಪ್ರಸಾರದ ಮೊರೆ ಹೋದರು.

    ಹಲವು ದಶಕಗಳ ಕಾಲ ಮಗಳ ವ್ಯಾಸಂಗಕ್ಕೆ ಶ್ರಮಪಟ್ಟು ಆಕೆಯ ಸಾಧನೆಗೆ ಸಿಗುವ ಸುವರ್ಣ ಪದಕದ ಪುರಸ್ಕಾರ ನೋಡಲೆಂದೇ ದೂರದ ಊರಿಂದ ಆಗಮಿಸಿದ್ದೆವು. ಮಗಳು ಅಪರಾಧ ನ್ಯಾಯ ಶಾಸ್ತ್ರ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಿದ್ದ ಸಾಧನೆಗೆ ರಾಜ್ಯಪಾಲರು ಸುವರ್ಣ ಪದಕ ನೀಡುತ್ತಿದ್ದ ಸನ್ನಿವೇಶ ನೋಡಲಾಗಲಿಲ್ಲ.
    | ಶ್ರೀಗುರು ಅಮರೇಂದ್ರ ಗ್ಯಾನಿ ಪಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts