More

    ಚನ್ನಗಿರಿತಾಲೂಕು ಆಸ್ಪತ್ರೆಯ ಸಿಬ್ಬಂದಿ ವಸತಿಗೃಹ ನಿರ್ಮಾಣಕ್ಕೆ ಗ್ರಹಣ

    ಜಗದೀಶ್ ಟಿ.ಎನ್. ಚನ್ನಗಿರಿ: ಚನ್ನಗಿರಿ ಪುರಸಭೆ ಆಡಳಿತವು ಆರೋಗ್ಯ ಇಲಾಖೆಯ ಕಟ್ಟಡ ತೆರವುಗೊಳಿಸದ ಕಾರಣ ತಾಲೂಕು ಆಸ್ಪತ್ರೆ ಸೇವಾನಿರತ ವೈದ್ಯರು, ಶುಶ್ರೂಷಕ ಸಿಬ್ಬಂದಿಗಳ ವಸತಿಗೃಹ ನಿರ್ಮಾಣಕ್ಕೆ ಗ್ರಹಣ ಹಿಡಿದಿದೆ.

    ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ 9 ವೈದ್ಯರು ಸೇರಿ 30ಕ್ಕೂ ಅಧಿಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಈ ಸಿಬ್ಬಂದಿ ವಾಸಕ್ಕಿರುವ ವಸತಿಗೃಹಗಳು 45 ವರ್ಷಗಳಷ್ಟು ಹಳೆಯದಾಗಿದ್ದು, ಶಿಥಿಲಗೊಂಡು ಮಳೆಗಾಲದಲ್ಲಿ ಸೋರುತ್ತವೆ.

    ಜೀವಭಯದಿಂದಾಗಿ ಇಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಇದನ್ನು ಮನಗಂಡ ಇಲಾಖೆ ಈ ಕಟ್ಟಡ ಕೆಡವಲು ಅನುಮತಿ ನೀಡಿ, ಹೊಸದಾಗಿ ವಸತಿಗೃಹ ನಿರ್ಮಿಸಲು 2021ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರಿಂದ ಸರ್ಕಾರ 2 ಕೋಟಿ ರೂ. ಅನುದಾನ ನೀಡಿದೆ.

    ಆದರೆ, ಈಗಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರಸಭೆ ಆಡಳಿತ ಬಿಟ್ಟು ಕೊಡುವಲ್ಲಿ ವಿಳಂಬ ಮಾಡುತ್ತಿದ್ದು, ಬಿಡುಗಡೆಯಾದ ಅನುದಾನವೂ ವಾಪಸ್ ಹೋಗುವಂತಾಗಿದ್ದು, ವಸತಿಗೃಹ ನಿರ್ಮಾಣ ಕನಸಾಗಿಯೇ ಉಳಿದಿದೆ.

    250 ಹಾಸಿಗೆಗೆ ಮೇಲ್ದರ್ಜೆಗೇರಿಕೆ: ಈಗಿರುವ ಆಸ್ಪತ್ರೆ ನೂರು ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಇದನ್ನು ಸರ್ಕಾರ 150 ಹಾಸಿಗೆಗೆ ಹೆಚ್ಚಿಸಿದೆ. ಇದು ಕಾರ್ಯ ಆರಂಭಿಸಿದರೆ ವೈದ್ಯರು, ಸಿಬ್ಬಂದಿ ಸಂಖ್ಯೆಯೂ ಹೆಚ್ಚಳವಾಗಲಿದೆ. ಆದರೆ, ಅವರಿಗೆ ವಸತಿ ಸೌಲಭ್ಯವಿಲ್ಲ. ಈಗ 9 ವೈದ್ಯರು, 20 ಶುಶ್ರೂಷಕಿಯರು, 20 ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. 32 ಡಿ ದರ್ಜೆ ನೌಕಕರಲ್ಲಿ ಇಬ್ಬರು ಮಾತ್ರ ನೇಮಕಗೊಂಡಿದ್ದು, 30 ಹುದ್ದೆಗಳು ಭರ್ತಿಯಾಗಬೇಕಿವೆ.

    ವೈದ್ಯರು ಹಾಗೂ ಶುಶ್ರೂಷಕರ ವಸತಿ ಕಟ್ಟಡಗಳು ಹಳೆಯದಾಗಿದೆ. ವಾಸವಿರಲು ಯೋಗ್ಯವಿಲ್ಲ. ಹೊಸ ಕಟ್ಟಡ ನಿರ್ಮಿಸಲು ಹಣ ಮಂಜೂರು ಆಗಿದೆ. ವಸತಿಗೃಹ ನಿರ್ಮಿಸುವ ನಿವೇಶದಲ್ಲಿನ ಕಟ್ಟಡ ಪುರಸಭೆಗೆ ಬಾಡಿಗೆ ನೀಡಿದೆ. ಬಿಟ್ಟುಕೊಡುವಂತೆ 2022ರಲ್ಲಿ ಪತ್ರ ಬರೆದಿದ್ದರೂ ಖಾಲಿ ಮಾಡಿಲ್ಲ. ಇದರಿಂದ ಸಿಬ್ಬಂದಿ ವಾಸವಿರಲು ಮನೆ ಇಲ್ಲದಂತಾಗಿದೆ.
    ಡಾ.ಚಂದ್ರಪ್ಪ, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts