More

    ಸಹಕಾರ ಸಂಘಗಳ ಬಲವರ್ಧನೆಯಿಂದ ಗ್ರಾಮ ಅಭಿವೃದ್ಧಿ

    ಚಾಮರಾಜನಗರ: ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿದಷ್ಟು, ಗ್ರಾಮ ಹಾಗೂ ಸಂಘದ ಸದಸ್ಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್.ಬಸವರಾಜು ತಿಳಿಸಿದರು.

    ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಮತ್ತು ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

    ಹರದನಹಳ್ಳಿ ಸಹಕಾರ ಸಂಘವು ಸುಮಾರು 9 ವರ್ಷಗಳ ಹಿಂದೆ ರಚನೆಯಾಗಿ ಕೋಟಿ ಕೋಟಿ ವ್ಯವಹಾರ ನಡೆಸುವ ಮೂಲಕ 45 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ಹೊಂದಿದೆ. ಹರದನಹಳ್ಳಿ ವ್ಯಾಪ್ತಿಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಂಘ ಬೆಳೆಯುತ್ತಿರುವುದು ನಮ್ಮೆಲ್ಲರಿಗು ಸಂತಸವಾಗಿದೆ. ಇಲ್ಲಿನ ಆಡಳಿತ ಮಂಡಲಿ ಮತ್ತು ನೌಕರರ ವರ್ಗದವರ ಸೇವೆ ಅನನ್ಯವಾಗಿದೆ. ಎಲ್ಲ ಸದಸ್ಯರಿಗೂ ಸಂಘದ ಸವಲತ್ತುಗಳು ದೊರೆಯುವಂತಾಲಿ ಎಂದರು.

    ನಬಾರ್ಡ್‌ನ ಡಿಡಿಎಂ ಹಿತಾ ಜಿ.ಸುವರ್ಣ ಮಾತನಾಡಿ, ಹರದನಹಳ್ಳಿ ಸಹಕಾರ ಸಂಘವು ರೈತ ಸದಸ್ಯರಿಗೆ ವಿವಿಧ ಸೇವೆಯನ್ನು ನೀಡುವ ತೆಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಇಂಥ ಸಂಘಗಳು ಗ್ರಾಮಕ್ಕೊಂದು ಸ್ಥಾಪನೆಗೊಂಡು ರೈತರು ಹಾಗೂ ರೈತರ ಮಹಿಳೆಯ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡರೆ ಭಾರತ ದೇಶದ ಅರ್ಥಿಕತೆಯು ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.

    ಸಹಕಾರ ಸಂಘದ ಅಧ್ಯಕ್ಷ ಆರ್.ವೆಂಕಟೇಶ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ.ಸಿದ್ದರಾಜು, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಚ್.ಎನ್.ಸುಂದರರಾಜ್, ಅಮಚವಾಡಿ ನಾಗಸುಂದರ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ತಾ.ಪಂ. ಮಾಜಿ ಸದಸ್ಯ ಎಚ್.ಎಂ. ಮಹದೇವಶೆಟ್ಟಿ, ಸಂಘದ ಉಪಾಧ್ಯಕ್ಷ ಎಂ. ಬಂಗಾರಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಎಂ. ಮಂಜುನಾಥ್, ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಟಿ.ಜಿ. ಅಧಿಶೇಷನ್‌ಗೌಡ, ಜಿ.ಪಂ.ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್, ಮಾಜಿ ಸದಸ್ಯ ರಮೇಶ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸುರೇಶ್ ನಾಗ್, ಸಂಘದ ನಿರ್ದೇಶಕ ಎಸ್.ಪುಟ್ಟರಾಜಶೆಟ್ಟಿ, ಮಹದೇವಶೆಟ್ಟಿ, ಗಿರಿಜಮ್ಮ, ಪಿ.ರವಿಕುಮಾರ್, ಎಂ.ರವಿಕುಮಾರ್, ಬಂಗಾರನಾಯಕ, ಶಫಿ ಅಹಮದ್, ರಾಜಣ್ಣ, ಸಾವಿತ್ರಿ ರವಿ, ಸುಮ ರಾಮಚಂದ್ರ, ನೌಕರರಾದ ಎಸ್. ಮಂಜು, ನವೀನ್‌ಕುಮಾರ್, ಸಿದ್ದರಾಜು, ಯೋಗನರಸಿಂಹಸ್ವಾಮಿ, ಕೃಷ್ಞರಾಜ್, ಗ್ರಾ.ಪಂ. ಸದಸ್ಯರು, ಸಂಘದ ಮಾಜಿ ಅಧ್ಯಕ್ಷರು, ಸದಸ್ಯರು, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts