More

    ಶಿಕ್ಷಣದಿಂದ ಆರ್ಥಿಕ ಭದ್ರತೆ

    ಚಳ್ಳಕೆರೆ: ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಕುಟುಂಬದ ಭವಿಷ್ಯ ಭದ್ರ ಮಾಡಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ನಗರದ ದಲ್ಲಾಲರ ಸಮುದಾಯ ಭವನದಲ್ಲಿ ಎಐಟಿಯುಸಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ವಿತರಿಸಿ ಮಾತನಾಡಿದರು.

    ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಬಡವರ ಬಂಧು ಯೋಜನೆ ಜಾರಿ ಮಾಡಲಾಯಿತು. ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ ವಿವಿಧ ಯೋಜನೆ ಕಲ್ಪಿಸಲಾಗಿದೆ. ಬ್ಯಾಂಕ್ ಸಾಲ-ಸೌಲಭ್ಯವಿದೆ. ಫಲಾನುಭವಿಗಳಿಗೆ ವಸತಿ ಸೌಲಭ್ಯ ಸೇರಿ ಮೂಲ ಸೌಕರ್ಯಗಳ ಅನುಕೂಲ ಕಲ್ಪಿಸಲಾಗುವುದು. ಬೀದಿಬದಿ ವ್ಯಾಪಾರಸ್ಥರಿಗೆ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಇರಬೇಕು ಎಂದು ಹೇಳಿದರು.

    ಎಐಟಿಯುಸಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಅಸಂಘಟಿತ ಕಾರ್ಮಿಕರಲ್ಲಿ ಸಂಘಟನೆ ಮತ್ತು ಹೋರಾಟದ ಮನೋಭಾವನೆ ಇರಬೇಕು. ಕಷ್ಟಪಟ್ಟು ಸಂಪಾದನೆ ಮಾಡುವ ಕಾರ್ಮಿಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು ಎಂದರು.

    ಮುಖಂಡರಾದ ಸಿ.ವೈ.ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ನಗರಸಭಾ ಸದಸ್ಯರಾದ ಆರ್.ಮಂಜುಳಾ, ಎಂ.ಜೆ.ರಾಘವೇಂದ್ರ, ವಿರುಪಾಕ್ಷಪ್ಪ, ವೈ.ಪ್ರಕಾಶ್, ಬಿ.ಟಿ.ರಮೇಶ್‌ಗೌಡ, ಟಿ.ಮಲ್ಲಿಕಾರ್ಜುನ, ತಾಪಂ ಸದಸ್ಯ ಜಿ.ವೀರೇಶ್ ಮತ್ತಿತರರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts