More

    ದಲಿತರಿಗೆ ಚಾಮುಂಡೇಶ್ವರಿ ದರ್ಶನ

    ಮದ್ದೂರು: ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇಗುಲಕ್ಕೆ ತಾಲೂಕು ಆಡಳಿತದ ಸಮ್ಮುಖದಲ್ಲಿ ದಲಿತ ಸಮುದಾಯದವರು ಸೋಮವಾರ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದರು.

    ದೇವಾಲಯ ಉದ್ಘಾಟನೆ ವೇಳೆ ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡದೆ ಅವಮಾನಿಸಿದ್ದರು ಎಂದು ಆರೋಪಿಸಿ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಕೆಲ ಸವರ್ಣಿಯ ಮುಖಂಡರ ವಿರುದ್ಧ ದೂರು ನೀಡಲಾಗಿತ್ತು. ನಂತರ ತಹಸೀಲ್ದಾರ್ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.

    ಟ್ರಸ್ಟ್ ಹೆಸರಿನಲ್ಲಿ ದಲಿತರನ್ನು ಶೋಷಣೆ ನಡೆಸುತ್ತಿದ್ದರು. ಸೋಮವಾರ ತಾಲೂಕು ಆಡಳಿತ ದೇಗುಲ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ನಮಗೆ ನ್ಯಾಯ ದೊರಕಿಸಿದೆ ಎಂದು ದಲಿತ ಮುಖಂಡರು ತಿಳಿಸಿದರು.

    ಮುಂಜಾಗ್ರತೆಯಿಂದ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ತಹಸೀಲ್ದಾರ್ ವಿಜಯ್‌ಕುಮಾರ್, ತಾಪಂ ಇಒ ಜಿ.ಮುನಿರಾಜ, ಡಿವೈಎಸ್ಪಿ ಪೃಥ್ವಿ, ಸಿಪಿಐ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದೇಶ್, ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ದಲಿತ ಮುಖಂಡರಾದ ಸೋಮನಹಳ್ಳಿ ಅಂದಾನಿ, ಮದ್ದೂರು ಶಿವು, ಕಬ್ಬಾಳಯ್ಯ, ಹೊಂಬಯ್ಯ, ಅಂಬರೀಶ್, ರವಿ, ಬಿ.ಪಿ.ಗಿರೀಶ್, ಚನ್ನಕೇಶವ, ನಾರಾಯಣ್, ರಜಿನಿ, ಅಭಿಷೇಕ್, ರಾಜು, ಮರಿದೇವರು ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts