More

    10 ಸಾವಿರ ಗಿಡ ನೆಡುವ ಗುರಿ

    ಚಳ್ಳಕೆರೆ: ತಾಲೂಕಿನ ಪ್ರಮುಖ ರಸ್ತೆಗಳ ಬದಿ ಸೇರಿ ಅರಣ್ಯ ಸ್ಥಳಗಳಲ್ಲಿ 10 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಎಸ್.ಸುರೇಶ್ ಹೇಳಿದರು.

    ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಳೆದ ವರ್ಷ ಅರಣ್ಯ ಪ್ರದೇಶದಲ್ಲಿ 10 ಸಾವಿರಕ್ಕೂ ಅಧಿಕ ಬೀಜದುಂಡೆಗಳನ್ನು ಊರಲಾಗಿತ್ತು. ಮಳೆಯ ನೀರಿಗೆ ಮಣ್ಣಲ್ಲಿ ಬೆರೆತು ಸಮೃದ್ಧ ಬೆಳೆದಿದ್ದು ಪ್ರಸ್ತುತ ಅಭಿಯಾನದಂತೆ 375 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಗಿಡ ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

    ನಗರದ ಹೊರವಲಯ ಇಮಾಂಪುರ ಸಮೀಪ ಸಸ್ಯ ಕ್ಷೇತ್ರದಲ್ಲಿ ಹೆಬ್ಬೇವು, ಹುಣಸೆ, ಶ್ರೀಗಂಧ, ರಕ್ತಚಂದನ, ಸಾಗುವಾನಿ, ತೇಗ ಸೇರಿ ವಿವಿಧ ಜಾತಿಯ 4 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ರೈತರಿಗೆ 3 ರೂ. ಬೆಲೆಗೆ ವಿತರಿಸಲಾಗುತ್ತದೆ. ಕೃಷಿಕರು ತಮ್ಮ ಜಮೀನುಗಳಲ್ಲಿ ಬೆಳೆಸಿಕೊಂಡ ಗಿಡಗಳಿಗೆ ಪ್ರತೀ ವರ್ಷ ಪೋತ್ಸಾಹ ನೀಡುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

    ಸಮಾಜದಲ್ಲಿ ಪರಿಸರ ಪ್ರೀತಿಸುವ ಮನೋಭಾವ ಬರಬೇಕು. ಗಿಡ ಮರಗಳನ್ನು ಕಡಿಯುವುದು ನಿಲ್ಲಿಸಬೇಕು. ಪ್ರಾಣಿ-ಪಕ್ಷಿಗಳಿಗೆ ಗಿಡ ಮರಗಳೆ ಆಶ್ರಯವಾಗಿರುತ್ತವೆ. ಹಸಿರೀಕರಣದಿಂದ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts