More

    ಎರಡು ಕಡೆ ಟಿಕೆಟ್ ಪಡೆದಿರುವುದು ಸೋಮಣ್ಣ ಸಂಘಟನಾ ತಾಕತ್ತು

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವರುಣ ಹಾಗೂ ಚಾಮರಾಜನಗರ ಕ್ಷೇತ್ರಗಳಿಗೆ ಟಿಕೆಟ್ ಪಡೆದಿರುವುದು ಬ್ಲಾೃಕ್‌ಮೇಲ್ ತಂತ್ರವೆಲ್ಲ, ಅವರಿಗಿರುವ ಸಂಘಟನಾ ತಾಕತ್ತು ಎಂದು ವಿ.ಸೋಮಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ತಿಳಿಸಿದರು.


    ಕೆಆರ್‌ಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಹತಾಶೆಯಿಂದ ಇಂಥ ಹೇಳಿಕೆ ನೀಡಿದ್ದಾರೆ. ಅವರಿಗೆ ಸೋಮಣ್ಣ ತಾಕತ್ತು ಏನು ಎಂಬುದು ಬೆಂಗಳೂರಿನಲ್ಲಿಯೇ ಅರ್ಥವಾಗಿರಬೇಕಲ್ಲವೇ? ರಾಮನಗರದಿಂದ ಚಾಮರಾಜನಗರಕ್ಕೆ ಟಿಕೆಟ್ ಪಡೆದುಕೊಂಡು ಸೋಮಣ್ಣ ಕಟ್ಟಿರುವ ಭದ್ರಕೋಟೆಯನ್ನು ಒಡೆಯಲು ರುದ್ರೇಶ ಬಂದಿದ್ದರು. ಕೇವಲ ಆರು ತಿಂಗಳ ಹಿಂದೆ ಚಾ.ನಗರಕ್ಕೆ ಬಂದ ರುದ್ರೇಶ್‌ಗೆ ಬಿಜೆಪಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯೇ ಬೆಂಬಲ ನೀಡಲಿಲ್ಲ. ಇನ್ನು ಕ್ಷೇತ್ರದ ಜನರ ಬೆಂಬಲ ಪಡೆಯಲು ಸಾಧ್ಯವೇ. ಹೀಗಾಗಿ ಇಂಥ ಬಾಲಿಶ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಸಿದ್ಧಗಂಗಾ ಶ್ರೀಗಳನ್ನು ರಾಜಕೀಯ ಹುನ್ನಾರಕ್ಕೆ ಬಳಸಿಕೊಳ್ಳಲು ರುದ್ರೇಶ್ ಹೊರಟಿದ್ದಾರೆ. ಒಂದು ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗದ ರುದ್ರೇಶ್‌ರಿಂದ ಹೈಕಮಾಂಡ್ ಹಾಗೂ ಸೋಮಣ್ಣ ಪಾಠ ಕೇಳಬೇಕಿಲ್ಲ. ರಾಜ್ಯ ನಾಯಕ ಯುಡಿಯೂರಪ್ಪ, ಯುವ ನಾಯಕ ವಿಜಯೇಂದ್ರ ಅವರ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ರುದ್ರೇಶ್ ನಡೆದುಕೊಳ್ಳುತ್ತಿದ್ದಾರೆ ಎಂದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ವರುಣ ಮತ್ತು ಚಾಮರಾಜನಗರಕ್ಕೆ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದು ಸೋಮಣ್ಣ ಹಾಗೂ ಯಡಿಯೂರಪ್ಪ ಅವರ ನಡುವೆ ಇರುವ ಆತ್ಮೀಯತೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಎಂ.ಸಿ.ಮಲ್ಲದೇವರು, ಬಿಜೆಪಿ ಮುಖಂಡ ಬಸವನಪುರ ರಾಜಶೇಖರ್, ಯುವ ಮುಖಂಡ ಕಾರ್ತಿಕ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಸಿದ್ದರಾಜು, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸಿದ್ದರಾಜು, ಕಾಳನಹುಂಡಿ ಡೇರಿ ಅಧ್ಯಕ್ಷ ಕುಮಾರಸ್ವಾಮಿ ಇತರರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts