More

    ಗುಣಮಟ್ಟದ ವಿದ್ಯುತ್ ಪೂರೈಸುವ ಗುರಿ

    ಚನ್ನಗಿರಿ: ತಾಲೂಕಿನಲ್ಲಿ ಗುಣಮಟ್ಟದ ವಿದ್ಯುತ್ ನೀಡುವುದು ನನ್ನ ಗುರಿಯಾಗಿದ್ದು, ಅಧಿಕಾರಿಗಳು ವಾಸ್ತವ ಸ್ಥಿತಿಗತಿಯ ವರದಿ ಕೊಡುವಂತೆ ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೂಚಿಸಿದರು.

    ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಇಲಾಖೆ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚನ್ನಗಿರಿ, ಸಂತೇಬೆನ್ನೂರು, ತಾವರೆಕೆರೆ ಮತ್ತಿತರ ಕಡೆ ವಿದ್ಯುತ್ ಸಮಸ್ಯೆ ಬಗ್ಗೆ ಸಾರ್ವಜನಿಕರು, ರೈತರಿಂದ ದೂರುಗಳು ಕೇಳಿಬರುತ್ತಿವೆ. ಅನೇಕ ಸಭೆಗಳನ್ನು ನಡೆಸಿದರೂ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ವಿಫಲರಾಗಿದ್ದೇವೆ. ಮಾರ್ಚ್ ಅಂತ್ಯದೊಳಗೆ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿಎಂರಿಂದ ಉಪಕೇಂದ್ರಗಳ ಉದ್ಘಾಟನೆ: ಅಗರಬನ್ನಿಹಟ್ಟಿ, ಹೊನ್ನೇಬಾಗಿ, ಬೆಟ್ಟಕಡೂರು, ಕೋಗಲೂರು, ದಾಗಿನಕಟ್ಟೆ, ಚಿಕ್ಕಗಂಗೂರು, ನಾಗೇನಹಳ್ಳಿ, ಕಾರಿಗನೂರು ಗ್ರಾಮಗಳಲ್ಲಿ ಉಪಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಬೆಂಕಿಕೆರೆ ಗ್ರಾಮದಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ಕಾಮಗಾರಿ ಪೂರ್ಣ ಮುಗಿದಿದೆ. ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಮಾಡಿಸಲಾಗುವುದು. ಸಂತೇಬೆನ್ನೂರಿಗೆ ಸಮರ್ಪಕವಾಗಿ ವಿದ್ಯುತ್ ನೀಡಲು ಇಲಾಖೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

    ಕೆಪಿಟಿಸಿಎಲ್ ಅಭಿಯಂತರ ಜಗದೀಶ್, ಬೆಸ್ಕಾಂ ಅಭಿಯಂತರ ಸುಭಾಷ್, ಇಇ ಎಸ್.ಕೆ.ಪಾಟೀಲ್, ಇಇ ಕುಮಾರಸ್ವಾಮಿ, ಎಇಇ ಲೋಹಿತ್, ಪ್ರವೀಣ್, ಮಲ್ಲಿಕಾರ್ಜುನ, ಅರಣ್ಯ ಇಲಾಖೆ ಎಸಿಎಫ್ ಸುಬ್ರಮಣ್ಯ, ಆರ್‌ಎಫ್‌ಒ ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts