More

    ನಾಡಿಗಾಗಿ ಹೋರಾಡಿದ ವೀರ ರಾಣಿ ಚನ್ನಮ್ಮ

    ಚನ್ನಗಿರಿ: ಕನ್ನಡನಾಡಿನ ಉಳಿವಿಗಾಗಿ ಹೋರಾಡಿದ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದು ಸಮಾಜ ಸೇವಕಿ ನಲ್ಕುದುರೆ ಶಶಿಕಲಾ ಮೂರ್ತಿ ತಿಳಿಸಿದರು. ತಾಲೂಕಿನ ಕಾಕನೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಣಿ ಚನ್ನಮ್ಮ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಎಂದು ಹೇಳಿದರು.

    ಬ್ರಿಟಿಷರ ಒಪ್ಪಂದಗಳಿಗೆ ಕೈಜೋಡಿಸಿದ್ದರೆ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಬಹುದಿತ್ತು. ಸೈನ್ಯ ಕಟ್ಟಿಕೊಂಡು ಹೋರಾಡಿದರು. ಅವರ ಜೀವನದ ಗುರಿ, ಆದರ್ಶ ಎಲ್ಲ ಮಹಿಳೆಯರಲ್ಲೂ ಬರಬೇಕಿದೆ ಎಂದರು. ಮಹಿಳೆಯರು ಧೈರ್ಯವಾಗಿ ಮನೆಯಿಂದ ಹೊರಬಂದು ಪುರುಷ ಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ಅವಮಾನ, ನೋವು, ಕಷ್ಟಗಳನ್ನು ತಾಳ್ಮೆ, ಧೈರ್ಯವಾಗಿ ಎದುರಿಸಿದಾಗ ಯಶಸ್ವಿ ಕಾಣಲು ಸಾಧ್ಯ ಎಂದು ಹೇಳಿದರು.

    ಪ್ರಭಾರ ಮುಖ್ಯ ಶಿಕ್ಷಕ ಮಹಾಂತೇಶ್ ಶಾಸ್ತ್ರಿ ಮಾತನಾಡಿ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಬ್ಬಕ್ಕ ಅವರು ಶೌರ್ಯದಿಂದ ನಾಡಿಗಾಗಿ ಹೋರಾಡಿದ ವೀರವನಿತೆಯರು. ಅವರ ಜೀವನ ಚರಿತ್ರೆ ಇಂದು ನಮಗೆ ದಾರಿದೀಪವಾಗಿದೆ ಎಂದರು. ಸಿನಿಮಾ ಸಾಹಸ ನಿರ್ದೇಶಕ ಏಕಲವ್ಯ ನಾಗರಾಜ್ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲಗಳನ್ನು ಪ್ರದರ್ಶಿಸಿದರು. ಶಿಕ್ಷಕ ವೀರೇಶ್ ಪ್ರಸಾದ್, ಎಸ್.ಜೆ.ಕಿರಣ್, ಯುವಕವಿ ಗೊಲ್ಲರಹಳ್ಳಿ ಪ್ರಭು, ಎಂ.ಬಿ.ನಾಗರಾಜ್ ಕಾಕನೂರು, ಕಾವ್ಯ, ಸಿದ್ದಯ್ಯ, ನಾಗರಾಜ್, ರಂಗಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts