More

    ಜಿಲ್ಲೆಗೆ ಘೋಷಣೆಯಾಗದ ವಿಶೇಷ ಪ್ಯಾಕೇಜ್

    ಚಾಮರಾಜನಗರ: ರಾಜ್ಯ ಬಜೆಟ್ ಮೇಲೆ ಜಿಲ್ಲೆಯ ಜನತೆ ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿವೆ. ವಿಶೇಷ ಪ್ಯಾಕೇಜ್ ೋಷಿಸಬೇಕೆಂಬ ಒತ್ತಾಯಕ್ಕೆ ರಾಜ್ಯ ಸರ್ಕಾರ ಮನ್ನಣೆ ನೀಡಿಲ್ಲ. ಸಿಕ್ಕಿರುವ ಕೊಡುಗೆಗಳಿಗೆ ತೃಪ್ತಿಪಟ್ಟಿಕೊಳ್ಳಬೇಕಾಗಿದೆ.


    ತಾಲೂಕಿನ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ವಸಾಹತು ಸ್ಥಾಪನೆ ಕುರಿತು ಈಗಾಗಲೇ ಅಸೂಚನೆ ಹೊರಬಿದ್ದಿರುವುದರಿಂದ ಈ ೋಷಣೆ ವಿಶೇಷವೆನಿಸಲಿಲ್ಲ. ಆದರೆ ಮಾನವ-ಪ್ರಾಣಿ ಸಂಘರ್ಷದಲ್ಲಿ ಸೆರೆ ಹಿಡಿದ ವನ್ಯಜೀವಿಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಯಳಂದೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು ಹೊಸ ೋಷಣೆಯಾಗಿದೆ.


    ಪರಿಸರವಾದಿಗಳ ಆತಂಕ: ಬಜೆಟ್‌ನಲ್ಲಿ ಸಂಘರ್ಷ ಕ್ಷೇತ್ರದಿಂದ ಸೆರೆ ಹಿಡಿದ ವನ್ಯಜೀವಿಗಳನ್ನು ಬಂಡೀಪುರಕ್ಕೆ ಬಿಡುವ ಬಗ್ಗೆ ಸರ್ಕಾರ ಪ್ರಕಟಿಸಿರುವುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.
    ಈಗಾಗಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ದಿನನಿತ್ಯವೂ ವನ್ಯಜೀವಿಗಳ ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಮಾನವ ವನ್ಯಜೀವಿ ಸಂಘರ್ಷ ತಾರಕ್ಕಕ್ಕೇರಿದೆ. ಹಲವೆಡೆ ಹುಲಿ, ಚಿರತೆ, ಆನೆಗಳು ಜಾನುವಾರು ಹಾಗೂ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಮತ್ತೊಂದೆಡೆ ತಮ್ಮ ಬೆಳೆಗಳ ರಕ್ಷಣೆಗೆ ಅಳವಡಿಸಿದ ವಿದ್ಯುತ್ ಅಕ್ರಮ ಸಂಪರ್ಕದಿಂದ ವನ್ಯಜೀವಿಗಳೂ ಸಾವಿಗೀಡಾಗುತ್ತಿವೆ.
    ಕಳೆದ ತಿಂಗಳು ಗೋಪಾಲಪುರ ಗ್ರಾಮದಲ್ಲಿ ಆನೆ ದಾಳಿಗೆ ನಾಗಪ್ಪ ಎಂಬ ರೈತರ ಕಾಲು ಮುರಿದಿತ್ತು. ಹತ್ತು ದಿನಗಳ ಹಿಂದೆ ತಾಲೂಕಿನ ಕೆಬ್ಬೇಪುರ ಗ್ರಾವದ ಕೆರೆಯಲ್ಲಿ ಪತ್ತೆಯಾದ ಮೃತ ಹುಲಿಯ ಕುತ್ತಿಗೆ ಹಾಗೂ ಕೊರಳಿಗೆ ಕಲ್ಲುಗಳನ್ನು ತಂತಿಯಿಂದ ಕಟ್ಟಿ ನೀರಿಗೆ ಮುಳುಗಿಸಲಾಗಿತ್ತು. ನಾಲ್ಕು ದಿನಗಳ ಹಿಂದೆ ನಾಗಾಪಟ್ಟಣ ಗ್ರಾಮದಲ್ಲಿ ಜಮೀನಿಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಂತಿ ತಂತಿ ಸ್ಪರ್ಶಿಸಿ ಆನೆಯೊಂದು ಸಾವು -ಬದುಕಿನ ನಡುವೆ ಹೋರಾಟ ನಡೆಸುವಂತಾಗಿತ್ತು.
    ಇಂತಹ ಸಂಘರ್ಷಗಳು ಪ್ರತಿನಿತ್ಯವೂ ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಇದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕಾಡಂಚಿನ ಗ್ರಾಮಸ್ಥರಲ್ಲಿ ವ್ಯಾಪಕವಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಂಘರ್ಷ ನಡೆಸಿದ ವನ್ಯಜೀವಿಗಳನ್ನು ತಂದು ಬಂಡೀಪುರಕ್ಕೆ ಬಿಡುವುದರಿಂದ ಮತ್ತಷ್ಟು ಸಂಘರ್ಷಗಳಿಗೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಆತಂಕವ್ಯಕ್ತಪಡಿಸಿದ್ದಾರೆ.

    ಬಹುದಿನಗಳ ಬೇಡಿಕೆ
    ಯಳಂದೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಬಜೆಟ್‌ನಲ್ಲಿ ಘೋಷಿಸಿರುವುದರಿಂದ ತಾಲೂಕಿನ ಜನತೆ ಸಂತಸಗೊಂಡಿದ್ದಾರೆ. ರಾಜ್ಯದಲ್ಲೇ ಅತ್ಯಂತ ಚಿಕ್ಕ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ- ಪಂಗಡ, ಹಿಂದುಳಿದ ವರ್ಗದ ಸಮುದಾಯದ ಜನರೇ ಹೆಚ್ಚಾಗಿ ವಾಸಿಸುವ ಕೇಂದ್ರದಲ್ಲಿ ಉತ್ತಮವಾದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಇರಲಿಲ್ಲ. ಇದರಿಂದ ಜನರು ಪರದಾಟ ನಡೆಸುತ್ತಿದ್ದರು. ಸಣ್ಣಪುಟ್ಟ ಚಿಕಿತ್ಸೆಗೆ, ಕೊಳ್ಳೇಗಾಲ, ಚಾಮರಾಜನಗರ, ಮೈಸೂರು, ಪಟ್ಟಣಗಳಿಗೆ ತೆರಳಬೇಕಾಗಿತ್ತು. ಇದರಿಂದ ಅಕ ಹಣ ಖರ್ಚು ಮಾಡುತ್ತಿದ್ದರು. ಈ ಹಿಂದೆ 2007ರಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರ್ಕಾರ ಗಮನಕ್ಕೆ ತಂದು ಅನುಮೋದಿಸಿದ್ದರು.
    ಆದರೆ, ಇದಕ್ಕೆ ಅನುದಾನದ ಕೊರತೆ ಮತ್ತು ಜಾಗದ ಸಮಸ್ಯೆಯಿಂದಾಗಿ ನನೆಗುದಿಗೆ ಬಿದ್ದಿತು. ಈ ಬಗ್ಗೆ ತಾಲೂಕಿನ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಭ್ರಷ್ಟಾಚಾರ ವಿರೋ ಆಂದೋಲನ ವೇದಿಕೆ, ರೈತ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದವು. ಶಾಸಕ ಮಹೇಶ್ ಅವರ ಪ್ರಯತ್ನದಿಂದ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-2023ರ ಬಜೆಟ್‌ನಲ್ಲಿ ಅನುಮೋದಿಸಿರುವುದು ಉತ್ತಮ ಬೆಳವಣಿಗೆ ಆಗಿದೆ. ಆದಷ್ಟು ಬೇಗ ಇದಕ್ಕೆ ಅನುದಾನ ನೀಡಿ ಬಡ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ಲಭಿಸಲಿ.

    ಸಿಕ್ಕಿದ್ದೇನು?
    *ಯಳಂದೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸುವುದು.
    *ಸಂಘರ್ಷ ಕ್ಷೇತ್ರದಲ್ಲಿ ಸೆರೆ ಹಿಡಿಯಲ್ಪಟ್ಟ ವನ್ಯಜೀವಿಗಳನ್ನು ನೈಸರ್ಗಿಕ ಆವಾಸ ಸ್ಥಳ ಗುರುತಿಸಿ ಬಿಡುಗಡೆ ಮಾಡಲು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
    *ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಚಾಮರಾಜನಗರ ತಾಲೂಕಿನ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ವಸಾಹತು ಸ್ಥಾಪನೆ(ಈ ಸಂಬಂಧ ಈಗಾಗಲೇ ಅಸೂಚನೆ ಹೊರಡಿಸಲಾಗಿದೆ)

    ನಿರೀಕ್ಷೆಗಳೇನಿತ್ತು?
    *ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
    *ಕಾವೇರಿ ಕುಡಿಯುವ ನೀರಿನ ಯೋಜನೆ
    *ಚಾಮರಾಜನಗರ-ಕೊಳ್ಳೇಗಾಲ-ಕನಕಪುರ-ಬೆಂಗಳೂರು ಮಾರ್ಗದಲ್ಲಿ ರೈಲು
    *ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ
    *ಕಬಿನಿ ಎರಡನೇ ಹಂತದ ಯೋಜನೆ

    ಬಜೆಟ್‌ನಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ೋಷಿಸಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕಾಗಿ ತಾಲೂಕಿನ ಡಿಎಸ್‌ಎಸ್ ಸೇರಿದಂತೆ ಇನ್ನಿತರ ಪ್ರಗತಿಪರ ಸಂಘಟನೆಗಳು ಬಹಳಷ್ಟು ಕಾಲ ಹೋರಾಟ ಪ್ರತಿಭಟನೆ ಮನವಿ ಸಲ್ಲಿಸಿದ್ದವು. ಆದಷ್ಟು ಬೇಗ ಆಸ್ಪತ್ರೆ ಮೇಲ್ದರ್ಜೆಗೇರಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲಿ.
    ಯರಿಯೂರು ರಾಜಣ್ಣ
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ, ಚಾಮರಾಜನಗರ

    ಪುಂಡಾಟ ನಡೆಸುವ ಆನೆ, ದಾಳಿ ನಡೆಸುವ ಚಿರತೆ ಹಾಗೂ ಹುಲಿಗಳನ್ನು ಸೆರೆ ಹಿಡಿದು ಬಂಡೀಪುರಕ್ಕೆ ಬಿಡುವುದರಿಂದ ಮೂಲ ಸ್ಥಾನಕ್ಕೆ ಹಿಂದಿರುಗುವ ಉದಾಹರಣೆಗಳಿವೆ. ಅವು ಬಲಿಷ್ಠವಾಗಿದ್ದರೆ ಸ್ಥಳೀಯ ಪ್ರಾಣಿಗಳ ಜತೆ ಕಾದಾಟ ನಡೆಸುವುದರಿಂದ ಜೀವಕ್ಕೆ ಹಾನಿಯಾಗಲಿದೆ. ಇದರ ಬದಲಾಗಿ ಇದೇ ವೆಚ್ಚದಲ್ಲಿ ವನ್ಯಜೀವಿಗಳು ಹೊರ ಬರದಂತೆ ಮಾಡಲು ಇನ್ನೂ ಎತ್ತರದ ಬೇಲಿಗಳು, ಕಾಡಂಚಿನಲ್ಲಿ ಬಫರ್ ವಲಯ ನಿರ್ಮಿಸುವುದು ಸೇರಿದಂತೆ ಇತ್ತೀಚೆಗೆ ಹೆಚ್ಚುತ್ತಿರುವ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
    ಆರ್.ಕೆ.ಮಧು
    ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts