More

    ಕರೊನಾದಿಂದ ರಕ್ಷಿಸಿಕೊಳ್ಳಲು ದೇವರ ಮೊರೆ ಹೋದ ಚಾಮರಾಜನಗರ ಜನತೆ: 12 ದಿನ ವಿಶೇಷ ಪೂಜೆ

    ಚಾಮರಾಜನಗರ: ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಮಹಾಮಾರಿ ಕರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಚಾಮರಾಜನಗರದ ಜನರು ದೇವರ ಮೊರೆ ಹೋಗಿದ್ದಾರೆ.

    ಕರೊನಾ ಸೋಂಕು ಹರಡದಂತೆ ಚಾಮರಾಜನಗರದ ನಗರದ ಬಣಜಿಗರ ಬೀದಿ, ಕುರುಬರ ಬೀದಿ, ನಾಯಕರ ಬಡಾವಣೆ ಹಾಗೂ ಗಂಗಮತಸ್ಥರ ಬೀದಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ರಸ್ತೆಯನ್ನು ಸಗಣಿಯಿಂದ ತೊಳೆದು ಸ್ವಚ್ಛಗೊಳಿಸಿ, ಮನೆ ಮುಂದೆ ರಂಗೋಲಿ ಬಿಟ್ಟು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ದೊಡ್ಡದಾಗಿ ರಂಗೋಲಿ ಬಿಟ್ಟು ಮಧ್ಯಭಾಗದಲ್ಲಿ ಹಳತೋಡಿ ಬಲಿದಾನದ ಅನ್ನವಿಟ್ಟು, ಸುತ್ತಲೂ ಬೇವಿನ ಸೊಪ್ಪಿನಿಂದ ಹೊಗೆ ನೀಡುತ್ತಿದ್ದು, ಕರೊನಾ ಆದಷ್ಟು ಬೇಗ ಬಿಟ್ಟು ಹೋಗಲಿ ಎಂದು ಜನರು ಧೂಪ ಹಾಕಿದರು.

    ಪ್ರತಿ ಮನೆಯ ಬಾಗಿಲು ಮುಂದೆ ಬಲಿದಾನದ ಅನ್ನ ಹಾಕಿ ಪೂಜೆ ಮಾಡಲಾಗುತ್ತಿದೆ. ಮಾರಿಯರು, ಮಸಣಿಯರು, ಪೀಡೆ-ಪಿಶಾಚಿ ಬೀದಿಗೆ ನುಗ್ಗಬಾರದು ಹಾಗೂ ಮನೆಯೊಳಗೆ ಬರಬಾರದು, ಕರೊನಾ ಸೋಂಕು ಒಬ್ಬರಿಂದ‌ ಮತ್ತೊಬ್ಬರಿಗೆ ತಗುಲಬಾರದು ಎಂದು ಈ ರೀತಿ ಆಚರಣೆ ಮಾಡಲಾಗುತ್ತಿದೆ.

    ಮಂಡಿ ಮಾರಮ್ಮ ಮತ್ತು ಮಲೆಮಹದೇಶ್ವರನನ್ನು ನೆನೆದು ಕರೊನಾದಿಂದ ಮುಕ್ತಿ ನೀಡುವಂತೆ ಇಲ್ಲಿನ ನಿವಾಸಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಹೀಗೆ 12 ದಿನಗಳ ಕಾಲ ಪ್ರತಿ ರಾತ್ರಿ ಪೂಜೆ ಮುಂದುವರಿಸಲು ಎಲ್ಲರೂ ನಿರ್ಧಾರ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ

    ಕೇರಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಕಾಂಗ್ರೆಸ್​!

    ಮಕ್ಕಳ ಕಾಳಜಿ ಅಗತ್ಯ; ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts