More

    ವ್ಯವಹಾರಕ್ಕೆ ಜಿಎಸ್‌ಟಿ ಜಾರಿ ಅಡ್ಡಿ ಮಾಡದು

    ಚಳ್ಳಕೆರೆ: ಅಂಗಡಿಗೆ ಬರುವ ಗ್ರಾಹಕರಲ್ಲಿ ಇನ್ನೂ ಪ್ಲಾಸ್ಟಿಕ್ ಕವರ್‌ಗಳ ವ್ಯಾಮೋಹ ಕಡಿಮೆಯಾಗಿಲ್ಲ. ಇದರಿಂದಾಗುವ ಅನಾನುಕೂಲಗಳ ಬಗ್ಗೆ ತಿಳಿಸುವ ಮೂಲಕ ಬಟ್ಟೆ ಕವರ್ ಬಳಸುವಂತೆ ಮನವೊಲಿಸಲಾಗುತ್ತಿದೆ ಎಂದು ಜನರಲ್ ಸ್ಟೋರ್‌ವೊಂದರ ಮಾಲೀಕ ಶ್ರೀಧರ್ ಹೇಳಿದರು.

    ನಗರದ ನೆಹರು ವೃತ್ತ ಸಮೀಪದ ಅಂಗಡಿಯೊಂದಕ್ಕೆ ಬುಧವಾರ ಆಕಸ್ಮಿಕ ಭೇಟಿ ನೀಡಿದ್ದ ಶಾಸಕ ಟಿ.ರಘುಮೂರ್ತಿ ಅವರು ಕೇಳಿದ ಪ್ಲಾಸ್ಟಿಕ್ ಕವರ್ ರದ್ದತಿ, ಜಿಎಸ್‌ಟಿ ಜಾರಿಯಿಂದ ವ್ಯವಹಾರದ ಮೇಲಾದ ಪರಿಣಾಮ ಕುರಿತ ಪ್ರಶ್ನೆಗೆ ಉತ್ತರಿಸಿದರು.

    ಪ್ಲಾಸ್ಟಿಕ್ ಕವರ್ ಉತ್ಪಾದನೆ ಸಂಪೂರ್ಣ ನಿಲ್ಲದ ಕಾರಣ ಗ್ರಾಹಕರನ್ನು ಬಟ್ಟೆ ಬ್ಯಾಗ್ ಕಡೆ ಮನವೊಲಿಸುವುದು ಕಷ್ಟವಾಗುತ್ತಿದೆ. ಜಿಎಸ್‌ಟಿ ಜಾರಿಯಿಂದ ವ್ಯವಹಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಕಂಪನಿಗಳಿಂದಲೇ ಜಿಎಸ್‌ಟಿ ಜಮಾ ಆಗಿ ವಸ್ತುಗಳು ಮಾರುಕಟ್ಟೆಗೆ ಬರುವುದರಿಂದ ತೆರಿಗೆ ಸಂಗ್ರಹದಲ್ಲಿ ಯಾವುದೇ ಮೋಸವಾಗುತ್ತಿಲ್ಲ ಎಂದು ತಿಳಿಸಿದರು.

    ಪ್ರತಿಕ್ರಿಯಿಸಿರುವ ಶಾಸಕರು, ವ್ಯಾಪಾರ ವಹಿವಾಟುದಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ದಿಢೀರ್ ಪ್ಲಾಸ್ಟಿಕ್ ಕವರ್ ರದ್ದು ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದಿತ್ತು. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿ, ಜಾನುವಾರುಗಳ ಜೀವಕ್ಕೆ ಕುತ್ತು ತರುವುದಲ್ಲದೇ ನಗರದ ಶುಚಿತ್ವಕ್ಕೂ ತೊಂದರೆಯಾಗಿದೆ. ಇದರ ಬಳಕೆ ಸಂಪೂರ್ಣ ನಿಲ್ಲಿಸಿ ಪೂರ್ಣಪ್ರಮಾಣದಲ್ಲಿ ಬಟ್ಟೆ ಕವರ್ ತಯಾರಿಕೆಗೆ ಉತ್ತೇಜನ ನೀಡುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts