More

    ತಲೆದೋರಲಿದ್ದ ಕಾವೇರಿ ವಿವಾದ ಸದ್ಯಕ್ಕೆ ದೂರ: ಎಷ್ಟು ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ?

    ಚಾಮರಾಜನಗರ: ವರುಣನ ಅಬ್ಬರದ ಪರಿಣಾಮ ಉಕ್ಕಿ ಹರಿದ ಕಾವೇರಿ ತಮಿಳುನಾಡಿನ ನೀರಿನ ದಾಹ ತಣಿಸಿದ್ದಾಳೆ. ಇದರಿಂದಾಗಿ ತಲೆದೋರಲಿದ್ದ ಕಾವೇರಿ ವಿವಾದ ಸಧ್ಯಕ್ಕೆ ದೂರವಾಗಿದೆ.

    ಕಬಿನಿ ಹಾಗು ಕೆ.ಆರ್.ಎಸ್ ನಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನಲೆಯಲ್ಲಿ ಒಂದೇ ವಾರದಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು ಹರಿದಿದೆ. ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಹೊಗೇನಕಲ್ ಮೂಲಕ ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು ಸೇರಿದೆ.

    ಆಗಸ್ಟ್ 7 ರಂದು ಕೇವಲ 28.99 ಟಿಎಂಸಿ ಇದ್ದ ನೀರು ಇಂದು 61.54 ಟಿಎಂಸಿಗೆ ಏರಿಕೆಯಾಗಿದೆ. ಮೆಟ್ಟೂರು ಜಲಾಶಯದ ಗರಿಷ್ಠ ಮಟ್ಟ 120 ಅಡಿ ಇದ್ದು ಆಗಸ್ಟ್ 7 ರಂದು ನೀರಿನ ಮಟ್ಟ 65 ಅಡಿ ಇತ್ತು. ಇದೀಗ ಜಲಾಶಯದ ನೀರಿನ ಮಟ್ಟ 97 ಅಡಿಗೆ ಏರಿದ್ದು ಒಂದೇ ವಾರದಲ್ಲಿ 32 ಅಡಿ ಭರ್ತಿಯಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts