More

    ಮೊಳಗಿದವು ಜಯ ಘೋಷಗಳು

    ಚನ್ನಗಿರಿ: ಗ್ರಾಪಂ ಚುನಾವಣೆ ಫಲಿತಾಂಶ ವೀಕ್ಷಿಸಲು ಸಾವಿರಾರು ಜನ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಸಮೀಪ ಬೆಳಗ್ಗೆಯಿಂದಲೇ ಜಮಾಯಿಸಿದ್ದರು.

    ತಾಲೂಕಿನ ವಿವಿಧ ಗ್ರಾಮಗಳಿಂದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಆಗಮಿಸಿದ್ದರು. ಬೆಳಗ್ಗೆ 8ರಿಂದ ಪೊಲೀಸ್ ಬಿಗಿಭದ್ರತೆಯಲ್ಲಿ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು.

    ಜೂನಿಯರ್ ಕಾಲೇಜು, ಪೊಲೀಸ್ ಮೈದಾನ, ಪಿಎಲ್‌ಡಿ ಬ್ಯಾಂಕ್ ಮೈದಾನ, ಕಗತೂರು ರಸ್ತೆ, ಅಂಚೆ ಕಚೇರಿ ಸಮೀಪ ನೂರಾರು ವಾಹನಗಳು ನಿಂತಿದ್ದವು. ಮತ ಎಣಿಕೆ ಪ್ರಾರಂಭಗೊಂಡು ಫಲಿತಾಂಶ ಹೊರಬರುತ್ತಿದ್ದಂತೆ ಗೆದ್ದವರು ಘೋಷಣೆ ಕೂಗಿ ಸಂಭ್ರಮಿಸಿದರು.

    ಮತಪತ್ರದಲ್ಲಿ ಫೋಟೋ: ನೆಲ್ಲಿಹಂಕಲು ಗ್ರಾಪಂನ ನಾಲ್ಕನೇ ವಾರ್ಡ್‌ನಲ್ಲಿ ಮತದಾರನೊಬ್ಬ ಮತ ಚಲಾಯಿಸದೇ ಮತಪತ್ರದ ಜತೆಗೆ ತನ್ನ ಫೋಟೊ ಹಾಕಿದ್ದ. ಅದನ್ನು ಅಧಿಕಾರಿಗಳು ಕುಲಗೆಟ್ಟ ಮತವೆಂದು ಘೋಷಿಸಿದರು.

    ನವಿಲೇಹಾಳು ಗ್ರಾಪಂನ ವಾರ್ಡ್‌ವೊಂದರಲ್ಲಿ ಬ್ಯಾಲೆಟ್ ಹರಿದು ಹಾಕಿದ್ದರೆ, ಚಿರಡೋಣಿ ಗ್ರಾಪಂನ ಒಂದೇ ವಾರ್ಡ್‌ನಲ್ಲಿ ಮತಪತ್ರವೊಂದರ ಹಿಂದೆ ಸಹಿ ಮಾಡಿ ಹಾಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts