More

    ಜಾತಿ ವ್ಯವಸ್ಥೆ ನಿರ್ಮೂಲನೆ ಅಗತ್ಯ

    ಚಳ್ಳಕೆರೆ: ಸಾಮಾಜಿಕ ತಾರತಮ್ಯ ಮತ್ತು ಜಾತಿ ಪದ್ಧತಿ ವ್ಯವಸ್ಥೆಗಳು ಮುಕ್ತವಾದಾಗ ಮಾತ್ರ ಸಮಾಜದ ಬದಲಾವಣೆಗೆ ಅರ್ಥ ಬರಲು ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಗರಿಕ ಹಕ್ಕು ಸಂರಕ್ಷಣೆ ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ಪ್ರತಿಬಂಧ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಣದಿಂದ ಅಮೂಲಾಗ್ರ ಬದಲಾವಣೆ ಕಾಣಬಹುದು. ಆದರೆ, ವಿದ್ಯಾವಂತ ಸಮಾಜದಲ್ಲೂ ಜಾತಿ ವ್ಯವಸ್ಥೆ ಜೀವಂತವಾಗಿರುವುದು ದುರದುಷ್ಟಕರ. ಮನುಷ್ಯ ಸಾಮಾಜಿಕವಾಗಿ ಬದಲಾವಣೆ ಆಗಬೇಕು. ಪ್ರತಿಯೊಬ್ಬರೂ ಸಮಾನತೆಯ ಮನೋಭಾವನೆ ರೂಢಿಸಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

    ಜಾತಿ ವ್ಯವಸ್ಥೆ ನಿರ್ಮೂಲನೆಗೆ ಕಾನೂನುಗಳಿವೆ. ಆದರೆ, ಇದನ್ನು ಧಿಕ್ಕರಿಸಿ ಅಸ್ಪಶ್ಯ ಆಚರಣೆ, ದೌರ್ಜನ್ಯ ದಬ್ಬಾಳಿಕೆ ಮರುಕಳಿಸಿದಾಗ ಶಿಕ್ಷಿಸುವ ಕೆಲಸ ಆಗಬೇಕು. ಶೋಷಣೆಗೆ ಒಳಗಾದ ಕುಟುಂಬಗಳಿಗೆ ಬದುಕಿನ ಭದ್ರತೆ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.

    ದೇಶದ ಯಾವುದೇ ಮೂಲೆಯಲ್ಲೂ ಜಾತಿ ಪದ್ಧತಿ ಕಂಡು ಬಂದಲ್ಲಿ ವಿರೋಧಿಸುವ ಶಕ್ತಿ ಒಗ್ಗೂಡಬೇಕು. ಎಸ್ಸಿ, ಎಸ್ಟಿ ವಿಶೇಷ ಕಾನೂನುಗಳು ಪರಿಪಾಲನೆ ಆಗಬೇಕು. ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ಧಕ್ಕಿಸಿಕೊಡುವಂತ ಕೆಲಸ ಸಂಘಟನೆಗಳು ಮಾಡಬೇಕು ಎಂದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ತಾಪಂ ಸದಸ್ಯ ಎಚ್.ಸಮರ್ಥರಾಯ, ಗ್ರಾಪಂ ಅಧ್ಯಕ್ಷೆ ತಿಪ್ಪಕ್ಕ, ಮಾಜಿ ಅಧ್ಯಕ್ಷ ಬಿ.ಆರ್.ರಮೇಶ, ಸದಸ್ಯರಾದ ಕೆ.ಟಿ.ನಿಜಲಿಂಗಪ್ಪ, ಮಂಜುಳಮ್ಮ, ಗೋಪಾಲಪ್ಪ, ಶಿವಣ್ಣ, ಸುನೇತ್ರಾ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ವಕೀಲ ಜಡೇಕುಂಟೆ ಕುಮಾರ್, ಪಿಡಿಒ ಗುಂಡಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts