More

    ಚಳ್ಳಕೆರೆ ಕುವೆಂಪು ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

    ಚಳ್ಳಕೆರೆ: ಶಿಕ್ಷಣ ಸೇರಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಹಾದಿ ತಲುಪಲು ಮುಖ್ಯವಾಗಿ ಆರೋಗ್ಯ ಬೇಕು. ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ ಹೇಳಿದರು.

    ನಗರದ ವಾಲ್ಮೀಕಿ ನಗರದಲ್ಲಿನ ಕುವೆಂಪು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತಮ ಆರೋಗ್ಯ ಇರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಗುಣಮಟ್ಟದ ಆಹಾರ ಅಗತ್ಯ. ಸೊಪ್ಪು, ತರಕಾರಿ, ಮೊಳಕೆಕಾಳು ಹೆಚ್ಚು ಬಳಸಬೇಕು ಎಂದರು.

    ಪ್ರಸ್ತುತ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಾಣುತ್ತಿದ್ದೇವೆ. ಪ್ರಾಥಮಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸ್ವಯಂ ಜಾಗೃತಿ ಇರಬೇಕು. ಜಂತುಹುಳು ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ವೈದ್ಯರ ಸಲಹೆ ಪಡೆದು ಮಾತ್ರೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ನಿವೃತ್ತ ಪ್ರಾಚಾರ್ಯ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಸಂಕಲ್ಪ ಇರಬೇಕು. ಸ್ಪರ್ಧಾ ಸಮಾಜದಲ್ಲಿ ಶಿಕ್ಷಣಕ್ಕೆ ಮಹತ್ವ ಇದೆ. ವಿದ್ಯಾರ್ಥಿ ದೆಸೆಯಲ್ಲಿ ಪರಿಶ್ರಮಪಡುವ ವಿದ್ಯಾರ್ಥಿಗಳು ಸಮಾಜ ಗುರುತಿಸುವ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.

    ಶಾಲಾ ಪರೀಕ್ಷೆಗಳು ಬದುಕು ರೂಪಿಸುವುದಕ್ಕೆ ಸೀಮಿತವಾಗದೆ ಸಮಾಜದ ಜವಾಬ್ದಾರಿ ಮತ್ತು ನೈತಿಕ ಪಾಠ ತಿಳಿಸುವ ಬದಲಾವಣೆಯ ಘಟ್ಟ ಆಗಬೇಕು ಎಂದರು.

    ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಡಾ. ಸಂದೀಪ್, ಡಾ.ಗೀತಾ, ಡಾ.ರಮೇಶ, ಡಾ.ಮಂಜುನಾಥ, ಕಾರ್ಯದರ್ಶಿ ಆರ್.ಕೃಷ್ಣಮೂರ್ತಿ, ವಿ.ತಿಪ್ಪೇಸ್ವಾಮಿ, ಎನ್.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts