More

    ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ

    ಚಳ್ಳಕೆರೆ: ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ, ಲಾಕ್‌ಡೌನ್‌ನಿಂದಾದ ಬೆಳೆನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

    ಹುಲಿಕುಂಟೆ, ಬೆಳಗೆರೆ, ಕಲಮರಹಳ್ಳಿ, ನಾರಾಯಣಪುರ, ಸೋಮಗುದ್ದು ಪಂಚಾಯಿತಿ ವ್ಯಾಪ್ತಿಯ ವಿವಿಧ ಜಮೀನುಗಳಿಗೆ ಭೇಟಿ ನೀಡಿದ್ದ ಶಾಸಕರ ಬಳಿ, ಹಲವು ರೈತರು ತಮಗಾದ ನಷ್ಟದ ಬಗ್ಗೆ ಹೇಳಿಕೊಂಡರು.

    ಒಂದು ದಿನಕ್ಕೆ 60 ರಿಂದ 70 ಕೆ.ಜಿ. ಹೂವು ಮಾರುತ್ತಿದ್ದೆ. ಕಷ್ಟಪಟ್ಟು ಬೆಳೆದ ಕಲ್ಲಂಗಡಿ, ಟೊಮ್ಯಾಟೊ ಫಸಲು ಮಾರುಕಟ್ಟೆ ಇಲ್ಲದ ಕಾರಣ ಹೊಲದಲ್ಲಿಯೇ ಬಿಟ್ಟಿದ್ದರಿಂದ ಸಂಪೂರ್ಣ ಹಾಳಾಗಿದೆ. ಬೆಳೆ ಬೆಳೆಯಲು ಮಾಡಿದ ಸಾಲ ಶೂಲವಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡರು.

    ಪ್ರತಿಕ್ರಿಯಿಸಿದ ಶಾಸಕರು, ಶೀಘ್ರವೇ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಬೆಳೆನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಈ ವರದಿಯನ್ನು ಟಾಸ್ಕ್‌ಫೋರ್ಸ್ ಸಮಿತಿ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಮುಖಂಡರಾದ ಮೆಡಿಕಲ್ ಕೇಶವ, ಎ.ನಾಗರಾಜ, ಮಲ್ಲಿಕಾರ್ಜುನ, ಬಿ.ಟಿ.ರಮೇಶ್‌ಗೌಡ, ಜಿ.ವೀರೇಶ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಕೃಷಿ ಇಲಾಖೆ ಕೆ.ಮೋಹನ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts