More

    ಬಸವ ಚಿಂತನೆ ಸರ್ವ ಕಾಲಕ್ಕೂ ಸತ್ಯ

    ಚಳ್ಳಕೆರೆ: ವಿಶ್ವಗುರು ಬಸವಣ್ಣನವರ ಸಾಮಾಜಿಕ ಚಿಂತನೆ, ತತ್ವಾದರ್ಶ ಸಾರ್ವತ್ರಿಕ ಸತ್ಯವಾದವು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

    ತಾಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸರಳ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬಸವಣ್ಣ ಅವರ ಸಮಾನತೆ ಚಿಂತನೆಯನ್ನು ಪ್ರತಿಯೊಬ್ಬರು ಬದುಕಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಸ್ಮರಣೆ, ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

    ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ, ಬಿಇಒ ಸಿ.ಎಸ್. ವೆಂಕಟೇಶ್, ತಾಪಂ ಸದಸ್ಯ ಜಿ. ವೀರೇಶ್, ನಗರಸಭೆ ಸದಸ್ಯರಾದ ಕೆ. ವೀರಭದ್ರಯ್ಯ, ಬಿ.ಟಿ. ರಮೇಶ್ ಗೌಡ, ಕೆ.ಸಿ. ನಾಗರಾಜ, ಸಾವಿತ್ರಮ್ಮ, ವೈ. ಪ್ರಕಾಶ್, ಮುಖಂಡರಾದ ಟಿ. ಪ್ರಭುದೇವ್, ಎಸ್.ಎಚ್. ಸೈಯದ್, ಗೀತಾಬಾಯಿ, ಕಿರಣ್ ಶಂಕರ್, ಎಚ್. ಗಂಗಣ್ಣ, ಗಾಂಧಿನಗರ ಕೃಷ್ಣ, ಬಸವಣ್ಣ, ಬೋರಯ್ಯ, ಮಂಜುನಾಥ ಇತರರಿದ್ದರು.

    ಆಹಾರದ ಕಿಟ್ ವಿತರಣೆ: ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಶ್ವಗುರು ಬಸವಣ್ಣ ಜಯಂತಿ ಅಂಗವಾಗಿ 250 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ಶಾಸಕ ಟಿ.ರಘುಮೂರ್ತಿ, ಬಿಜೆಪಿ ಮುಖಂಡ ಬಿ.ಎಸ್.ಶಿವಪುತ್ರಪ್ಪ, ದಲ್ಲಾಳರ ಸಂಘದ ಅಧ್ಯಕ್ಷ ಕೆ.ಎಂ.ಆರವಿಂದ್, ಮುಂಖಡರಾದ ಕೆ.ಎಂ. ಜಗದೀಶ್, ಎಚ್.ಗಂಗಣ್ಣ, ಶಿವಕುಮಾರ್, ಪ್ರಸನ್ನ ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts