More

    ಒಂಬತ್ತು ಊರುಗಳಲ್ಲಿ ಶರಣರ ಚಿಂತನೆ ಪ್ರಚಾರ

    ಚನ್ನಗಿರಿ: ಒಂಬತ್ತು ಊರುಗಳಲ್ಲಿ ಒಂಬತ್ತು ದಿನ ಬಸವಾದಿ ಶರಣರ ಚಿಂತನೆಗಳನ್ನು ಪ್ರಚಾರ ಮಾಡಲು ಶ್ರಾವಣ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎಂ.ರಾಜಪ್ಪ ತಿಳಿಸಿದರು.

    ತಾಲೂಕು ಪಾಂಡೋಮಟ್ಟಿ ವಿರಕ್ತಮಠದಲ್ಲಿ ಬುಧವಾರ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

    ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ.ಗುರುಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಆಯೋಜಿಸಲಾಗುವುದು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಮತ್ತು ಗಣ್ಯರಿಂದ ಬಸವ ಚಿಂತನೆ ಕುರಿತು ಪ್ರಸಾರ ಮಾಡಲಾಗುವುದು ಎಂದರು.

    ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಮಾತನಾಡಿ, ತಾಲೂಕಿನ ವಡ್ನಾಳ್ ಗ್ರಾಮದ ರೇವಳ್ಳರ ಕೇಶವಣ್ಣ ಅವರ ಮನೆಯಂಗಳದಲ್ಲಿ ಜು. 24ರಂದು ಹಮ್ಮಿಕೊಳ್ಳುವ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮಕ್ಕೆ ಶಾಸಕ ಬಸವರಾಜ್ ಶಿವಗಂಗಾ ಚಾಲನೆ ನೀಡುವರು. ಎಂ.ಬಿ.ನಾಗರಾಜ್ ಕಾಕನೂರು ಕಾಯಕ ದಾಸೋಹ ಕುರಿತು ಉಪನ್ಯಾಸ ನೀಡುವರು ಎಂದು ವಿವರಿಸಿದರು.

    ಹೊನ್ನಾಳಿ ಶಾಸಕ ಶಾಂತನಗೌಡ್ರು, ಕಾರ್ಯದರ್ಶಿ ಕೆ.ಜಿ.ಶಿವಮೂರ್ತಿ, ಟಿ.ವಿ.ಚಂದ್ರಪ್ಪ, ಎಂ.ಯು.ಚನ್ನಬಸಪ್ಪ, ಗರಗ ಜಗದೀಶ್, ನಲ್ಲೂರು ಂಡಿಸತೀಶ್, ಲಿಂಗದಳ್ಳಿ ಜಿ.ಎನ್.ಸ್ವಾಮಿ. ಸಂತೇಬೆನ್ನೂರು ಗುಡಾಳ್ ಮಹೇಶಣ್ಣ, ಮಸಣಿಕೆರೆ ತಿಪ್ಪಣ್ಣ, ಮರವಂಜಿ ಗೌಡ್ರು ತಿಪ್ಪಣ್ಣ, ಎಂ.ಬಿ.ನಾಗರಾಜ್ ಕಾಕನೂರು, ಎಂ.ಜಿ.ಧನಂಜಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts