More

    ಇನಾಂ ಕಾಯ್ದೆ ರದ್ದತಿಗೆ ಸತ್ತೇಗಾಲ ಗ್ರಾಮಸ್ಥರ ಆಗ್ರಹ

    ಚಾಮರಾಜನಗರ, ಕೊಳ್ಳೇಗಾಲ, ಕಂದಾಯ ಸಚಿವ, ಆರ್.ಅಶೋಕ್, ಸತ್ತೇಗಾಲ ಗ್ರಾಮಸ್ಥರು

    ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದ ನೂರಾರು ರೈತರು ಹಲವು ತಲೆಮಾರಿನಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ಜಾಗೇರಿ ಭಾಗದ ಪಿತ್ರಾರ್ಜಿತ ಜಮೀನನ್ನು ಸರ್ಕಾರ ಹಿಂದೆ ಇನಾಂ ಆಕ್ಟ್‌ಗೆ ಸೇರಿಸಿರುವುದನ್ನು ರದ್ದು ಮಾಡಬೇಕು ಎಂದು ಬುಧವಾರ ಕಂದಾಯ ಸಚಿವ ಆರ್.ಆಶೋಕ್ ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು.
    ಬೆಂಗಳೂರಿನಿಂದ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಸಚಿವರು ವಾಹನದಲ್ಲಿ ತೆರಳುವ ವೇಳೆ ಸತ್ತೇಗಾಲದಲ್ಲಿ ಗ್ರಾಮಸ್ಥರಾದ ಸುಂದ್ರಪ್ಪ, ಸಿದ್ದರಾಜು, ಸಿ.ರಾಜುಗೌಡ, ರಾಜಪ್ಪ, ಜಿ.ಮಹೇಶ್, ರಾಮಚಂದ್ರಗೌಡ, ಜಿ.ನರೇಂದ್ರ, ಶಿವಪ್ಪ, ನಂಜುಂಡಯ್ಯ ಇತರರು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್ ನೇತೃತ್ವದಲ್ಲಿ ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.
    ಸತ್ತೇಗಾಲದ ರೈತಾಪಿ ವರ್ಗ ನೂರಾರು ವರ್ಷದಿಂದ ವ್ಯವಸಾಯ ಮಾಡಿಕೊಂಡಿರುವ ಜಾಗೇರಿ ಬಳಿಯ ಜಮೀನಿಗೂ ಸತ್ತೇಗಾಲದ ಜಾಗೀರ್‌ದಾರ್ ಯಾವುದೇ ಸಂಬಂಧವಿಲ್ಲ. ಜಾಗೀರ್‌ದಾರ್ ಅವರಿಗೆ ಸೇರಿದ ಅರಣ್ಯ ಭೂಮಿಯಿದ್ದು, ಅದರಲ್ಲಿ ನಾವುಗಳು ವ್ಯವಸಾಯ ಮಾಡುತ್ತಿಲ್ಲ. ಹೀಗಿದ್ದರೂ ಪಿತ್ರಾರ್ಜಿತವಾಗಿ ವ್ಯವಸಾಯ ಮಾಡುತ್ತಿರುವ ನಮ್ಮ ಜಮೀನುಗಳನ್ನು ಸರ್ಕಾರ ಇನಾಂ ಜಮೀನು ಎಂದು ನಮೂದಿಸಿ, ಇನಾಂ ಆಕ್ಟ್ ಪ್ರಕಾರ ರೈತರ ಜಮೀನನ್ನು ಸೇರಿಸಿ ಅಬಾಲೀಸ್ ಮಾಡಿರುವುದು ತಪ್ಪಾಗಿದೆ. ಇದರಿಂದ ನಮ್ಮ ಜಮೀನುಗಳ ಖಾತೆ ಬದಲಾವಣೆ ಮತ್ತು ಜಮೀನು ವರ್ಗಾವಣೆಗಳಿಗೆ ತೊಂದರೆ ಆಗಿದೆ. ಆದ್ದರಿಂದ ಹಿಂದೆ ಆಗಿರುವ ಈ ಇನಾಂ ಕಾಯ್ದೆಯನ್ನು ರದ್ದುಗೊಳಿಸಿ ಹೊಸದಾಗಿ ಸರ್ವೇ ಮಾಡಿಸುವಂತೆ ಮನವಿ ಪತ್ರದಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    ಚಾಮರಾಜನಗರದಲ್ಲಿ ಆಯೋಜಿಸಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts