More

    ಅಕ್ಷರ ಕಲಿಕೆಗೆ ಬಡತನ ನೆಪ ಸಲ್ಲ

    ಚಳ್ಳಕೆರೆ: ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸಲು ತಾಲೂಕು ಕೇಂದ್ರದಲ್ಲಿ ಇಂಜಿನಿಯರಿಂಗ್ ಕಾಲೇಜು, 46 ಕೋಟಿ ರೂ. ವೆಚ್ಚದಲ್ಲಿ ವೃತ್ತಿಪರ ತರಬೇತಿ ಕೇಂದ್ರ ತೆರೆಯಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಡತನ, ಕೌಟುಂಬಿಕ ಸಮಸ್ಯೆ ಅಕ್ಷರ ಕಲಿಕೆಗೆ ಅಡ್ಡಿಯಲ್ಲ. ಈ ನೆಪವೊಡ್ಡಿ ಶಿಕ್ಷಣ ಮೊಟಕುಗೊಳಿಸಬೇಡಿ. ಶ್ರಮಪಟ್ಟು ಓದಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆ ಇರಬೇಕು. ಅನ್ಯಾಯ ಖಂಡಿಸಲು ವಿದ್ಯಾರ್ಥಿ ಶಕ್ತಿ ಬಳಕೆಯಾಗಬೇಕು. ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪಡೆದ ಶಿಕ್ಷಣವನ್ನು ಬದುಕಿನ ಭದ್ರತೆಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

    ಶಾಲಾ ಸಮಿತಿ ಸದಸ್ಯರಾದ ಕುಶಾಲಪ್ಪ, ಬಿ.ಕೆ.ಅನ್ವರ್ ಅಹಮ್ಮದ್, ತ್ಯಾಗರಾಜ, ನಗರಸಭೆ ಸದಸ್ಯ ಬಿ.ಟಿ.ರಮೇಶ್ ಗೌಡ, ಮುಖಂಡರಾದ ಆರ್.ಪ್ರಸನ್ನಕುಮಾರ್, ರಾಮಾಂಜನೇಯ, ಪ್ರಾಚಾರ್ಯ ಪ್ರೊ.ಜಿ.ವೆಂಕಟೇಶ್, ಪ್ರೊ.ಎಂ.ಶಿವಲಿಂಗಪ್ಪ, ಡಾ.ಜಿ.ಎಲ್.ರಾಜಶೇಖರ್, ಡಾ.ಕೆ.ಚಿತ್ತಯ್ಯ, ಪ್ರೊ.ಎಸ್.ಮಂಜುನಾಥ, ಡಾ.ರಾಜೇಶ್ವರಿ, ಡಾ.ವೈ.ಪ್ರಕಾಶ್, ಬಿ.ಶ್ರೀಕಂಠಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts