More

    ಮತದಾನ ಹೆಚ್ಚಳಕ್ಕೆ ನಿರಂತರ ಪ್ರಯತ್ನ

    ಚಾಮರಾಜನಗರ: ಚಾ.ನಗರ ಲೋಕಸಭಾ ಕ್ಷೇತ್ರದ ಚುನಾವಣಾ ದಿನ ಈಗಾಗಲೇ ೋಷಣೆಯಾಗಿದ್ದು, ಕ್ಷೇತ್ರದಲ್ಲಿ ಈ ಬಾರಿ ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಶೇಷವಾಗಿ ಮೊಬೈಲ್‌ಆ್ಯಪ್ ಮೂಲಕ ಮಾಹಿತಿ ನೀಡಲು ಮುಂದಾಗಿದ್ದು, ವಿಭಿನ್ನ ಮತಗಟ್ಟೆಗಳನ್ನು ತೆರೆಯಲು ಸಿದ್ಧತೆ ಕೈಗೊಳ್ಳಲಾಗಿದೆ.

    ಚಾ.ನಗರ ಲೋಕಸಭಾ ಚುನಾವಣೆ ಏ.26 ರಂದು ನಡೆಯಲಿದೆ. ಚುನಾವಣೆಯನ್ನು ನ್ಯಾಯಯುತವಾಗಿ, ಪಾರದರ್ಶಕವಾಗಿ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. 2019 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 8.42,742 ಪುರುಷ, 8,43,167 ಮಹಿಳೆ ಹಾಗೂ 114 ಇತರೆ ಮತದಾರರನ್ನು ಒಳಗೊಂಡಂತೆ ಒಟ್ಟು 16, 86,023 ಮತದಾರರು ಇದ್ದರು.

    ಚುನಾವಣೆಯಲ್ಲಿ ಸುಮಾರು 12,68,742 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಶೇ.75.22 ರಷ್ಟು ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದು, ಅದರಲ್ಲೂ ಮಹಿಳೆ ಮತ್ತು ಯುವ ಮತದಾರರನ್ನು ಮತಗಟ್ಟೆಯತ್ತಾ ಸೆಳೆಯುವ ಉದ್ದೇಶದಿಂದ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.

    ಈ ಬಾರಿಯ ಚುನಾವಣೆಯಲ್ಲಿ ವಿಶೇಷವಾಗಿ ಚುನಾವಣಾ ಪ್ರಕ್ರಿಯೆಗಳನ್ನು ತಮ್ಮ ಅಂಗೈಯಲ್ಲಿ ತಿಳಿಯುವ ನಿಟ್ಟಿನಲ್ಲಿ ಮೊಬೈಲ್‌ಆ್ಯಪ್ ತಂತ್ರಾಂಶವನ್ನು ಪರಿಚಯಿಸಲಾಗಿದೆ. ವಿಶೇಷ ಚೇತನರ ನೋಂದಣಿ ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಸ್ಥಿತಿ-ಗತಿಗಳನ್ನು ಆ್ಯಪ್ ಮೂಲಕ ತಿಳಿಬಹುದಾಗಿದೆ. ಅದಲ್ಲದೇ ಮತದಾರರನ್ನು ಮತಗಟ್ಟೆಯತ್ತಾ ಸೆಳೆಯುವ ಪ್ರಯತ್ನವಾಗಿ ವಿಭಿನ್ನ ಹೆಸರಿನಲ್ಲಿ ಮತಗಟ್ಟೆಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಹಲವಾರು ವಿಭಿನ್ನ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

    ರಾಯಭಾರಿಯಾಗಿ ಚಿತ್ರನಟರ ನೇಮಕ:
    ಚುನಾವಣೆಯ ಪರ್ವ, ದೇಶದ ಗರ್ವ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಸಲು ಮುಂದಾಗಿರುವ ಚುನಾವಣಾ ಆಯೋಗ ಈಗಾಗಲೇ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲೂ ಸ್ವೀಪ್ ಸಮಿತಿಯನ್ನು ರಚಿಸಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮತದಾರರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ರಾಯಭಾರಿಯಾಗಿ ಚಲನಚಿತ್ರನಟ ಕಾರ್ತಿಕ್ ಮಹೇಶ್ ಹಾಗೂ ನಟ, ನಿರ್ದೇಶಕ ನಾಗಭೂಷಣ್ ಅವರನ್ನು ನೇಮಕಮಾಡಲಾಗಿದೆ. ಸಮತಾ ಸೊಸೈಟಿಯ ಅಧ್ಯಕ್ಷೆ ದೀಪಾಬುದ್ಧೆ ಅವರನ್ನು ತೃತೀಯ ಲಿಂಗಿಗಳ ರಾಯಭಾರಿಯಾಗಿ ನೇಮಿಸಿದೆ. ಅದಲ್ಲದೇ ಮತದಾರರ ಜಾಗೃತಿ ವೇದಿಕೆ ಮತ್ತು ಮತದಾರರ ಸಾಕ್ಷರತಾ ಸಂಘಗಳನ್ನು ಈಗಾಗಲೇ ರಚಿಸಲಾಗಿದ್ದು, ಶಾಲಾಕಾಲೇಜುಗಳಲ್ಲಿ ಮತ್ತಷ್ಟು ಅರಿವು ಮೂಡಿಸಲಾಗುತ್ತಿದೆ. ಮತದಾರರಿಗೆ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಈ ಎಲ್ಲಾ ಕಾರ್ಯಕ್ರಗಳು ಮತದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೆರವಾಗಲಿದೆ.

    ಮೊಬೈಲ್ ಆ್ಯಪ್ ಬಲ:
    ಲೋಕಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತು ನಿಗಾವಹಿಸಲು ಈ ಬಾರಿ ಚುನಾವಣಾ ಆಯೋಗವು ಸಿವಿಐಜಿಐಎಲ್ ಎಂಬ ತಂತ್ರಾಂಶವನ್ನು ಪರಿಚಯಿಸಿದ್ದು, ಸಾರ್ವಜನಿಕರು ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ದಾಖಲಿಸಬಹುದಾಗಿದೆ. ಈ ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಮತದಾರರ ಪಟ್ಟಿಯಲ್ಲಿ ಹೆಸರು, ನೋಂದಣಿಗಾಗಿ ಅರ್ಜಿಸಲ್ಲಿಸುವುದು ಮತ್ತು ಇನ್ನಿತರೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಮಾಣ ಪತ್ರ, ನಮೂನೆಗಳು, ಲಿತಾಂಶ, ಮತದಾರರ ಜಾಗೃತಿ ಮತ್ತಿತರ ಪ್ರಮುಖ ಸೂಚನೆಗಳನ್ನು ಈ ಆ್ಯಪ್ ಒಳಗೊಂಡಿರುತ್ತದೆ. ಪಿಡಬ್ಲಯೂ ಆ್ಯಪ್ ಮತ್ತು ಸುವಿಧ ಕ್ಯಾಂಡಿಡೇಟ್ ಆ್ಯಪ್ ಕೂಡ ಈ ಬಾರಿಯ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಬಲ ನೀಡುತ್ತದೆ ಎಂದು ಹೇಳಲಾಗುತ್ತಿದೆ.

    ವಿಭಿನ್ನ ಮತಗಟ್ಟೆಗಳ ಸ್ಥಾಪನೆ:
    ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮತದಾರರನ್ನು ಮತಗಟ್ಟೆಯತ್ತಾ ಸೆಳೆಯುವ ಉದ್ದೇಶದಿಂದ ವಿಭಿನ್ನವಾದ ಹೆಸರಿನಲ್ಲಿ ಮತಗಟ್ಟೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಿಳೆಯರಿಗಾಗಿ ಸಖಿ ಸೌರಭ, ಅಂಗವಿಕಲರಿಗಾಗಿಯೇ ವಿಶೇಷ ಮತಗಟ್ಟೆ, ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕಲಾಸೊಬಗು ತೋರಿಸುವ ಮತಗಟ್ಟೆ, ಈ ಭಾಗದಲ್ಲಿ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಾಗಿರುವ ನಿಟ್ಟಿನಲ್ಲಿ ಸೋಲಿ ಸಂಸ್ಕೃತಿ ಮತ್ತು ಅರಣ್ಯ ಸೊಬಗು ತೋರಿಸುವ ಮತಗಟ್ಟೆ ಹಾಗೂ ವಿಶೇಷವಾಗಿ ರೈತರಿಗಾಗಿ ಅನ್ನದಾತ ಮತಗಟ್ಟೆಗಳನ್ನು ತೆರೆಯಲು ಜಿಲ್ಲಾಸ್ವೀಪ್ ಸಮಿತಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಮಹಿಳೆಯರು ಮತ್ತು ಯುವ ಸಮುದಾಯದ ಮತದಾರರು ಹೆಚ್ಚಾಗಿದ್ದು, ಅವರೆಲ್ಲರನ್ನೂ ಮತಗಟ್ಟೆಗೆ ಕರೆತರುವ ಪ್ರಯತ್ನವನ್ನು ಸ್ವೀಪ್ ಸಮಿತಿ ನಿರಂತರವಾಗಿ ಮಾಡುತ್ತಲೇ ಇದೆ. ಮತದಾರರು ಕೂಡ ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗದೆ ಮತ ಚಲಾಯಿಸಿದರೆ, ಪ್ರಜಾಪ್ರಭುತ್ವದ ಮೌಲ್ಯವೂ ಹೆಚ್ಚುತ್ತದೆ. ಸ್ವೀಪ್ ಸಮಿತಿಯ ಪ್ರಯತ್ನಕ್ಕೆ ಉತ್ತಮ ಲ ದೊರಕಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts