More

    ಕರೊನಾ ನಿಯಂತ್ರಣಕ್ಕೆ ಸ್ವಯಂ ನಿರ್ಬಂಧ ಅಗತ್ಯ

    ಚಳ್ಳಕೆರೆ: ಕರೊನಾ ವೈರಸ್ ನಿಯಂತ್ರಣಕ್ಕೆ ಸ್ವಯಂ ನಿರ್ಬಂಧ ಅಗತ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

    ಮಂಗಳವಾರ ನಗರದ ಶಾಸಕರ ಭವನ ಆವರಣದಲ್ಲಿ ಹಮ್ಮಿಕೊಂಡಿದ್ದ 3912 ಅಂಗವಿಕಲರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕರೊನಾ ವೈರಸ್‌ಗೆ ಹೆದರಿ ಕೆಲವರು ಮನೆಯಿಂದ ಹೊರಗೆ ಬರುತ್ತಿಲ್ಲ. ಅದರಲ್ಲೂ ಬಿಜೆಪಿ ಶಾಸಕರು, ಮುಖಂಡರು ಯಾರೊಬ್ಬರೂ ಜನರೊಟ್ಟಿಗೆ ಬೆರೆಯುತ್ತಿಲ್ಲ. ಕಾಂಗ್ರೆಸ್ ಶಾಸಕರು ಮಾತ್ರ ತಮ್ಮ ಕ್ಷೇತ್ರಗಳಲ್ಲಿ ವೈರಸ್ ನಿಯಂತ್ರಣಕ್ಕೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದರು.

    ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ಜನರ ದಿಕ್ಕು ತಪ್ಪಿಸುವ ರೀತಿಯಲ್ಲಿ ಕೇಂದ್ರದಿಂದ 20 ಲಕ್ಷ ಕೋಟಿ ರೂ. ಯೋಜನೆ ಮತ್ತು ರಾಜ್ಯ ವಿಶೇಷ ಪ್ಯಾಕೇಜ್ ಘೋಷಿಸಿವೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

    ಶಾಸಕ ಟಿ. ರಘುಮೂರ್ತಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಅನ್ನಭಾಗ್ಯ ಯೋಜನೆ ಪ್ರಸ್ತುತ ಕರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಆಧಾರವಾಗಿದೆ. ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಕಷ್ಟಗಳಿಗೆ ಪರಿಹಾರ ನೀಡಲಾಗಿದೆ. ಪ್ರಸ್ತುತ ಅಂಗವಿಕಲರಿಗೆ ಸ್ವಂತ ಖರ್ಚಿನಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಮಾಜಿ ಸಚಿವ ಡಿ. ಸುಧಾಕರ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿಎಂಕೆ ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ಕುಮಾರ್, ಜಿಪಂ ಸದಸ್ಯರಾದ ಬಿ.ಪಿ. ಪ್ರಕಾಶಮೂರ್ತಿ, ಡಾ. ಯೋಗೇಶ್‌ಬಾಬು, ಮಾಜಿ ಸದಸ್ಯ ಟಿ. ರವಿಕುಮಾರ್, ಮುಖಂಡರಾದ ಟಿ. ಪ್ರಭುದೇವ್, ಎಸ್.ಎಚ್. ಸೈಯದ್, ಸಿ. ವೀರಭದ್ರಬಾಬು, ಎಸ್. ಮುಜೀಬುಲ್ಲಾ, ಕಂದಿಕೆರೆ ಸುರೇಶ್‌ಬಾಬು, ರೆಡ್ಡಿಹಳ್ಳಿ ಶಿವಣ್ಣ, ನಗರಸಭೆ-ತಾಪಂ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts