More

    ಕರೊನಾ ವಾರಿಯರ್ಸ್​ಗೆ 5 ಕೋಟಿ ರೂ. ಮೊತ್ತದ ಸ್ಕಾಲರ್​ಶಿಪ್​, ಏನೆಲ್ಲ ಕೊಡುಗೆ ನೀಡಲಾಗುತ್ತಿದೆ ಗೊತ್ತಾ?

    ಚಂಡಿಗಢ್​: ಅಗೋಚರ ಶತ್ರು ಕರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರು ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ. ಇವರಿಗೆ ಸಾಥ್​ ನೀಡುತ್ತಿರುವವರು ಪೊಲೀಸರು ಮತ್ತು ಸ್ವಚ್ಛತಾ ಸಿಬ್ಬಂದಿ.

    ಇವರ ಕಾರ್ಯಕ್ಕೆ ಅಭಿನಂದನೆ ರೂಪದಲ್ಲಿ ಹಲವು ಯೋಜನೆಗಳನ್ನು ಚಂಡಿಗಢ್​ ವಿಶ್ವವಿದ್ಯಾಲಯ ಘೋಷಿಸಿದೆ. ಇವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಶೇ.10 ಸಿಟುಗಳನ್ನು ಮೀಸಲಿಟ್ಟಿದೆ. ಕೋರ್ಸ್​ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಐದು ಕೋಟಿ ರೂ. ಮೊತ್ತದ ಸ್ಕಾಲರ್​ಶಿಪ್​ ಯೋಜನೆಯನ್ನು ಪ್ರಕಟಿಸಿದೆ.

    ವಿಶೇಷವೆಂದರೆ ಮಾಧ್ಯಮದ ಸಿಬ್ಬಂದಿಯನ್ನೂ ಕರೊನಾ ವಾರಿಯರ್ಸ್​ ಎಂದು ವಿವಿ ಪರಿಗಣಿಸಿದೆ ಹಾಗೂ ಮೇಲಿನ ಸೌಲಭ್ಯಗಳಿಗೆ ಅವರೂ ಭಾಜನರೆಂದು ಹೇಳಿದೆ.

    ಈ ಯೋಜನೆಯಡಿಯಲ್ಲಿ ವಿವಿ ಮೂಲಕ ನಡೆಸಲಾಗುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳಲ್ಲಿ ಶೇ.10 ಸೀಟುಗಳನ್ನು ಮೀಸಲಿಡಲಾಗುತ್ತದೆ. ಈ ಯೋಜನೆಯನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸ್​ ಅವಧಿಯುದ್ದಕ್ಕೂ ಶುಲ್ಕದಲ್ಲಿ ಶೇ. 10 ವಿನಾಯ್ತಿ ನೀಡಲಾಗುತ್ತದೆ ಎಂದು ವಿವಿ ಕುಲಪತಿ ಸತ್ನಾಮ್​ ಸಂಧು ಮಾಹಿತಿ ನೀಡಿದ್ದಾರೆ.

    ಕರೊನಾ ವಾರಿಯರ್ಸ್​ಗೆ ಇಡೀ ದೇಶವೇ ಆಭಾರಿಯಾಗಬೇಕಿದೆ. ಅವರ ಕುಟುಂಬದ ಹಾಗೂ ಅವರ ಮಕ್ಕಳಿಗಾಗಿ ವಿವಿ ಸ್ಕಾಲರ್​ಶಿಪ್​ ಯೋಜನೆ ಘೋಷಿಸುವ ಮೂಲಕ ಸಣ್ಣ ಸಹಾಯ ನೀಡುತ್ತಿದೆ ಎಂದು ಸತ್ನಾಮ್​ ತಿಳಿಸಿದ್ದಾರೆ.

    ಇದಲ್ಲದೇ, ವಿವಿ ಮೂಲಕ ಸುತ್ತಲಿನ ಹಳ್ಳಿಗಳ 200ಕ್ಕೂ ಅಧಿಕ ಜನರಿಗೆ ನಿತ್ಯವೂ ಆಹಾರ ಪೂರೈಸಲಾಗುತ್ತಿದೆ. ವಿವಿ 3,500 ಲೀಟರ್​ ಸ್ಯಾನಿಟೈಸರ್​ಅನ್ನು ವಿವಿಧ ಆಸ್ಪತ್ರೆಗಳಿಗೆ ವಿತರಿಸಿದೆ. ಮೊಹಾಲಿಯ ಜಿಲ್ಲಾಡಳಿತಕ್ಕಾಗಿ 1,000 ಹಾಸಿಗೆ ಸಾಮರ್ಥ್ಯದ ಐಸೋಲೇಷನ್​ ಕೇಂದ್ರದ ವ್ಯವಸ್ಥೆ ಸ್ಥಾಪಿಸಿಕೊಟ್ಟಿದೆ ಎಂದು ಹೇಳಿದರು.

    ಅಬ್ಬಾ… ಪಿಯುಸಿ ಪರೀಕ್ಷೆ ನಡೆಸಲ್ವಂತೆ, ನಿಟ್ಟುಸಿರುಬಿಟ್ಟ ವಿದ್ಯಾರ್ಥಿಗಳು, ಆನ್​ಲೈನ್​ ಅಭಿಯಾನಕ್ಕೆ ಮಣಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts