More

    ರೋಗಿಷ್ಟ ಆಡಳಿತ ಮಂಡಳಿಯಿಂದ ಸಿಮ್ಸ್‌ಗೆ ಕಳಂಕ

    ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯಲ್ಲಿರುವ ರೋಗಿಷ್ಟ ವೈದ್ಯರು ಹಾಗೂ ಆಡಳಿತ ಮಂಡಳಿಯಿಂದ ಸಿಮ್ಸ್‌ಗೆ ಕಳಂಕ ಬಂದಿದೆ ಎಂದು ಪ್ರಗತಿಪರ ಚಿಂತಕ ಉಗ್ರನರಸಿಂಹಗೌಡ ಆರೋಪಿಸಿದರು.

    ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಈ ಹಿಂದೆ ನಡೆಯುತ್ತಿದ್ದ ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಈ ವರೆಗೂ ಅದು ಬದಲಾಗಿಲ್ಲ. ಮಹಿಳೆಗೆ ದೌರ್ಜನ್ಯವಾಗಿದೆ ಎಂದು ಕೇಳಲು ಹೋದಾಗ ಸುಳ್ಳು ಆರೋಪಗಳನ್ನು ಮಾಡಿ ಹಲವು ಹೊರಗುತ್ತಿಗೆ ನೌಕರರ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಸಂಬಂಧ ಪ್ರತಿಭಟನೆ ಮಾಡುವಾಗ ಪೊಲೀಸರು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

    ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ ಮಾತನಾಡಿ, ಮೊದಲನೇ ಕೋವಿಡ್ ಅಲೆ ಬಂದಾಗ ಸುಮಾರು 45 ಸ್ಟಾಪ್‌ನರ್ಸ್‌ಗಳನ್ನು ಕರ್ತವ್ಯಕ್ಕೆ ತೆಗೆದುಕೊಂಡಿದ್ದರು. ಅವರಿಗೆ 25 ಸಾವಿರ ರೂ. ಬದಲು 20 ಸಾವಿರ ವೇತನ ವಂಚಿಸಲಾಗಿತ್ತು. ಪ್ರಸ್ತುತ ಆಸ್ಪತ್ರೆಯಲ್ಲಿ 73 ಜನರು ಹೊರಗುತ್ತಿಗೆ ನೌಕರರು ಕರ್ತವ್ಯ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ 63 ಜನರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ಉಳಿದ 10 ಜನರ ಹೆಸರಿನಲ್ಲಿ ಅಕ್ರಮವಾಗಿ ಸಂಬಳ ಡ್ರಾ ಮಾಡಲಾಗುತ್ತಿದೆ. ಈ ಭ್ರಷ್ಟಚಾರಕ್ಕೆ ನಿವಾಸಿ ವೈದ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರು ಸಹಿ ಹಾಕುವ ಮೂಲಕ ಪರೋಕ್ಷವಾಗಿ ನೆರವಾಗಿದ್ದಾರೆ. ಈ ಹಿಂದೆ ಇದ್ದ ವಿಘ್ನೇಶ್ವರ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು, ಸ್ಟೋರ್ ಕೀಪರ್ ಹೆಸರಿನಲ್ಲಿ ವೈದ್ಯಕೀಯ ಆಸ್ಪತ್ರೆಯಲ್ಲಿ ಅಕ್ರಮವಾಗಿ 15 ಜನರ ಹೆಸರಿನಲ್ಲಿ ಬಿಲ್ ಆಗುತ್ತಿದೆ ಎಂದು ಆರೋಪಿಸಿದರು.

    ಗೋಷ್ಠಿಯಲ್ಲಿ ಹೊರಗುತ್ತಿಗೆ ನೌಕರರಾದ ಕುಮಾರ್, ಡಿ.ಮಹದೇವ್, ಬೀರೇಗೌಡ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts