ಸಿನಿಮಾ

ಚಿತ್ರಮಂದಿರ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಸನ್ಮಾನ

ಚಾಮರಾಜನಗರ: ನಗರದ ಸಿಂಹ ಮೂವೀ ಪ್ಯಾರಡೈಸ್‌ನ 20ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಲಾಯಿತು.

ಚಿತ್ರಮಂದಿರದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಲೀಕರಾದ ಜಸಿಂಹ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮತ್ತು ನೈಸರ್ಗಿಕ ಕೃಷಿಕ ಶ್ರೀನಿಧಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ಸಮುಧಾಯದ ಭಾರತಿ ಅವರನ್ನು ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು, 20 ವರ್ಷದ ಹಿಂದೆ ಪ್ರಾರಂಭಗೊಂಡ ಈ ಚಿತ್ರಮಂದಿರ ಪ್ರೇಕ್ಷಕ್ಷರ, ನಿರ್ಮಾಪಕ, ವಿತರಕರ ಸಹಕಾರದಿಂದ ಸುಧೀರ್ಘ ಪಯಣಕ್ಕೆ ಸಾಧ್ಯವಾಯಿತು. ಇಂದಿನ ಚಿತ್ರರಂಗದ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಪ್ರೇಕ್ಷಕರ ಮನಮುಟ್ಟುವಂತೆ ಚಲನ ಚಿತ್ರಗಳನ್ನು ನಿರ್ಮಾಣ ಮಾಡಲು ನಿರ್ಮಾಪಕರು ವಿಫಲರಾಗಿದ್ದಾರೆ. ಈ ಕಾರಣದಿಂದ ರಾಜ್ಯದ ಬಹುತೇಕ ಚಿತ್ರ ಮಂದಿರಗಳು ನಷ್ಟದಲ್ಲಿದೆ ಮತ್ತು ನೆಲಸಮವಾಗಿದೆ ಎಂದು ವಿಷಾದಿಸಿದರು.

ಏಕ ಪರದೇ ಚಿತ್ರ ಮಂದಿರಗಳು ರಾಜ್ಯದಲ್ಲಿ ಉಳಿಯ ಬೇಕಾದರೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಪರಿಹಾರ ಸೂತ್ರವನ್ನು ರೂಪಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಹುತೇಕ ಚಿತ್ರ ಮಂದಿರಗಳು ನಷ್ಟವನ್ನು ಭರಿಸಲಾಗದೇ ಮುಚ್ಚುವ ಹಂತಕ್ಕೆ ತಲುಪಬಹುದು ಎಂದರು. ಪರಸರ ಪ್ರೇಮಿ ಸಿ.ಎಂ.ವೆಂಕಟೇಶ್, ನಾಗರಾಜು, ಅಜೀಮ್‌ಪಾಷ, ಬಸವಣ್ಣ, ಹಾಗೂ ಅರ್ಚಕರಾದ ಪಾಲಕ್ಷ ಭಾರದ್ವಾಜ್, ಅಜೀತ್‌ಕುಮಾರ್‌ಸಿಂಹ, ಮಂಗಳಾ ಜಯಸಿಂಹ ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು.

Latest Posts

ಲೈಫ್‌ಸ್ಟೈಲ್