More

    ಅರ್ಧ ಊರಿಗಿಲ್ಲ ಕುಡಿವ ನೀರು

    ಚಳ್ಳಕೆರೆ: ತಾಲೂಕಿನ ಕುರುಡಿಹಳ್ಳಿ ಗ್ರಾಮದಲ್ಲಿ ಅರ್ಧ ಊರಿಗೆ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ. ಇನ್ನುಳಿದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರಾದ ಶಾರದಮ್ಮ, ಜಯಮ್ಮ, ದ್ಯಾಮಕ್ಕ, ಶ್ವೇತಾ, ಮೈಲಾರಿ ಅಳಲು ತೊಡಿಕೊಂಡಿದ್ದಾರೆ.

    ಗ್ರಾಮದ ಕೆಲ ಭಾಗದಲ್ಲಿ ಪ್ರತಿ ಮನೆಗಳಿಗೂ ನಲ್ಲಿ ಹಾಕಿಕೊಳ್ಳಲಾಗಿದೆ. ನೀರು ಬಿಟ್ಟ ತಕ್ಷಣ ಮೋಟಾರ್ ಹಾಕಿಕೊಂಡು ಕೊಡ, ತೊಟ್ಟಿ ತುಂಬಿಸಿಕೊಳ್ಳುತ್ತಾರೆ. ಸಾರ್ವಜನಿಕ ನಲ್ಲಿಗಳಿಗೆ ನೀರು ಬರುವುದೇ ಕಡಿಮೆ. ಆಳದ ಗುಂಡಿಗಳ ಒಳಗಿರುವ ನಲ್ಲಿಗಳಲ್ಲೂ ನೀರು ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ರಾಮಜೋಗಿಹಳ್ಳಿ ಗ್ರಾಪಂ ಪಿಡಿಒ ನಾಗರಾಜ್ ಹೇಳಿಕೆ: ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಸಕರ ಸಹಕಾರದಿಂದ 650 ಅಡಿಯಂತೆ ಎರಡು ಬೋರ್ ಕೋರಿಸಿದರು ನೀರು ಲಭ್ಯತೆ ಇಲ್ಲ. ದೂರದ ನಲ್ಲಜಮ್ಮನಹಟ್ಟಿನಿಂದ ಪೈಪ್ ಲೈನ್ ಮೂಲಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲ ಮನೆಗಳಲ್ಲಿ ನಲ್ಲಿಗಳಿಗೆ ಮೋಟಾರ್ ಜೋಡಣೆ ಮಾಡಿರುವುದು ತಿಳಿದುಬಂದಿದೆ. ತಕ್ಷಣ ತಹಸೀಲ್ದಾರ್ ಗಮನಕ್ಕೆ ವರದಿ ಮಾಡಿ, ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts