More

    ದೇಶದಲ್ಲಿ ಇತಿಹಾಸದಲ್ಲಿ ಚನ್ನಮ್ಮ, ರಾಯಣ್ಣ ಅಜರಾಮರ

    ಬಂಕಾಪುರ: ಸ್ವಾಭಿಮಾನ ಮತ್ತು ತಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ದೊಡ್ಡ ಹೋರಾಟ ನಡೆಸಿದ ವೀರರಾಣಿ ಕಿತ್ತೂರ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಂತಹ ವೀರರ ಚರಿತ್ರೆ ದೇಶದಲ್ಲಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿದೆ ಎಂದು ರಾಜ್ಯ ಹಾಲುಮತ ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

    ಪಟ್ಟಣದ ಕೊಟ್ಟಿಗೇರಿಯ ಸಭಾಭವನದಲ್ಲಿ ರಾಯಣ್ಣ ಯುವ ಗರ್ಜನೆ ಸೇವಾ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಗೊಳ್ಳಿ ರಾಯಣ್ಣ ಈ ನೆಲದ ಸ್ವತ್ತು. ಅವನ ನಿಸ್ವಾರ್ಥದ ನಡೆ ಇಡೀ ನಾಡಿನ ಜನರಲ್ಲಿ ಉತ್ಸಾಹ ತುಂಬಿತ್ತು. ರಾಯಣ್ಣ ನಮ್ಮೆಲ್ಲರ ಅಂತರಂಗದ ಭಾವನೆಯಾಗಿ ಉಳಿದಿದ್ದಾನೆ. ಯುವಪೀಳಿಗೆಯ ಹೋರಾಟದ ಮನೋಭಾವನೆಗೆ ಸ್ಪೂರ್ತಿಯಾಗಿದ್ದಾನೆ. ಆತನ ಶೌರ್ಯ-ಸಾಹಸ ಆದರ್ಶಗಳು ಮತ್ತು ತ್ಯಾಗ ಬಲಿದಾನಗಳ ಸ್ಮರಣೆ ಅಗತ್ಯವಾಗಿದೆ ಎಂದರು.

    ಪಿಎಸ್‌ಐ ಲಿಂಗರಾಜ ಕರಕನ್ನವರ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅಂಕಿ-ಅಂಶಗಳನ್ನು ಮೀರಿ ಬಲಿದಾನಗಳಾಗಿವೆ. ಭಾರತದ ಸಂಸ್ಕೃತಿ ವಿವಿಧತೆಯಲ್ಲಿ ಏಕತೆ ಹೊಂದಿದೆ. ಹಲವು ಭಾಷೆ, ಆಚಾರ-ವಿಚಾರ, ಉಡುಗೆ- ತೊಡುಗೆಗಳು ಎಲ್ಲವೂ ವಿಭಿನ್ನವಾಗಿವೆ. ಆದರೂ ನಾವು ಅನ್ಯೋನ್ಯವಾಗಿದ್ದೇವೆ ಎಂದರು.

    ಪುರಸಭೆ ಮಾಜಿ ಸದಸ್ಯ ಎನ್.ಎಂ. ಹೊನಕೇರಿ ಮಾತನಾಡಿದರು. ಬೀರಪ್ಪ ಸಣ್ಣತಮ್ಮನವರ, ಶಂಭುಲಿಂಗಪ್ಪ ಆಜೂರ, ರವಿ ಕರಿಗಾರ, ಮಲ್ಲೇಶಪ್ಪ ಕರ್ಜಗಿ, ಶಿವಪ್ಪ ಬಸರಿಕಟ್ಟಿ, ಮಹೇಶ ಕುರುಂದವಾಡ, ಮಾಲತೇಶ ಸಾಲಿ, ನೀಲಪ್ಪ ಸಣ್ಣಕ್ಕಿ, ಬಸವರಾಜ ಕಟ್ಟಿಮನಿ, ರಾಜು ಈಳಿಗೇರ, ಬಸವರಾಜ ಸವೂರ, ಮಧುಕುಮಾರ ಜಂಗಳಿ, ಸಂತೋಷ ಚಾಕಲಬ್ಬಿ, ಶಿವರಾಜ ಗಿಡ್ಡನ್ನವರ ಹಾಗೂ ರಾಯಣ್ಣ ಯುವ ಗರ್ಜನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts