More

    ರಂಗಭೂಮಿ ಪ್ರಬಲವಾದಂತೆ ಸಾಮಾಜಿಕ ಏಕ್ಯತೆ ಸಾಧ್ಯ

    ಚಾಮರಾಜನಗರ: ಸಾಂಸ್ಕೃತಿಕ ಚಟುವಟಿಕೆಗಳು, ವ್ಯವಹಾರಗಳು ಹೆಚ್ಚಾದಂತೆ ಸಾಮಾಜಿಕ ಏಕ್ಯತೆ ಸಾಧ್ಯವಾಗುತ್ತದೆ ಎಂದು ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಹಿರಿಯ ಸಾಹಿತಿ ಮಂಜುನಾಥ್ ಪ್ರಸನ್ನ ಹೇಳಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಹಾಗೂ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ, ಯುವಕ-ಯುವತಿಯರಿಗೆ ಅಭಿನಯ ಹಾಗೂ ನಾಟಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ವಿಶ್ವವನ್ನೇ ರಂಗಭೂಮಿ ಎಂದು ನೇಡುವುದೇ ಆದರೆ ನಾವೆಲ್ಲರೂ ಇಲ್ಲಿ ಅಭಿನಯ ಮಾಡುವವರೇ ಆಗಿದ್ದೇವೆ. ಆದರೆ ರಂಗಸಜ್ಜಿಕೆಯ ಮೇಲೆ ಮಾತ್ರ ನಮ್ಮ ಅಭಿನಯ ಸಾಕಾರಗೊಳ್ಳುತ್ತದೆ. ಪ್ರಪಂಚದಾದ್ಯಂತ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ದೊಡ್ಡ ಕಲಾವಿದರು ರಂಗಭೂಮಿಯ ಹಿನ್ನೆಲೆಯಿಂದಲೇ ಬಂದಿರುವುದು ಎಂಬುದು ರಂಗಭೂಮಿಯ ಶಕ್ತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.

    ರಂಗಭೂಮಿ ನಮ್ಮನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋದರು, ಸಾಮಾನ್ಯನಂತೆ ಬದುಕುವುದನ್ನು ಕಲಿಸಿಕೊಡುತ್ತದೆ. ಮನುಷ್ಯರನ್ನು ಖುಷಿಯಿಂದ ಇರುವಂತೆ ಮಾಡುವ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ರಂಗಭೂಮಿ ಕಲೆಯನ್ನು ಗ್ರಾಮೀಣ ಭಾಗದ ಜನರು ಇಂದಿಗೂ ಜೀವಂತವಾಗಿ ಉಳಿಸಿದ್ದಾರೆ ಎಂದರು.
    ಸಂವಿಧಾನ ತಜ್ಞ ಮತ್ತು ವಸತಿಯುಕ್ತ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜ್ ಮಾತನಾಡಿ, ರಂಗಭೂಮಿ ಕಲಾವಿದರಲ್ಲಿ ಸಮಾನತೆ ಹಾಸುಹೊಕ್ಕಾಗಿರುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯುವಕರು ನಿರಂತರವಾಗಿ ಭಾಗವಹಿಸುವುದರಿಂದ ಜಾಗೃತಿಯಿಂದ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ರಂಗಸಜ್ಜಿಕೆ ವಿನ್ಯಾಸಕ ಮಧುಸೂದನ್ ಎಸ್.ಹೊಸೂರು, ಕಲಾವಿದ ಕಲೆನಟರಾಜ್, ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಜನ್ನೂರು ಹೊಸೂರು, ಶಿಬಿರದ ಸಂಚಾಲಕ ಶಿವಶಂಕರ್ ಎನ್.ಚಟ್ಟು ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts