More

    ಸತತ ಅಭ್ಯಾಸದಿಂದ ಯಶಸ್ಸು ಸಾಧ್ಯ

    ಚಾಮರಾಜನಗರ: ಸತತ ಅಧ್ಯಯನ, ಆತ್ಮವಿಶ್ವಾಸದಿಂದ ಓದಿದರೆ ಯಶಸ್ಸು ಸುಲಭವಾಗಿ ದೊರೆಯುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಅಭಿಪ್ರಾಯಪಟ್ಟರು.

    ನಗರದ ಸಂತ ಪೌಲರ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಿದ್ದರಾಗುತ್ತಿರುವ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳು ತಮ್ಮದೆ ಆದ ಗುರಿ ಇಟ್ಟುಕೊಂಡು, ವೇಳಾಪಟ್ಟಿ ಸಿದ್ದಪಡಿಸಿಕೊಂಡು ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ದರಾಗಬೇಕು. ಕಠಿಣ ವಿಷಯಗಳನ್ನು ಬರೆದು ಅಭ್ಯಾಸ ಮಾಡಬೇಕು. ವರ್ಷವೆಲ್ಲ ಕೇಳಿದ, ಓದಿದ ವಿಷಯಗಳನ್ನು ಪರೀಕ್ಷೆಯ ದಿನದ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವುದೇ ಮುಖ್ಯವಾಗಿರುತ್ತದೆ. ಸಮಯ ನಿರ್ವಹಣೆ, ಅಂದವಾದ ಬರವಣಿಗೆ, ಅಂಕಗಳಿಗೆ ಅನುಸಾರ ಉತ್ತರ ಬರೆಯುವಿಕೆ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

    ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಸಂಪನ್ಮೂಲ ಶಿಕ್ಷಕ ಶಿವಕುಮಾರ ಸ್ವಾಮಿ, ಹೇಮಚಂದ್ರ, ಬಸವರಾಜು, ಬಸವಲಿಂಗಪ್ಪ, ನಾಗರಾಜು, ಶಿಕ್ಷಣ ಸಂಯೋಜಕ ಹಾಗೂಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಮಲ್ಲಪ್ಪ, ನೇಮಿರಾಜ್, ಮುಖ್ಯ ಶಿಕ್ಷಕ ಕುಳಂದೈಸ್ವಾಮಿ, ಮಂಜುಳಾ, ಅರ್ಕಪ್ಪ, ನಟರಾಜು, ಸಿದ್ದರಾಜು, ಸುಮನಕುಮಾರಿ, ಗೌರಮ್ಮ, ರಾಜಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts